Pro Kabaddi: ತಮಿಳು ತಲೈವಾಸ್ ಅಬ್ಬರದ ಆಟ
ಸ್ಟಾರ್ ರೈಡರ್ ನರೇಂದ್ರ ಅವರು ನೀಡಿದ ಭರ್ಜರಿ ಪ್ರದರ್ಶನದ ಬಲದಿಂದ ತಮಿಳು ತಲೈವಾಸ್ 10ನೇ ಆವೃತ್ತಿ ಪ್ರೊ ಕಬಡ್ಡಿ ಟೂರ್ನಿಯ 65ನೇ ಪಂದ್ಯದಲ್ಲಿ ಯು.ಪಿ ಯೋಧಾಸ್ ತಂಡವನ್ನು ಮಣಿಸಿತು.
ಬುಧವಾರ ನಡೆದ ಪಂದ್ಯದಲ್ಲಿ ತಮಿಳು ತಲೈವಾಸ್ 46-27 ಅಂಕಗಳಿಂದ ತಮಿಳು ತಲೈವಾಸ್ ತಂಡವನ್ನು ಮಣಿಸಿತು. ಈ ಜಯದ ಮೂಲಕ ತಲೈವಾಸ್ ಆಡಿದ 11 ಪಂದ್ಯಗಳಲ್ಲಿ ಮೂರನೇ ಗೆಲುವು ದಾಖಲಿಸಿದ್ದು, 19 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ 11ನೇ ಸ್ಥಾನದಲ್ಲಿದೆ. ಇನ್ನು ಯು.ಪಿ ಯೋಧಾಸ್ 12 ಪಂದ್ಯಗಳಿಂದ 3 ಜಯ ಸಾಧಿಸಿದ್ದು, 21 ಅಂಕಗಳನ್ನು ಕಲೆ ಹಾಕಿ 10ನೇ ಸ್ಥಾನದಲ್ಲಿದೆ.

ಆರಂಭದಿಂದಲೂ ತಮಿಳು ತಲೈವಾಸ್ ಭರ್ಜರಿ ಪ್ರದರ್ಶನ ನೀಡಿ ಗಮನ ಸೆಳೆಯಿತು. ಮೊದಲ 20 ನಿಮಿಷದ ಆಟದಲ್ಲಿ ತಲೈವಾಸ್ 19-11 ರಿಂದ ಮುನ್ನಡೆ ಸಾಧಿಸಿತ್ತು. ಈ ಅವಧಿಯಲ್ಲಿ ತಲೈವಾಸ್ ದಾಳಿಯಲ್ಲಿ 10, ಟ್ಯಾಕಲ್‌ನಲ್ಲಿ 7 ಅಂಕ ಪೇರಿಸಿತು. ಇನ್ನು ಒಂದು ಬಾರಿ ಎದುರಾಳಿ ತಂಡದ ಅಂಕಣ ಖಾಲಿ ಮಾಡಿ ಬೋನಸ್ ಅಂಕವನ್ನು ಸಹ ಕಲೆ ಹಾಕಿತು.
ಎರಡನೇ ಅವಧಿಯಲ್ಲೂ ತಲೈವಾಸ್ ಸೊಗಸಾದ ಆಟದ ಪ್ರದರ್ಶನ ನೀಡಿತು. ಮೊದಲಾವಧಿಯಲ್ಲಿ ಸಾಧಿಸಿದ್ದ ಅಂಕಗಳ ಅಂತರವನ್ನು ಹಿಗ್ಗಿಸುತ್ತಾ ಸಾಗಿತು. ಈ ವೇಳೆ ದಾಳಿ ಹಾಗೂ ರಕ್ಷಣಾ ವಿಭಾಗದಲ್ಲಿ ಮನಮೋಹಕ ಆಟದ ಪ್ರದರ್ಶನ ನೀಡಿ ಗಮನ ಸೆಳೆಯಿತು. ಅಲ್ಲದೆ ಈ ಅವಧಿಯಲ್ಲೂ ತಲೈವಾಸ್ ಎರಡು ಬಾರಿ ಯುಪಿ ತಂಡವನ್ನು ಆಲೌಟ್ ಮಾಡಿತು.
ತಲೈವಾಸ್ ಪರ ಸ್ಟಾರ್ ರೈಡರ್ ನರೇಂದ್ರ 18 ಬಾರಿ ಎದುರಾಳಿ ಕೋರ್ಟ್ ಪ್ರವೇಶಿಸಿ, 14 ಅಂಕವನ್ನು ಕಲೆ ಹಾಕಿದರು. ರೈಟ್ ಕಾರ್ನರ್ ಡಿಫೆಂಡರ್ ಸಾಗರ್ 6 ಅಂಕ ಬಾಚಿಕೊಂಡರು. ಪರಾಜಿತ ತಂಡದ ಪರ ವಿಜಯ್ ಮಲಿಕ್ 10 ಅಂಕ ಕಲೆ ಹಾಕಿ ಮಿಂಚಿದರು.

ಮುಂಬಾ-ಹರಿಯಾಣ ಪಂದ್ಯ ಟೈ
ಇನ್ನೊಂದು ಪಂದ್ಯದಲ್ಲಿ ಯುಮುಂಬಾ ಹಾಗೂ ಹರಿಯಾಣ ಸ್ಟೀಲರ್ಸ್ ತಂಡಗಳು ಅಂಕಗಳನ್ನು ಹಂಚಿಕೊಂಡಿವೆ. ನಿಗದಿತ ಅವಧಿಯಲ್ಲಿ ಉಭಯ ತಂಡಗಳ ತಲಾ 44 ಅಂಕವನ್ನು ಕಲೆ ಹಾಕಿದವು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications