Pro Kabaddi: ತೆಲುಗು ಮಣಿಸಿದ ಪುಣೇರಿಗೆ ಅಗ್ರ ಸ್ಥಾನ
ಭರವಸೆಯ ಆಟಗಾರ ಆಕಾಶ್ ಶಿಂದೆ ಅವರ ಅಬ್ಬರದ ಆಟದ ನೆರವಿನಿಂದ ಪುಣೇರಿ ಪಲ್ಟನ್ 60-29 ರಿಂದ ತೆಲುಗು ಟೈಟನ್ಸ್ ತಂಡವನ್ನು ಮಣಿಸಿ ಅಬ್ಬರಿಸಿತು.
ಈ ಗೆಲುವಿನೊಂದಿಗೆ ಪುಣೇರಿ ಪಲ್ಟನ್ ಆಡಿದ 16 ಪಂದ್ಯಗಳಲ್ಲಿ 12 ಜಯ, 2 ಸೋಲು, 2 ಡ್ರಾ ಸಾಧಿಸಿದ್ದು, 68 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಬಡ್ತ ಪಡೆದಿದೆ. ಇನ್ನು ತೆಲುಗು ಟೈಟನ್ಸ್ ತಂಡದ ಮೂರನೇ ಗೆಲುವಿನ ಕನಸು ನುಚ್ಚುನೂರಾಗಿದೆ.

ಪುಣೇರಿ ಪಲ್ಟನ್ ಮೊದಲಾವಧಿಯಲ್ಲೇ ಅಬ್ಬರದ ಆಟವನ್ನು ಆಡಿತು. ಈ ಅವಧಿಯಲ್ಲಿ ದಾಳಿ ಹಾಗೂ ಟ್ಯಾಕಲ್ ನಲ್ಲಿ ಆರ್ಭಟ ನಡೆಸಿತು. ಪುಣೇರಿ ಮೊದಲ 20 ನಿಮಿಷದಲ್ಲಿ 23 ಅಂಕಗಳ ಮುನ್ನಡೆ ಸಾಧಿಸಿತು. ಮೊದಲಾವಧಿಯಲ್ಲಿ ಪುಣೇರಿ 29-6 ಅಂಕಗಳನ್ನು ಕಲೆ ಹಾಕಿ ಮುನ್ನಡೆ ಸಾಧಸಿತು. ಈ ವೇಳೆ ದಾಳಿಯಲ್ಲಿ ಪಲ್ಟನ್ 15, ಟ್ಯಾಕಲ್ 10 ಹಾಗೂ ಎರಡು ಬಾರಿ ಎದುರಾಳಿ ಅಂಗಳವನ್ನು ಖಾಲಿ ಮಾಡಿತು. ಈ ಮೂಲಕ 4 ಅಂಕ ಕಲೆ ಹಾಕಿ ಅಬ್ಬರಿಸಿತು.
ಎರಡನೇ ಅವಧಿಯಲ್ಲಿ ತೆಲುಗು ಅಬ್ಬರದ ಆಟವನ್ನು ಪ್ರದರ್ಶಿಸುವ ಪ್ಲ್ಯಾನ್ ಹಾಕಿಕೊಂಡಿತು. ಪರಿಣಾಮ ಈ ಅವಧಿಯಲ್ಲಿ ಅಂಕಗಳ ಹಿನ್ನಡೆಯನ್ನು ಕುಗ್ಗೊಸುವ ಪ್ಲ್ಯಾನ್ ಮಾಡಿಕೊಂಡಿತು. ಆದರೆ ಟೈಟನ್ಸ್ ಅಂಕಗಳಿಸುವ ಆಸೆ ಫಲಿಸಲಿಲ್ಲ. ಈ ಅವಧಿಯಲ್ಲಿ ಪಲ್ಟನ್ 31-23 ರಿಂದ ಅಂಕಗಳಿಂದ ಮುನ್ನಡೆ ಸಾಧಿಸಿತು. ಈ ವೇಳೆ ಉಭಯ ತಂಡಗಳು ಸಮಬಲದ ದಾಳಿಯನ್ನು ನಡೆಸಿ ಅಬ್ಬರಿಸಿತು. ಟ್ಯಾಕಲ್‌ನಲ್ಲಿ ಪುಣೇರಿ 10 ಅಂಕಗಳನ್ನು ಕಲೆ ಹಾಕಿತು.

ಒಟ್ಟಾರೆ ಪುಣೇರಿ ಹಾಗೂ ತೆಲುಗು ಒಟ್ಟು 50 ಬಾರಿ ಎದುರಾಳಿ ಅಂಗಳಕ್ಕೆ ಎಂಟ್ರಿ ನೀಡಿದವು. ಈ ವೇಳೆ ಪುಣೇರಿ 21, ತೆಲುಗು 11 ಅಂಕ ಸೇರಿಸಿತು. ಇನ್ನು ಪುಣೇರಿ ಪಲ್ಟನ್ ದಾಳಿಯಲ್ಲಿ 19 ಅಂಕ ಕಲೆ ಹಾಕಿ ಅಬ್ಬರಿಸಿತು. ವಿಜೇತ ತಂಡದ ಪರ ಆಕಾಶ್ ಶಿಂದೆ 11, ಮೋಹಿತ್ ಗೋಯತ್ 8 ಅಂಕ ಕಲೆ ಹಾಕಿ ಗೆಲುವಿನಲ್ಲಿ ಮಿಂಚಿದರು.
ಇಂದು ಬುಲ್ಸ್, ಪಾಟ್ನಾ ಫೈಟ್
ಬುಧವಾರ ನಡೆಯಲಿರುವ 10ನೇ ಆವೃತ್ತಿಯ ಪ್ರೊ ಕಬಡ್ಡಿ ಟೂರ್ನಿಯ 98ನೇ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಪಾಟ್ನಾ ಪೈರೇಟ್ಸ್ ಹಾಗೂ ಬೆಂಗಳೂರು ಬುಲ್ಸ್ ತಂಡಗಳು ಕಾದಾಟ ನಡೆಸಲಿವೆ. ಇನ್ನು ಎರಡನೇ ಪಂದ್ಯದಲ್ಲಿ ಜೈಪುರ್ ಪಿಂಕ್ ಪ್ಯಾಂಥರ್ಸ್ ಹಾಗೂ ತಮಿಳು ತಲೈವಾಸ್ ತಂಡಗಳು ಫೈಟ್ ನಡೆಸಲಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications