Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್‌ ಫೈನಲ್ ಕನಸು ಕಸಿದುಕೊಂಡ ದಬಾಂಗ್ ಡೆಲ್ಲಿ

Pro Kabaddi Semi-Final: Bengaluru Bulls beat Dabang Delhi

ಅಹ್ಮದಾಬಾದ್, ಅಕ್ಟೋಬರ್ 16: ಪ್ರೊ ಕಬಡ್ಡಿ ಲೀಗ್ 2019ರ ಟಾಪರ್ ತಂಡ ದಬಾಂಗ್ ಡೆಲ್ಲಿ ಮುಂದೆ ಹಾಲಿ ಚಾಂಪಿಯನ್ಸ್ ಬೆಂಗಳೂರು ಬುಲ್ಸ್‌ನ ಫುಲ್‌ ಚಾರ್ಜ್ ಆಟ ನಡೆಯಲಿಲ್ಲ. ಅಹ್ಮದಾಬಾದ್‌ನಲ್ಲಿ ಬುಧವಾರ (ಅಕ್ಟೋಬರ್ 16) ನಡೆದ ಸೆಮಿಫೈನಲ್ 1ರಲ್ಲಿ ಬೆಂಗಳೂರು ಬುಲ್ಸ್ ವಿರುದ್ಧ ದಬಾಂಗ್ ಡೆಲ್ಲಿ ಕೆಸಿ 44-38ರ ಗೆಲುವನ್ನಾಚರಿಸಿದೆ.

ಗುಜರಾತ್‌ನ ಅಹ್ಮದಾಬಾದ್‌ನಲ್ಲಿರುವ ಏಕ ಅರೇನಾ ಬೈ ಟ್ರಾನ್ಸ್‌ಸ್ಟೇಡಿಯಾದಲ್ಲಿ ನಡೆದ ಕೆಪಿಎಲ್ ಮೊದಲ ಸೆಮಿಫೈನಲ್‌ನಲ್ಲಿ ಬುಲ್ಸ್ ಪರ ಪವನ್ ಕುಮಾರ್ ಶೆಹ್ರಾವತ್ ಕೊಸರಾಟ ನಡೆಸಿದರಾದರೂ ದಬಾಂಗ್ ಡೆಲ್ಲಿಯ ರಕ್ಷಣಾತ್ಮಕ ಆಟ ಬುಲ್ಸ್ ಅನ್ನು ಹಿಮ್ಮೆಟ್ಟಿಸಿತು.

ದಬಾಂಗ್‌ ಡೆಲ್ಲಿಯಿಂದ ನವೀನ್ ಎಕ್ಸ್‌ಪ್ರೆಸ್ 15, ಚಂದ್ರನ್ ರಂಜಿತ್ 9, ಅನಿಲ್ ಕುಮಾರ್ 1, ವಿಜಯ್ 3, ಜೋಗೀಂದರ್ ಸಿಂಗ್ ನರ್ವಾಲ್ 3, ರವೀಂದರ್ ಪಾಹಲ್ 3, ವಿಶಾಲ್ ಮಾನೆ 1 ಅಂಕ ಸೇರಿಸಿ ತಂಡವನ್ನು ಬೆಂಬಲಿಸಿದರು. ಇದರೊಂದಿಗೆ ಡೆಲ್ಲಿ ಫೈನಲ್‌ಗೆ ಪ್ರವೇಶಿಸಿದೆ.

ಬೆಂಗಳೂರು ಬುಲ್ಸ್‌ನಿಂದ ಪವನ್ ಕುಮಾರ್ 18 (11 ರೈಡ್, 7 ಬೋನಸ್), ಸುಮಿತ್ ಸಿಂಗ್ 6, ರೋಹಿತ್ ಕುಮಾರ್ 5, ಮಹೇಂದರ್ ಸಿಂಗ್ 2, ಸೌರಬ್ ನಂದಲ್ 2, ಸಂದೀಪ್ 1 ಅಂಕ ಸೇರಿಸಿ ತಂಡ ಪರ ಹೋರಾಟ ನಡೆಸಿದರು. ಅಂತೂ ಈ ಪಂದ್ಯದೊಂದಿಗೆ ಬುಲ್ಸ್ ಫೈನಲ್ ಕನಸು ಮಣ್ಣುಪಾಲಾಗಿದೆ.

Story first published: Thursday, October 17, 2019, 12:25 [IST]
Other articles published on Oct 17, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+