Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Pro Kabaddi: ಬಂಗಾಳ ತಂಡಕ್ಕೆ ಸೋಲಿನ ಶಾಕ್ ನೀಡಿದ ಪುಣೇರಿ ಪಲ್ಟನ್‌

10ನೇ ಆವೃತ್ತಿಯ ಪ್ರೋ ಕಬಡ್ಡಿ ಟೂರ್ನಿಯ 121ನೇ ಪಂದ್ಯದ ನೇತಾಜಿ ಇಂದೋರ್‌ ಕ್ರೀಡಾಂಗಣದಲ್ಲಿ ನಡೆದಿದ್ದು, ಪುಣೇರಿ ಪಲ್ಟನ್‌ 29-26 ಅಂಕಗಳಿಂದ ಬಂಗಾಳ ತಂಡವನ್ನು ಮಣಿಸಿ ಅಗ್ರ ಸ್ಥಾನಕ್ಕೆ ಬಡ್ತಿ ಪಡೆಯಿತು.

ಈ ಜಯದ ಮೂಲಕ ಪುಣೇರಿ ಆಡಿದ 20 ಪಂದ್ಯಗಳಲ್ಲಿ 15 ಜಯ, 2 ಸೋಲು, ಮೂರು ಡ್ರಾ ಸಾಧಿಸಿದ್ದು, 86 ಅಂಕಗಳನ್ನು ಕಲೆ ಹಾಕಿದ್ದು, ಸದ್ಯ ಮೊದಲ ಸ್ಥಾನದಲ್ಲಿದೆ. ಇನ್ನು ಬಂಗಾಳ ತಂಡ ಆಡಿದ 21 ಪಂದ್ಯದಲ್ಲಿ 9 ಗೆಲುವು, 10 ಸೋಲು, 2 ಡ್ರಾ ಸಾಧಿಸಿದ್ದು, 55 ಅಂಕ ಗಳೊಂದಿಗೆ ಏಳನೇ ಸ್ಥಾನದಲ್ಲಿದೆ. ಬಂಗಾಳ ಪ್ಲೇ ಆಫ್‌ ಪ್ರವೇಶಿಸುವುದು ಕಷ್ಟವಿದೆ. ಆದರೆ ಅಸಾಧ್ಯವಲ್ಲ.

Pro Kabaddi: Puneri Paltan shocks the Bengal Warriors

ಪುಣೇರಿ ತಂಡದ ಪರ ಆಕಾಶ್ ಶಿಂದೆ ಸೂಪರ್ 10 ಸಾಧನೆ ಮಾಡಿದರು. ಅಲ್ಲದೆ ಪಂಕಜ್ ಮೋಹಿತ್ 6 ಅಂಕಗಳನ್ನು ಕಲೆ ಹಾಕಿ ಜಯದಲ್ಲಿ ಮಿಂಚಿದರು. ಪರಾಜಿತ ತಂಡದ ಪರ ನಿತಿನ್ ಕುಮಾರ್ 5, ಮಣಿಂದರ್ 4 ಅಂಕ ಕಲೆ ಹಾಕಿ ಸೋಲಿನಲ್ಲಿ ಮಿಂಚಿದರು.

ಪಂದ್ಯದ ಆರಂಭದಿಂದಲೂ ಪುಣೇರಿ ಅಬ್ಬರದ ಪ್ರದರ್ಶನವನ್ನು ನೀಡಿತು. ಅಲ್ಲದೆ ಅಂಕಗಳಿಕೆಯಲ್ಲಿ ಮುನ್ನಡೆ ಸಾಧಿಸಿತು. ಈ ಅವಧಿಯಲ್ಲಿ ದಾಳಿ ಹಾಗೂ ರಕ್ಷಣಾ ವಿಭಾಗದಲ್ಲಿ ಸಮಬಲದ ಪ್ರದರ್ಶನ ನೀಡಿದ ಪುಣೇರಿ ಅಬ್ಬರಿಸಿತು. ಅಲ್ಲದೆ ಮೊದಲಾವಧಿಯಲ್ಲಿ ಬಂಗಾಳ ತಂಡವನ್ನು ಒಮ್ಮೆ ಆಲೌಟ್ ಮಾಡಿ ಬೋನಸ್ ಅಂಕವನ್ನು ಸಹ ಕಲೆ ಹಾಕಿತು. ಬಂಗಾಳ ಅಂಕ ಗಳಿಕೆಯಲ್ಲಿ ಭಾರೀ ಹಿನ್ನಡೆ ಅನುಭವಿಸಿತು.

ಎರಡನೇ ಅವಧಿಯಲ್ಲಿ ಯೋಜನಾ ಬದ್ಧ ಆಟವನ್ನು ಆಡಿ ಅಬ್ಬರಿಸಿತು. ಅಲ್ಲದೆ ಪುಣೇರಿ ತಂಡಕ್ಕೆ ಅಂಕಗಳನ್ನು ಸುಲಭವಾಗಿ ಬಿಟ್ಟುಕೊಡಲಿಲ್ಲ. ಪರಿಣಾಮ ಮೊದಲಾವಧಿಯಲ್ಲಿ ಸಾಧಿಸಿದ್ದ ಅಂಕಗಳ ಅಂತರವನ್ನು ಕಡಿಮೆ ಮಾಡಲು ಪ್ರಯತ್ನ ನಡೆಸಿತು. ಈ ಅವಧಿಯಲ್ಲಿ ದಾಳಿಯಲ್ಲಿ ಅಮೋಘ ಪ್ರದರ್ಶನ ನೀಡಿ ಅಂಕಗಳನ್ನು ಕಲೆ ಹಾಕಿತು. ಆದರೆ ರಕ್ಷಣಾ ವಿಭಾಗದ ಆಟಗಾರರು ಕೊಂಚ ತಂಡಕ್ಕೆ ನೆರವು ನೀಡಿದ್ದರೆ, ತಂಡದ ಗೆಲುವಿನ ಆಸೆ ಫಲಿಸಿತ್ತು. ಆದರೆ, ಈ ಅವಧಿಯಲ್ಲಿ ಬಂಗಾಳ ತಂಡ ಒಂದೇ ಒಂದು ಟ್ಯಾಕಲ್‌ ಪಾಯಿಂಟ್ ಗಳಿಸಲಿಲ್ಲ. ಪರಿಣಾಮ ಪಂದ್ಯವನ್ನು ಸೋತಿತು.

Pro Kabaddi: Puneri Paltan shocks the Bengal Warriors

ದಬಾಂಗ್‌ಗೆ ಜಯ

ಇದಕ್ಕೂ ಮೊದಲು ನಡೆದ ಪಂದ್ಯದಲ್ಲಿ ದಬಾಂಗ್ ದೆಹಲಿ 45-43 ರಿಂದ ತಮಿಳು ತಲೈವಾಸ್ ತಂಡವನ್ನು ಮಣಿಸಿತು. ದಬಾಂಗ್‌ ದೆಹಲಿ ಆಡಿದ 21 ಪಂದ್ಯಗಳಲ್ಲಿ 12 ಗೆಲುವು, 6 ಸೋಲು, 3 ಡ್ರಾ ಸಾಧಿಸಿದ್ದು, 74 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದೆ. ಈ ಮೂಲಕ ದೆಹಲಿ ಈಗಾಗಲೇ ಪ್ಲೇಆಫ್‌ಗೆ ಪ್ರವೇಶ ಪಡೆದಿದೆ. ಇನ್ನು ಟೂರ್ನಿಯಲ್ಲಿ 9ನೇ ಗೆಲುವಿನ ಆಸೆಯನ್ನು ಕಾಣುತ್ತಿದ್ದ ತಮಿಳು ತಲೈವಾಸ್ ಆಸೆ ಕಮರಿದೆ.

Story first published: Thursday, February 15, 2024, 7:00 [IST]
Other articles published on Feb 15, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+