Pro Kabaddi: ರಕ್ಷಣಾ ವಿಭಾಗದಲ್ಲಿ ವೈಫಲ್ಯ: ಬೆಂಗಳೂರು ಬುಲ್ಸ್‌ಗೆ ಸೋಲು
ಬೆಂಗಳೂರು ಬುಲ್ಸ್ ತಂಡದ ರಕ್ಷಣಾ ವಿಭಾಗದ ವೈಫಲ್ಯದ ಕಾರಣದಿಂದ ಟೂರ್ನಿಯಲ್ಲಿ ಮತ್ತೊಂದು ಸೋಲಿಗೆ ಶರಣಾಯಿತು. 10ನೇ ಆವೃತ್ತಿಯ ಪ್ರೊ ಕಬಡ್ಡಿಯ ಟೂರ್ನಿಯ 82ನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ 28-45ರಿಂದ ತಮಿಳು ತಲೈವಾಸ್ ವಿರುದ್ಧ ಸೋಲು ಕಂಡಿದೆ.
ಬೆಂಗಳೂರು ಬುಲ್ಸ್ ಈ ಸೋಲಿನಿಂದಿಗೆ ಟೂರ್ನಿಯಲ್ಲಿ 9ನೇ ಸೋಲು ಕಂಡಿದೆ. ಆಡಿದ 15 ಪಂದ್ಯಗಳಲ್ಲಿ ಬುಲ್ಸ್ 6 ಜಯ ಸಾಧಿಸಿದ್ದು, 37 ಅಂಕಗಳೊಂದಿಗೆ ಒಂಬತ್ತನೇ ಸ್ಥಾನದಲ್ಲಿದೆ. ಇನ್ನು ಟೂರ್ನಿಯಲ್ಲಿ ತಮಿಳು ತಲೈವಾಸ್ ಟೂರ್ನಿಯಲ್ಲಿ ಐದನೇ ಜಯ ಸಾಧಿಸಿದೆ. ಈ ಮೂಲಕ ತಮಿಳು ತಲೈವಾಸ್ ಆಡಿದ 14 ಪಂದ್ಯಗಳಲ್ಲಿ 30 ಅಂಕಗಳನ್ನು ಕಲೆ ಹಾಕಿದ್ದು, 10ನೇ ಸ್ಥಾನದಲ್ಲಿದೆ.

ತಮಿಳು ತಲೈವಾಸ್ ಮೊದಲ 20 ನಿಮಿಷದ ಆಟದಲ್ಲಿ ಅಬ್ಬರಿಸಿತು. ಈ ಅವಧಿಯಲ್ಲಿ ತಮಿಳು ತಲೈವಾಸ್ 25-14 ಅಂಕಗಳೊಂದಿಗೆ ಮುನ್ನಡೆ ಸಾಧಿಸಿತು. ಈ ಅವಧಿಯಲ್ಲಿ ಬುಲ್ಸ್, ತಲೈವಾಸ್ ತಂಡಕ್ಕೆ ರೈಡ್‌ನಲ್ಲಿ ಜಿದ್ದಾಜಿದ್ದಿನ ಪೈಪೋಟಿ ನೀಡಿತು.
ಆದರೆ ಟ್ಯಾಕಲ್‌ನಲ್ಲಿ ಅಂಕಗಳಿಸುವಲ್ಲಿ ವಿಫಲರಾದರು. ಈ ಅವಧಿಯಲ್ಲಿ ತಲೈವಾಸ್ 8 ಟ್ಯಾಕಲ್ ಪಾಯಿಂಟ್ ಅಂಕಗಳನ್ನು ಕಲೆ ಹಾಕಿದರೆ, ಬೆಂಗಳೂರು ಈ ಅವಧಿಯಲ್ಲಿ ಟ್ಯಾಕಲ್‌ನಲ್ಲಿ ಒಂದು ಅಂಕ ಕಲೆ ಹಾಕಿತು. ಇನ್ನು ಈ ಅವಧಿಯಲ್ಲಿ ಬೆಂಗಳೂರು ಬುಲ್ಸ್ ಒಮ್ಮೆ ಅಂಗಳವನ್ನು ಖಾಲಿ ಮಾಡಿತು.
ಎರಡನೇ ಅವಧಿಯಲ್ಲಿ ಅಂಕಗಳನ್ನು ಕಲೆ ಹಾಕುವಲ್ಲಿ ವಿಫಲವಾಯಿತು. ಈ ಅವಧಿಯಲ್ಲೂ ತಲೈವಾಸ್ ಅಬ್ಬರಿಸಿತು. ತಲೈವಾಸ್ 20-14 ಅಂಕಗಳಿಂದ ಮುನ್ನಡೆ ಸಾಧಿಸಿ ಜಯ ಸಾಧಿಸಿತು. ಈ ಅವಧಿಯಲ್ಲಿ ತಲೈವಾಸ್ ದಾಳಿಯಲ್ಲಿ 11, ಬುಲ್ಸ್ 9 ಅಂಕ ಸೇರಿಸಿತು. ಟ್ಯಾಕಲ್‌ನಲ್ಲಿ ತಲೈವಾಸ್ 7 ಹಾಗೂ ಬುಲ್ಸ್ 2 ಅಂಕ ಪೇರಿಸಿತು.

ಈ ಅವಧಿಯಲ್ಲಿ ಉಭಯ ತಂಡಗಳು ತಲಾ ಒಂದೊಂದು ಬಾರಿ ಅಂಗಳ ಖಾಲಿ ಮಾಡಿತು. ಟ್ಯಾಕಲ್‌ನಲ್ಲಿ ಬುಲ್ಸ್ 23 ಬಾರಿ ಎದುರಾಳಿ ಆಟಗಾರರನ್ನು ಹಿಡಿಯುವ ಪ್ರಯತ್ನದಲ್ಲಿ 3 ಬಾರಿ ಸಫಲವಾಯಿತು. ಇದೇ ಬುಲ್ಸ್ ಸೋಲಿಗೆ ಕಾರಣವಾಯಿತು.
ತಲೈವಾಸ್ ತಂಡದ ಪರ ನರೇಂದ್ರ 14, ಅಜಿಂಕ್ಯ ಪವಾರ್ 11 ಅಂಕಗಳನ್ನು ಕಲೆ ಹಾಕಿತು. ಇನ್ನು ಬೆಂಗಳೂರು ಬುಲ್ಸ್ ಪರ ಅಕ್ಷಿತ್ 12 ಅಂಕಗಳನ್ನು ಕಲೆ ಹಾಕಿ ಸೋಲಿನಲ್ಲಿ ಮಿಂಚಿದರು.
ಪುಣೇರಿ ಎರಡನೇ ಸ್ಥಾನ
ಭಾನುವಾರ ನಡೆದ ಎರಡನೇ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಸೋಲು ಕಂಡಿದೆ. ಪುಣೇರಿ ಪಲ್ಟನ್ 34-24ರಿಂದ ಗುಜರಾತ್ ಜೈಂಟ್ಸ್ ತಂಡವನ್ನು ಸೋಲಿಸಿತು. ಪುಣೇರಿ ಪಲ್ಟನ್ ಆಡಿದ 13 ಪಂದ್ಯಗಳಲ್ಲಿ 11 ಜಯ ಸಾಧಿಸಿದ್ದು, 2 ಸೋಲು ಸೇರಿದಂತೆ 57 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಈ ಸೋಲಿನಿಂದಿಗೆ ಗುಜರಾತ್ ಜೈಂಟ್ಸ್ ಟೂರ್ನಿಯಲ್ಲಿ ಆರನೇ ಸೋಲು ಕಂಡಿದ್ದು, 44 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications