ಅಕ್ಟೋಬರ್ 19ರಿಂದ ಪ್ರೊ ಕಬಡ್ಡಿ ಸೀಸನ್ - 6 ಆರಂಭ

ಮುಂಬೈ, ಜನವರಿ 18: ಇದೇ ಅಕ್ಟೋಬರ್ 19ರಿಂದ ಪ್ರೊ ಕಬಡ್ಡಿ ಸೀಸನ್ 6 ಆರಂಭವಾಗಲಿದೆ. ಒಟ್ಟು 13 ವಾರಗಳ ಕಾಲ ಸ್ಪರ್ಧೆ ನಡೆಯಲಿದೆ.
ಪ್ರೊ ಕಬಡ್ಡಿ ಸ್ಪರ್ಧೆಯ 6 ಮತ್ತು 7 ನೇ ಆವೃತ್ತಿಯ ದಿನಾಂಕಗಳನ್ನು ಇಂದು ಮಾಶಾಲ್ ಸ್ಪೋಟ್ಸ್ ಪ್ರೈವೇಟ್ ಲಿಮಿಟೆಡ್ ಘೋಷಣೆ ಮಾಡಿದೆ. ಅಕ್ಟೋಬರ್ 19ರಿಂದ 6ನೇ ಆವೃತ್ತಿಯ ಸ್ಪರ್ಧೆ ಆರಂಭವಾಗಲಿದ್ದರೆ, 2019ರ ಜುಲೈ 19ರಂದು 7ನೇ ಆವೃತ್ತಿಯ ಸ್ಪರ್ಧೆಗೆ ಚಾಲನೆ ದೊರೆಯಲಿದೆ.
ಈ ಹಿಂದೆ 5ನೇ ಆವೃತ್ತಿಯ ಪ್ರೊ ಕಬಡ್ಡಿ ಪಂದ್ಯಾವಳಿಯಲ್ಲಿ ತಂಡಗಳ ಸಂಖ್ಯೆಯನ್ನು 8 ರಿಂದ 12ಕ್ಕೆ ಏರಿಕೆ ಮಾಡಲಾಗಿತ್ತು. ಒಟ್ಟು 13 ವಾರಗಳ ಕಾಲ 138 ಪಂದ್ಯಗಳ ಮೆಗಾ ಸ್ಪರ್ಧೆ ನಡೆದಿತ್ತು. ಈ ಬಾರಿಯೂ ಇದೇ ಮಾದರಿಯಲ್ಲಿ ಸ್ಪರ್ಧೆ ನಡೆಯಲಿದೆ.
ಏಷಿಯನ್ ಗೇಮ್ಸ್ ನಲ್ಲಿ ಕಬಡ್ಡಿ ಆಟಗಾರರು ಪಾಲ್ಗೊಳ್ಳಲಿದ್ದು ಇದರಿಂದ ಆಟಗಾರರಿಗೆ ಚೇತರಿಸಿಕೊಳ್ಳಲು ಸಮಯಾವಕಾಶ ನೀಡಿ ಆರನೇ ಆವೃತ್ತಿಯ ಪಂದ್ಯಾವಳಿಯ ದಿನಾಂಕ ನಿಗದಿಗೊಳಿಸಲಾಗಿದೆ.
ಸ್ಟಾರ್ ಸ್ಪೋರ್ಟ್ಸ್ ಮತ್ತು ಹಾಟ್ ಸ್ಟಾರ್ ನಲ್ಲಿ ಆವೃತ್ತಿಯ ಎಲ್ಲಾ ಪಂದ್ಯಗಳನ್ನು ಅಭಿಮಾನಿಗಳು ವೀಕ್ಷಿಸಬಹುದಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications