ಎರಡನೇ ಅವಧಿಯಲ್ಲಿ ಮಾಡಿದ ತಪ್ಪಿನ ಸಹಾಯದಿಂದ ಬೆಂಗಳೂರು ಬುಲ್ಸ್ ಗೆಲ್ಲಬಹುದಾದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಡ್ರಾ ಸಾಧಿಸಿತು. 10ನೇ ಆವೃತ್ತಿ ಕಬಡ್ಡಿ ಟೂರ್ನಿಯ 98ನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ 29-29 ಅಂಕಗಳೊಂದಿಗೆ ಡ್ರಾ ಸಾಧಿಸಿತು. ಈ ಮೂಲಕ ಉಭಯ ತಂಡಗಳು ಅಂಕಗಳನ್ನು ಹಂಚಿಕೊಂಡವು.
ಈ ಪಂದ್ಯದಲ್ಲಿ ಡ್ರಾ ಸಾಧಿಸಿದ ಬಳಿಕ ಪಾಟ್ನಾ ಪೈರೇಟ್ಸ್ ಆಡಿದ 18 ಪಂದ್ಯಗಳಲ್ಲಿ 8 ಜಯ, 7 ಸೋಲು, 3 ಡ್ರಾ ಸಾಧಿಸಿದ್ದು 53 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಇನ್ನು ಬೆಂಗಳೂರು ಆಡಿದ 17 ಪಂದ್ಯಗಳಲ್ಲಿ 6 ಜಯ, 9 ಸೋಲು ಕಂಡಿದ್ದು 2 ಡ್ರಾ ಸಾಧಿಸಿದ್ದು 43 ಅಂಕಗಳೊಂದಿಗೆ ಏಳನೇ ಸ್ಥಾನದಲ್ಲಿದೆ.

ಬೆಂಗಳೂರು ಮೊದಲಾವಧಿಯಲ್ಲಿ ಅಬ್ಬರದ ಆಟವನ್ನು ಪ್ರದರ್ಶಿಸಿತು. ಈ ಅವಧಿಯಲ್ಲಿ ಬೆಂಗಳೂರು 16-13 ಅಂಕಗಳೊಂದಿಗೆ ಮುನ್ನಡೆ ಸಾಧಿಸಿತ್ತು. ಬೆಂಗಳೂರು ಬುಲ್ಸ್ ಈ ವೇಳೆ ದಾಳಿಯಲ್ಲಿ 10 ಅಂಕಗಳನ್ನು ಕಲೆ ಹಾಕಿದರೆ, ಆತಿಥೇಯ ಪಾಟ್ನಾ ತಂಡ 9 ಅಂಕಗಳನ್ನು ಕಲೆ ಹಾಕಿತು. ಇನ್ನು ಟ್ಯಾಕಲ್‌ನಲ್ಲಿ ಬುಲ್ಸ್ 4, ಪೈರೇಟ್ಸ್ 3 ಅಂಕವನ್ನು ಬಾಚಿಕೊಂಡಿತು. ಇನ್ನು ಪಾಟ್ನಾ ಪೈರೇಟ್ಸ್ ತಂಡವನ್ನು ಬೆಂಗಳೂರು ಬುಲ್ಸ್ ಒಮ್ಮೆ ಆಲೌಟ್ ಆಯಿತು.
ಎರಡನೇ ಅವಧಿಯಲ್ಲಿ ಪಾಟ್ನಾ ಪೈರೇಟ್ಸ್ ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡಿದರು. ಪಾಟ್ನಾ ಈ ಅವಧಿಯಲ್ಲಿ 16-13 ಅಂಕಗಳೊಂದಿಗೆ ಮುನ್ನಡೆ ಸಾಧಿಸಿ ಅಂಕಗಳನ್ನು ಹಂಚಿಕೊಳ್ಳುವ ಸಫಲವಾಯಿತು. ಈ ಅವಧಿಯಲ್ಲಿ ಪಾಟ್ನಾ ರೇಡಿಂಗ್‌ನಲ್ಲಿ 10, ಬುಲ್ಸ್ ಈ ಅವಧಿಯಲ್ಲಿ 7 ಅಂಕಗಳನ್ನು ಬಾಚಿಕೊಂಡರು.
ರಕ್ಷಣಾ ವಿಭಾಗದಲ್ಲಿ ಉಭಯ ತಂಡಗಳ ಸಮಬಲದ ಪ್ರದರ್ಶನ ನೀಡಿ ಗಮನ ಸೆಳೆದವು. ಈ ಅವಧಿಯಲ್ಲಿ ಉಭಯ ತಂಡಗಳು ಅಂಗಳವನ್ನು ಖಾಲಿ ಮಾಡಲಿಲ್ಲ. ಬೆಂಗಳೂರು ಬುಲ್ಸ್ ಪರ ಸುಶೀಲ್ 8, ಅಕ್ಷಿತ್ 6 ಅಂಕವನ್ನು ಕಲೆ ಹಾಕಿದರು. ಪಾಟ್ನಾ ಪರ ಸಂದೀಪ್ ಅಮೋಘ ದಾಳಿಯನ್ನು ಸಂಘಟಿಸಿ 14 ಅಂಕ ಕಲೆ ಹಾಕಿದರು.

ಇನ್ನು ಈ ಟೂರ್ನಿಯ 99ನೇ ಪಂದ್ಯದಲ್ಲಿ ಜೈಪುರ್ ಪಿಂಕ್ ಪ್ಯಾಂಥರ್ಸ್ 42-27 ರಿಂದ ತಮಿಳು ತಲೈವಾಸ್ ತಂಡವನ್ನು ಮಣಿಸಿ ಅಬ್ಬರಿಸಿತು. ಈ ಜಯದ ಮೂಲಕ ಜೈಪುರ್ ಪಿಂಕ್ ಪ್ಯಾಂಥರ್ಸ್ ಮುಂದಿನ ಹಂತಕ್ಕೆ ಅರ್ಹತೆ ಪಡೆಯಿತು.
ಆಡಿದ 17 ಪಂದ್ಯಗಳಲ್ಲಿ ಜೈಪುರ್ 12 ಜಯ, 2 ಸೋಲು, 3 ಡ್ರಾ ಕಂಡಿದ್ದು, 71 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಇನ್ನು ತಮಿಳು ತಲೈವಾಸ್ ತಂಡ ಟೂರ್ನಿಯಲ್ಲಿ 10ನೇ ಸೋಲು ಕಂಡಿತು.
ಪಂದ್ಯದ ಆರಂಭದಿಂದಲೂ ಜೈಪೂರ್ ಪಂದ್ಯದ ಮೇಲೆ ಬಿಗಿ ಹಿಡಿತ ಸಾಧಿಸಿತ್ತು. ಅಲ್ಲದೆ ಟೂರ್ನಿಯುದ್ದಕ್ಕೂ ನೀಡಿದ ಪ್ರದರ್ಶನವನ್ನೇ ಮುಂದುವರೆಸಿತು. ಜೈಪುರ್ ಹಾಗೂ ತಲೈವಾಸ್ ಒಟ್ಟು 44 ಬಾರಿ ಎದುರಾಳಿ ಕೋರ್ಟ್‌ಗೆ ಎಂಟ್ರಿ ನೀಡಿದವು. ಈ ವೇಳೆ ಜೈಪುರ್ 16, ತಲೈವಾಸ್ 14 ಅಂಕ ಸಂಪಾದಿಸಿದವು. ಟ್ಯಾಕಲ್‌ನಲ್ಲಿ ಜೈಪುರ್ ಎದುರಾಳಿ ರಣ ತಂತ್ರವನ್ನು ಬೇಧಿಸಿ ಆಡಿತು. ಫಲವಾಗಿ ಅಂಕಗಳಿಕೆಯಲ್ಲಿ ಮುನ್ನಡೆ ಸಾಧಿಸಿತು.
ವಿಜೇತ ತಂಡದ ಪರ ಅರ್ಜುನ್ ದೇಶ್ವಲ್ 13, ವಿ ಅಜೀತ್ 9 ಅಂಕವನ್ನು ಕಲೆ ಹಾಕಿದರು. ಪರಾಜಿತ್ ತಂಡದ ಪರ ನರೇಂದ್ರ 12 ಅಂಕ ಕಲೆ ಹಾಕಿ ಸೋಲಿನಲ್ಲಿ ಮಿಂಚಿದರು.