Pro Kabaddi: ಬುಲ್ಸ್ ಮಣಿಸಿದ ಪುಣೇರಿಗೆ ಅಗ್ರ ಸ್ಥಾನ
ಶುಕ್ರವಾರ ನಡೆದ ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಬೆಂಗಳೂರು ಬುಲ್ಸ್ ಮತ್ತೊಂದು ಸೋಲು ಕಂಡಿದೆ. ಈ ಮೂಲಕ ಟೂರ್ನಿಯಲ್ಲಿ ಬುಲ್ಸ್ ನಾಲ್ಕನೇ ಸೋಲು ಕಂಡಂತೆ ಆಗಿದೆ. ಬುಲ್ಸ್ ತಂಡವನ್ನು ಮಣಿಸಿ ಪುಣೇರಿ ಪಲ್ಟಾನ್ ಅಂಕಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆದಿದೆ.
ಶುಕ್ರವಾರದ ಎರಡನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ 22-36 ರಿಂದ ಪುಣೇರಿ ಪಲ್ಟಾನ್ ವಿರುದ್ಧ ಸೋಲು ಕಂಡಿತು. ಟೂರ್ನಿಯಲ್ಲಿ ಬುಲ್ಸ್ ಸತತ ನಾಲ್ಕನೇ ಸೋಲನ್ನು ಅಪ್ಪಿಕೊಂಡಿದೆ. ಈ ಮೂಲಕ ಮೊದಲ ಪೂರ್ತಿ ಅಂಕ ಸಂಪಾದಿಸುವ ಬೆಂಗಳೂರು ಕನಸಿಗೆ ಪೆಟ್ಟು ಬಿದ್ದಿತ್ತು.

ಪುಣೇರಿ ಪಲ್ಟಾನ್ ಆರಂಭದಿಂದಲೂ ಅಮೋಘ ಅಟದ ಪ್ರದರ್ಶನ ನೀಡಿ ಅಂಕ ಬೇಟೆಯಲ್ಲಿ ಮುನ್ನಡೆ ಸಾಧಿಸಿತು. ಈ ಅವಧಿಯಲ್ಲಿ ಪುಣೇರಿ 18-11 ಅಂಕಗಳಿಂದ ಮುನ್ನಡೆ ಕಾಯ್ದುಕೊಂಡಿತು. ದಾಳಿಯಲ್ಲಿ ಪುಣೇರಿ 8 ಅಂಕ ಸಂಪಾದಿಸಿದರೆ, ಬೆಂಗಳೂರು ಕೇವಲ 4 ಅಂಕ ಕಲೆ ಹಾಕಿತು. ಟ್ಯಾಕಲ್‌ನಲ್ಲೂ ಬುಲ್ಸ್ ಅಂಕ ಬೇಟೆಯಲ್ಲಿ ಹಿನ್ನಡೆ ಅನುಭವಿಸಿತು. ಈ ಅವಧಿಯಲ್ಲಿ ಒಂದು ಬಾರಿ ಆಲೌಟ್ ಆದ ಬುಲ್ಸ್ ಬೋನ್ಸ್ ಅಂಕವನ್ನು ಎದುರಾಳಿಗೆ ಬಿಟ್ಟುಕೊಟ್ಟಿತು.
ಎರಡನೇ ಅವಧಿಯ ಆಟದಲ್ಲೂ ಬುಲ್ಸ್ ಸ್ಥಿರ ಪ್ರದರ್ಶನವನ್ನು ನೀಡಿ ಅಂಕಗಳ ಬೇಟೆ ನಡೆಸುವಲ್ಲಿ ವಿಫಲವಾಯಿತು. ಕೊನೆಯ 20 ನಿಮಿಷದ ಆಟದಲ್ಲಿ ಪುಣೇರಿ 18-11 ಅಂಕಗಳಿಂದ ಬುಲ್ಸ್ ವಿರುದ್ಧ ಅಬ್ಬರಿಸಿತು. ಈ ಅವಧಿಯಲ್ಲಿ ಪುಣೇರಿ ಟ್ಯಾಕಲ್ ಹಾಗೂ ದಾಳಿಯಲ್ಲಿ ಅಮೋಘ ಪ್ರದರ್ಶನ ನೀಡಿತು. ಪರಿಣಾಮ ಅಂಕ ಬೇಟೆಯಲ್ಲಿ ಮುನ್ನಡೆ ಸಾಧಿಸಿ ಜಯ ಸಾಧಿಸಿತು. ಪಂದ್ಯದಲ್ಲಿ ಪುಣೇರಿ ತಂಡದ ದಾಳಿ ಹಾಗೂ ಟ್ಯಾಕಲ್ ಮನಮೋಹವಾಗಿತ್ತು.
ಮಹತ್ವದ ಪಂದ್ಯದಲ್ಲಿ ಬೆಂಗಳೂರು ಪರ ಪ್ರದೀಪ್ ನರ್ವಾಲ್ ಅಂಕಗಳನ್ನು ಕಲೆ ಹಾಕುವಲ್ಲಿ ವಿಫಲರಾದರು. ಆಲ್‌ರೌಂಡರ್ ಪಂಕಜ್ 6 ಅಂಕ ಕಲೆ ಹಾಕಿ ಸೋಲಿನಲ್ಲಿ ಮಿಂಚಿದರು. ವಿಜೇತ ತಂಡದ ಪರ ಆಲ್‌ರೌಂಡರ್ ಪ್ರದರ್ಶನ ಮೂಡಿ ಬಂದಿದ್ದರಿಂದ ಈ ಗೆಲುವು ಸಾಧ್ಯವಾಯಿತು.

ಪಾಟ್ನಾಗೆ ಜಯ
ಇದಕ್ಕೂ ಮೊದಲು ನಡೆದ ಮೊದಲ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್, ತಮಿಳು ತಲೈವಾಸ್ ವಿರುದ್ಧ ಜಿದ್ದಾಜಿದ್ದಿನ ಫೈಟ್ ಗೆದ್ದಿತು. 11ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನ 15ನೇ ಪಂದ್ಯದಲ್ಲಿ ಪಾಟ್ನಾ ಅಬ್ಬರಿಸಿತು. ಈ ಪಂದ್ಯದಲ್ಲಿ ಪಾಟ್ನಾ 42-20 ಅಂಕಗಳಿಂದ ತಮಿಳು ತಲೈವಾಸ್ ವಿರುದ್ಧ ಜಯ ಸಾಧಿಸಿತು.
ವಿಜೇತ ತಂಡದ ಪರ ದೇವಾಂಕ್ ಅಮೋಘ ದಾಳಿ ನಡೆಸಿ 25 ಅಂಕ ಕಲೆ ಹಾಕಿದರು. ತೈಲವಾಸ್ ಪರ ನರೇಂದ್ರ ಕಂಡೋಲಾ 15 ಅಂಕ ಸೇರಿಸಿ ಸೋಲಿನಲ್ಲಿ ಮಿಂಚಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications