Pro Kabaddi 2023: ಪುಣೇರಿ, ದಬಾಂಗ್ ಡೆಲ್ಲಿಗೆ ಭರ್ಜರಿ ಜಯ
ಪ್ರೊ ಕಬಡ್ಡಿ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಪುಣೇರಿ ಪಲ್ಟನ್, ದಬಾಂಗ್ ಡೆಲ್ಲಿ ತಂಡಗಳು ಜಯ ಸಾಧಿಸಿವೆ.
ಶನಿವಾರ ನಡೆದ ಮೊದಲ ಪಂದ್ಯದಲ್ಲಿ ಪುಣೇರಿ ಪಲ್ಟನ್ 49-19 ಅಂಕಗಳಿಂದ ಬೆಂಗಾಲ್ ವಾರಿಯರ್ಸ್ ತಂಡವನ್ನು ಮಣಿಸಿತು. ಈ ಗೆಲುವಿನ ಮೂಲಕ ಪುಣೇರಿ ತಂಡ ಆಡಿದ ನಾಲ್ಕು ಪಂದ್ಯಗಳಲ್ಲಿ ಮೂರನೇ ಜಯ ದಾಖಲಿಸಿ, 16 ಅಂಗಳೊಂದಿಗೆ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಬಡ್ತಿ ಪಡೆಯಿತು. ಈ ಪಂದ್ಯದಲ್ಲಿ ಸೋತ ಬೆಂಗಾಲ್ ಟೂರ್ನಿಯಲ್ಲಿ ಮೊದಲ ಸೋಲಿಗೆ ಶರಣಾಯಿತು. ಆದರೂ ಬೆಂಗಾಲ್ ವಾರಿಯರ್ಸ್ ಮೊದಲ ಸ್ಥಾನವನ್ನು ಕಾಯ್ದುಕೊಂಡಿದೆ.

ಪಂದ್ಯದ ಆರಂಭದಿಂದಲೂ ಉಭಯ ತಂಡಗಳು ಭರ್ಜರಿ ಪ್ರದರ್ಶನ ನೀಡಿದವು. ಆದರೆ ಪುಣೇರಿ, ಬೆಂಗಾಲ್ ತಂಡದ ತಂತ್ರವನ್ನು ಅರ್ಥ ಮಾಡಿಕೊಂಡು ಆಡಿತು. ಪರಿಣಾಮ ಮೊದಲಾವಧಿಯಲ್ಲಿ 20-12 ಅಂಕಗಳೊಂದಿಗೆ ಮುನ್ನಡೆ ಪಡೆಯಿತು. ಈ ಅವಧಿಯಲ್ಲಿ ಪುಣೇರಿ ದಾಳಿಯಲ್ಲಿ 6 ಅಂಕಗಳನ್ನು ಕಲೆ ಹಾಕಿದರೆ, ಟ್ಯಾಕಲ್‌ನಲ್ಲಿ 12 ಅಂಕಗಳನ್ನು ಕಲೆ ಹಾಕಿತು.
ಎರಡನೇ ಅವಧಿಯಲ್ಲಿ ಪುಣೇರಿ ಪಲ್ಟನ್ ಅಬ್ಬರದ ಆಟಕ್ಕೆ ಮಣೆ ಹಾಕಿತು. ಈ ಅವಧಿಯಲ್ಲೂ ಪುಣೇರಿ ಎದುರಾಳಿ ತಂಡಕ್ಕೆ ಅಂಕಗಳನ್ನು ಸುಲಭವಾಗಿ ಬಿಟ್ಟುಕೊಡಲಿಲ್ಲ. ಪರಿಣಾಮ ಪಲ್ಟನ್ 29-7 ಅಂಕಗಳೊಂದಿಗೆ ಮುನ್ನಡೆ ಸಾಧಿಸಿ ಸುಲಭ ಜಯ ಸಾಧಿಸಿತು.
ಈ ವೇಳೆ ದಾಳಿಯಲ್ಲಿ ಪುಣೇರಿ 10, ಟ್ಯಾಕಲ್‌ನಲ್ಲಿ 12 ಅಂಕಗಳನ್ನು ಕಲೆ ಹಾಕಿತು. ಕೊನೆಯ 20 ನಿಮಿಷದಲ್ಲಿ ಮೂರು ಬಾರಿ ಎದುರಾಳಿ ತಂಡವನ್ನು ಆಲೌಟ್ ಮಾಡಿದ ಪುಣೇರಿ ಆರ್ಭಟಿಸಿತು.

ಪುಣೇರಿ ಪರ ಮೋಹಿತ್ 12, ಅಸ್ಲಂ ಮುಷ್ತಫ್ 10 ಅಂಕಗಳನ್ನು ಕಲೆ ಹಾಕಿ ಜಯದಲ್ಲಿ ಮಿಂಚಿದರು. ಮನಿಂದರ್ ಪರ ಬೆಂಗಾಲ್ ಪರ ಸೋಲಿನಲ್ಲೂ ಎಲ್ಲರ ಚಿತ್ತ ಕದ್ದರು.
ತೆಲುಗು ಟೈಟನ್ಸ್‌ಗೆ ಸೋಲು
ಎರಡನೇ ಪಂದ್ಯದಲ್ಲಿ ದಬಾಂಗ್ ದೆಹಲಿ 51-40 ಅಂಕಗಳೊಂದಿಗೆ ತೆಲುಗು ಟೈಟನ್ಸ್ ತಂಡವನ್ನು ಮಣಿಸಿತು. ಈ ಮೂಲಕ ದಬಾಂಗ್ ಟೂರ್ನಿಯಲ್ಲಿ ಎರಡನೇ ಜಯ ದಾಖಲಿಸಿ ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ. ತೆಲುಗು ಟೈಟನ್ಸ್ ತಂಡದ ಮೊದಲ ಜಯದ ಹುಡುಕಾಟ ಇನ್ನು ಮುಂದುವರೆದಿದೆ.
ತೆಲುಗು ಟೈಟನ್ಸ್ ಒಟ್ಟಾರೆ ಪಂದ್ಯದಲ್ಲಿ 44 ಬಾರಿ ಎದುರಾಳಿ ಕೋರ್ಟ್‌ಗೆ ಎಂಟ್ರಿ ನೀಡಿ 21 ಅಂಕ ಪಡೆಯಿತು. ದಬಾಂಗ್ ತಂಡ ಇಷ್ಟೇ ಅವಕಾಶದಲ್ಲಿ 23 ಅಂಕಗಳನ್ನು ಕಲೆ ಹಾಕಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications