Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪ್ರೊ ಕಬಡ್ಡಿ ಲೀಗ್: ಯು ಮುಂಬಾ ಸೋಲಿಸಿ ಫೈನಲ್‌ಗೆ ಲಗ್ಗೆಯಿಟ್ಟ ಬೆಂಗಾಲ್

Pro Kabaddi Semi-Finals: Bengal win thriller to face Delhi in final

ಅಹ್ಮದಾಬಾದ್, ಅಕ್ಟೋಬರ್ 17: ಗುಜರಾತ್‌ನ ಅಹ್ಮದಾಬಾದ್‌ನಲ್ಲಿರುವ ಏಕ ಅರೇನಾ ಬೈ ಟ್ರಾನ್ಸ್‌ಸ್ಟೇಡಿಯಾದಲ್ಲಿ ನಡೆದ ಪ್ರೊ ಕಬಡ್ಡಿ ಲೀಗ್ 2019ರ ಸೆಮಿಫೈನಲ್ 2ರಲ್ಲಿ ಯು ಮುಂಬಾವನ್ನು 37-35ರ ಅಂತರದಿಂದ ಸೋಲಿಸಿರುವ ಬೆಂಗಾಲ್ ವಾರಿಯರ್ಸ್ ಫೈನಲ್‌ಗೆ ಪ್ರವೇಶಿಸಿದೆ.

ಬೆಂಗಾಲ್ ವಾರಿಯರ್ಸ್‌ನಿಂದ ಸುಕೇಶ್ ಹೆಗ್ಡೆ 8, ಇಸ್ಮಾಯಿಲ್ ನಬಿಬಖ್ಷ್ 5, ಕೆ ಪ್ರಪಂಜನ್ 4, ರಿಂಕು ನರ್ವಾಲ್ 4, ಜೀವ ಕುಮಾರ್ 3, ಬಲ್ದೇವ್ ಸಿಂಗ್ 2, ಸೌರಭ್ ಪಾಟಿಲ್ 2 ಅಂಕ ಸೇರಿಸಿ ವಾರಿಯರ್ಸ್ ಗೆಲುವನ್ನು ಬರೆದರು. ಅಕ್ಟೋಬರ್ 19ರಂದು ಇದೇ ಅರೇನಾದಲ್ಲಿ ನಡೆಯುವ ಫೈನಲ್‌ನಲ್ಲಿ ಬೆಂಗಾಲ್ ವಾರಿಯರ್ಸ್ ಮತ್ತು ದಬಾಂಗ್ ಡೆಲ್ಲಿ ಕಾದಾಡಲಿವೆ.

ಯು ಮುಂಬಾದಿಂದ ಅಭಿಷೇಕ್ ಸಿಂಗ್ 11, ಸಂದೀಪ್ ನರ್ವಾಲ್ 5, ಅಜಿಂಕ್ಯ ಕಪ್ರೆ 5, ಅರ್ಜುನ್ ದೇಶ್ವಲ್ 4, ಸುರೀಂದರ್ ಸಿಂಗ್ 4, ಅತುಲ್ ಎಂಎಸ್ 1, ಫಜಲ್ ಅತ್ರಾಚಲಿ 1 ಅಂಕ ಸೇರಿಸಿ ತಪ್ಪ ಪೈಪೋಟಿ ನೀಡಿದರು. ಇದಕ್ಕೂ ಮುನ್ನ ಸೆಮಿಫೈನಲ್ 1ರಲ್ಲಿ ದಬಾಂಗ್ ಡೆಲ್ಲಿ ತಂಡ ಬೆಂಗಳೂರು ಬುಲ್ಸ್ ವಿರುದ್ಧ 44-38 ಜಯ ಗಳಿಸಿತ್ತು.

ಫೈನಲ್ ಪಂದ್ಯ ಅಹ್ಮದಾಬಾದ್‌ನ ಅರೇನಾ ಬೈ ಟ್ರಾನ್ಸ್‌ಸ್ಟೇಡಿಯಾದಲ್ಲಿ ಅಕ್ಟೋಬರ್ 19ರಂದು ನಡೆಯಲಿದೆ. ಬೆಂಗಾಲ್ ವರಿಯರ್ಸ್ ಮತ್ತು ದಬಾಂಗ್ ಡೆಲ್ಲಿ ಕೆಸಿ ತಂಡಗಳು ಪ್ರಶಸ್ತಿ ಸುತ್ತಿನಲ್ಲಿ ಕಾದಾಡಲಿವೆ. 7.30 pmಗೆ ಪಮದ್ಯ ಆರಂಭಗೊಳ್ಳಲಿದೆ.

Story first published: Thursday, October 17, 2019, 17:08 [IST]
Other articles published on Oct 17, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+