ಪ್ರೊ ಕಬಡ್ಡಿ: ತಮಿಳ್ ತಲೈವಾಸ್ ಮಣಿಸದಿದ್ದರೆ ಬೆಂಗಳೂರು ಬುಲ್ಸ್ ಗತಿ?!

ಚೆನ್ನೈ, ಆಗಸ್ಟ್ 17: ಪ್ರೊ ಕಬಡ್ಡಿ ಲೀಗ್ ಹಾಲಿ ಚಾಂಪಿಯನ್ ಬೆಂಗಳೂರು ಬುಲ್ಸ್ ಈ ಬಾರಿಯ ಆವೃತ್ತಿಯ ಅಂಕಪಟ್ಟಿಯಲ್ಲಿ ಕುಸಿತ ಕಂಡಿದೆ. ಶನಿವಾರ (ಆಗಸ್ಟ್ 17) ಆತಿಥೇಯ ತಮಿಳ್ ತಲೈವಾಸ್ ಎದುರು ಬುಲ್ಸ್ ಮೇಲುಗೈ ಸಾಧಿಸಿದ್ದರೆ ಪ್ರಶಸ್ತಿ ಸುತ್ತಿನ ಹಾದಿ ಕಠಿಣವಾಗಲಿದೆ.
ಚೆನ್ನೈಯ ಜವಾಹರಲಾಲ್ ನೆಹರೂ ಇಂಡೋರ್ ಸ್ಟೇಡಿಯಂನಲ್ಲಿ ಶನಿವಾರ ಬೆಂಗಳೂರು ಬುಲ್ಸ್ ಗೆಲ್ಲಲೇಬೇಕು. ಈ ಪಂದ್ಯವೂ ಸೋತರೆ, ಸದ್ಯ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ತಂಡಗಳನ್ನು ಕೆಳಗಿಳಿಸೋದು ಬುಲ್ಸ್‌ಗೆ ಸವಾಲೆನಿಸಲಿದೆ. ಬೆಂಗಳೂರು ಬುಲ್ಸ್ ಈಗ ಪಾಯಿಂಟ್ ಟೇಬಲ್‌ನಲ್ಲಿ 5ನೇ ಸ್ಥಾನದಲ್ಲಿದೆ.
ಕಳೆದ ಸೀಸನ್‌ನಲ್ಲಿ ಎ ಝೋನ್ ಅಂಕಪಟ್ಟಿಯಲ್ಲಿದ ಜೈಪುರ್ ಪಿಂಕ್ ಪ್ಯಾಂಥರ್ಸ್ 5ನೇ ಸ್ಥಾನದೊಂದಿಗೆ ಆಟ ಮುಗಿಸಿತ್ತು. ಈ ಬಾರಿ ಅಭಿಷೇಕ್ ಬಚ್ಚನ್ ಮಾಲಕತ್ವದ ಜೈಪುರ್ ಅದ್ಭುತ ಪ್ರದರ್ಶನದೊಂದಿಗೆ ಈಗಾಗಲೇ ಅಗ್ರ ಸ್ಥಾನಕ್ಕೇರಿದೆ. ದಬಾಂಗ್ ಡೆಲ್ಲಿ ದ್ವಿತೀಯ ಸ್ಥಾನದಲ್ಲಿದೆ.
ಬೆಂಗಳೂರು ಬುಲ್ಸ್ ಈವರೆಗೆ ಆಡಿರುವ 7 ಪಂದ್ಯಗಳಲ್ಲಿ 4 ಗೆಲುವು, 3 ಸೋಲುಗಳೊಂದಿಗೆ ಒಟ್ಟು 22 ಅಂಕಗಳನ್ನು ಕಲೆ ಹಾಕಿದೆ. ಸದ್ಯ ನಂ.1 ಸ್ಥಾನದಲ್ಲಿರುವ ಜೈಪರ್ 7ರಲ್ಲಿ 6 ಗೆಲುವುಗಳೊಂದಿಗೆ 30 ಪಾಯಿಂಟ್ ಗಳಿಸಿದೆ. ದ್ವಿತೀಯ ಸ್ಥಾನಿ ದಬಾಂಗ್ ಡೆಲ್ಲಿ 26 ಅಂಕ ಕಲೆ ಹಾಕಿದೆ.
ಬೆಂಗಳೂರು ಬುಲ್ಸ್‌ಗೆ ಇನ್ನೂ ಸುಮಾರು 15 ಲೀಗ್ ಪಂದ್ಯಗಳಿವೆ. ಇವುಗಳಲ್ಲಿ ಬೆಂಗಳೂರು ಗೆಲುವು ಸಾಧಿಸುತ್ತಾ ಸಾಗಿದರೆ ಪ್ರಶಸ್ತಿ ಸುತ್ತಿಗೇರಲು ಅವಕಾಶವಿದೆ. ಹಾಗಂತ ಈಗಾಗಲೇ ಅಂಕಪಟ್ಟಿಯಲ್ಲಿ ಉತ್ತಮ ಸ್ಥಿತಿಯಲ್ಲಿದ್ದು ಹುಮ್ಮಸ್ಸಿನಲ್ಲಿರುವ ತಂಡಗಳೂ ಸಲುಭವಾಗಿ ಕೆಳಗಿಳಿಯಲಾರವು, ಅವಕಾಶ ಕೈ ಚೆಲ್ಲಲಾರವು. ಒಟ್ಟಿನಲ್ಲಿ ಬೆಂಗಳೂರು ಬುಲ್ಸ್ 'ಫುಲ್ ಚಾರ್ಚ್'ನೊಂದಿಗೆ ಪುಟಿದೇಳಬೇಕಷ್ಟೇ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications