Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Pro Kabaddi: ತಲೈವಾಸ್‌ ಮಣಿಸಿದ ಪುಣೇರಿಯ ಅಗ್ರ ಸ್ಥಾನ ಭದ್ರ

10ನೇ ಆವೃತ್ತಿಯ ಪ್ರೊ ಕಬಡ್ಡಿ 60ನೇ ಪಂದ್ಯದಲ್ಲಿ ಪುಣೇರಿ ಪಲ್ಟನ್‌ 29-26 ರಿಂದ ತಮಿಳು ತಲೈವಾಸ್ ವಿರುದ್ಧ ಭರ್ಜರಿ ಜಯ ಸಾಧಿಸಿತು. ಅಲ್ಲದೆ ಪುಣೇರಿ ಅಂಕ ಪಟ್ಟಿಯಲ್ಲಿ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನ ಭಧ್ರ ಪಡಿಸಿಕೊಂಡಿತು.

ಈ ಜಯದೊಂದಿಗೆ ಪುಣೇರಿ ಪಲ್ಟನ್‌ ಆಡಿದ 10 ಪಂದ್ಯಗಳಲ್ಲಿ 9 ಜಯ, 1 ಸೋಲು ಕಂಡಿದ್ದು 46 ಅಂಕಗಳನ್ನು ಕಲೆ ಹಾಕಿದೆ. ತಮಿಳು ತಲೈವಾಸ್ ಮೂರನೇ ಗೆಲುವಿನ ಆಸೆ ಮುಂದಿನ ಪಂದ್ಯಕ್ಕೆ ಶಿಫ್ಟ್ ಆಗಿದೆ.

Pro Kabaddi: Puneri Paltan Beat Tamil Thalaivas

ಮೊದಲಾವಧಿಯ 20 ನಿಮಿಷದಲ್ಲಿ ಉಭಯ ತಂಡಗಳು ಅಂಕಗಳನ್ನು ಸುಲಭವಾಗಿ ಅಂಕಗಳನ್ನು ಬಿಟ್ಟುಕೊಡಲಿಲ್ಲ. ಈ ಅವಧಿಯಲ್ಲಿ ಜಿದ್ದಾಜಿದ್ದಿನ ಪಂದ್ಯ ಕಂಡು ಬಂದಿತು. ಪುಣೇರಿಗಿಂತ, ತಲೈವಾಸ್‌ ತಂಡದ ದಾಳಿ ಅಮೋಘವಾಗಿತ್ತು. ಮೊದಲಾವಧಿಯಲ್ಲಿ ಪುಣೇರಿ 12-11 ರಿಂದ ಅಲ್ಪ ಮುನ್ನಡೆ ಸಾಧಿಸಿತು. ಈ ಅವಧಿಯ ಆಟ ಅಭಿಮಾನಿಗಳನ್ನು ಕುರ್ಚಿಯ ತುದಿಯಲ್ಲಿ ಕುಳಿತುಕೊಳ್ಳುವಂತೆ ಮಾಡಿತ್ತು.

ಎರಡನೇ ಅವಧಿಯಲ್ಲೂ ಇದೇ ರೀತಿಯ ಆಟ ಕಂಡು ಬಂದಿತು. ಆದರೆ ಕೊನೆಯ ಕ್ಷಣದವರೆಗೂ ಸ್ಥಿರ ಪ್ರದರ್ಶನ ನೀಡಿದ ಪುಣೇರಿ ಅಂಕಗಳ ಬೇಟೆಯಲ್ಲಿ ಮುನ್ನಡೆ ಕಾಯ್ದುಕೊಂಡಿತು. ಪುಣೇರಿ ಈ ಅವಧಿಯಲ್ಲಿ 17-15 ಅಂಕಗಳಿಂದ ಮುನ್ನಡೆ ಸಾಧಿಸಿ ಜಯ ಸಾಧಿಸಿತು.

ಪುಣೇರಿ ಒಟ್ಟಾರೆ 46 ಬಾರಿ ಎದುರಾಳಿ ಕೋರ್ಟ್‌ಗೆ ಎಂಟ್ರಿ ನೀಡಿ 11 ಅಂಕಗಳನ್ನು ಕಲೆ ಹಾಕಿತು. ಇದರಲ್ಲಿ ಒಂದು ಸೂಪರ್ ರೇಡ್ ಸಹ ಸೇರಿದೆ. ತಮಿಳು ತಲೈವಾಸ್ 7 ಅಂಕ ದಾಳಿಯಲ್ಲಿ ಸೇರಿಸಿತು. ಟ್ಯಾಕಲ್‌ನಲ್ಲಿ ಪುಣೇರಿ 13, ತಮಿಳು ತಲೈವಾಸ್ 9 ಅಂಕ ಪೇರಿಸಿತು.

Pro Kabaddi: Puneri Paltan Beat Tamil Thalaivas

ಬೆಂಗಾಲ್‌ಗೆ ಆಘಾತ

ಭಾನುವಾರ ನಡೆದ ಎರಡನೇ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್‌ ಅಮೋಘ ಆಟದ ಪ್ರದರ್ಶನ ನೀಡಿ, ಬೆಂಗಾಲ್ ವಾರಿಯರ್ಸ್ ತಂಡವನ್ನು ಮಣಿಸಿತು. ನಿಗದಿತ ಸಮಯದಲ್ಲಿ ಹರಿಯಾಣ 41-35 ರಿಂದ ಬೆಂಗಾಲ್ ತಂಡವನ್ನು ಸೋಲಿಸಿತು. ಹರಿಯಾಣ ಆಡಿದ 10 ಪಂದ್ಯಗಳಲ್ಲಿ 6 ಜಯ, 4 ಸೋಲು ಕಂಡಿದ್ದು 31 ಅಂಕಗಳೊಂದಿಗೆ ಅರನೇ ಸ್ಥಾನದಲ್ಲಿದೆ. ಬೆಂಗಾಲ್‌ ವಾರಿಯರ್ಸ್‌ ಆಡಿದ 10 ಪಂದ್ಯಗಳಲ್ಲಿ 3 ಜಯ, 5 ಸೋಲು, 2 ಡ್ರಾ ಸಾಧಿಸಿದ್ದು 23 ಅಂಕಗಳೊಂದಿಗೆ 9ನೇ ಸ್ಥಾನದಲ್ಲಿದೆ.

ಹರಿಯಾಣ ಸ್ಟೀಲರ್ಸ್‌ ತಂಡದ ಪರ ಚಂದ್ರನ್ ರಂಜಿತ್ ಹಾಗೂ ಶಿವಂ ಪಿ ತಲಾ ಏಳು ಅಂಕಗಳನ್ನು ಕಲೆ ಹಾಕಿದರು. ಬೆಂಗಾಲ್‌ ಪರ ಶ್ರೀಕಾಂತ್ ಜಾದವ್ 10 ಅಂಕ ಕಲೆ ಹಾಕಿ ಸೋಲಿನಲ್ಲಿ ಮಿಂಚಿದರು.

Story first published: Monday, January 8, 2024, 6:35 [IST]
Other articles published on Jan 8, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+