For Quick Alerts
ALLOW NOTIFICATIONS  
For Daily Alerts

Pro kabaddi: ಗೆಲುವಿನ ಟ್ರ್ಯಾಕ್‌ಗೆ ಮರಳಿದ ತೆಲುಗು ಟೈಟನ್ಸ್‌

ಸ್ಟಾರ್ ಆಟಗಾರ ಪವನ್ ಶೆರಾವತ್ ಅವರ ಭರ್ಜರಿ ಪ್ರದರ್ಶನದ ಫಲದಿಂದ ತೆಲುಗು ಟೈಟನ್ಸ್‌ ತಂಡ 49-32 ಅಂಕಗಳೊಂದಿಗೆ ಯು ಪಿ ಯೋಧಾಸ್ ತಂಡವನ್ನು ಮಣಿಸಿತು.

ಈ ಗೆಲುವಿನೊಂದಿಗೆ ತೆಲುಗು ಟೈಟನ್ಸ್ ಟೂರ್ನಿಯಲ್ಲಿ ಎರಡನೇ ಗೆಲುವಿನ ನಗೆ ಬೀರಿದೆ. ಯು.ಪಿ ಯೋಧಾಸ್ 15 ಪಂದ್ಯಗಳಲ್ಲಿ 3 ಜಯ, 11 ಸೋಲು ಕಂಡಿದ್ದು, 23 ಅಂಕಗಳೊಂದಿಗೆ 11ನೇ ಸ್ಥಾನದಲ್ಲಿದೆ.

Pro kabaddi: Telugu Titans Beat U.P. Yoddhas

ತೆಲುಗು ಟೈಟನ್ಸ್‌ ಆರಂಭದಿಂದಲೂ ಭರ್ಜರಿ ಪ್ರದರ್ಶನ ನೀಡಿ ಗಮನ ಸೆಳೆಯಿತು. ಸಾಲು ಸಾಲು ಸೋಲುಗಳಿಂದ ಕಂಗೆಟ್ಟಿದ್ದ ತೆಲುಗು, ಜಯದ ಟ್ರ್ಯಾಕ್‌ಗೆ ಮರಳು ಪ್ಲ್ಯಾನ್ ಮಾಡಿಕೊಂಡಿತು. ಈ ಅವಧಿಯಲ್ಲಿ ತೆಲುಗು 24-16 ಅಂಕಗಳೊಂದಿಗೆ ಯು.ಪಿ ವಿರುದ್ಧ ಮುನ್ನಡೆ ಸಾಧಿಸಿದರು.

ಇನ್ನು ರಕ್ಷಣಾ ವಿಭಾಗದಲ್ಲಿ ಸಮಯೋಚಿತ ಆಟ ನಡೆಸಿದ ತಂಡ 6 ಅಂಕಗಳನ್ನು ಕಲೆ ಹಾಕಿತು. ಅಲ್ಲದೆ ಈ ಅವಧಿಯಲ್ಲಿ ಯುಪಿ ಯೋಧಾಸ್ ತಂಡವನ್ನು ಆಲೌಟ್ ಮಾಡಿತು.

ಎರಡನೇ ಅವಧಿಯಲ್ಲಿ ತೆಲುಗು ಯೋಜನಾ ಬದ್ಧ ಆಟವನ್ನು ಆಡಿತು. ಅಲ್ಲದೆ ಈ ಅವಧಿಯಲ್ಲಿ ಯೋಧಾಸ್ ತಂಡದ ರಣ ತಂತ್ರವನ್ನು ಮೆಟ್ಟಿ ನಿಂತು ಅಂಕಗಳನ್ನು ಗಳಿಸಿತು. ಈ ಸಮಯದಲ್ಲಿ ಉಭಯ ತಂಡಗಳು ದಾಳಿಯಲ್ಲಿ ಸಮಬಲದ ಪ್ರದರ್ಶನ ನೀಡಿದವು. ಈ ಅವಧಿಯಲ್ಲಿ ಎರಡೂ ತಂಡಗಳು ತಲಾ 14 ಅಂಕ ಕಲೆ ಹಾಕಿದವು. ತೆಲುಗು ಟೈಟನ್ಸ್ ಟ್ಯಾಕಲ್‌ನಲ್ಲಿ 7 ಅಂಕ ಸೇರಿಸಿತು. ಇನ್ನು ಈ ಅವಧಿಯಲ್ಲಿ ಯುಪಿ ಯೋಧಾಸ್ ಎರಡು ಬಾರಿ ಆಲೌಟ್ ಆಯಿತು.

ವಿಜೇತ ತಂಡದ ಪರ ಪವನ್ ಶೇರಾವತ್ 16, ಓಂಕಾರ್ ಪಟೇಲ್ 10 ಅಂಕಗಳನ್ನು ಕಲೆ ಹಾಕಿತು. ಪರಾಜಿತ ತಂಡದ ಪರ ಪ್ರದೀಪ್ ನರ್ವಾಲ್ 10 ಅಂಕ ಸೇರಿಸಿದರು.

ದಬಾಂಗ್ ತಂಡಕ್ಕೆ ಜಯ

ದಬಾಂಗ್‌ ದೆಹಲಿ ಕೆ.ಸಿ ತಂಡ 39-33 ಅಂಕಗಳಿಂದ ಯು ಮುಂಬಾ ತಂಡವನ್ನು ಮಣಿಸಿತು. ಈ ಜಯದ ಮೂಲಕ ದಬಾಂಗ್ ದೆಹಲಿ 14 ಆಡಿದ ಪಂದ್ಯಗಳಲ್ಲಿ 8 ಜಯ, 4 ಸೋಲು ಹಾಗೂ 2 ಡ್ರಾ ಸಾಧಿಸಿದರೊಂದಿಗೆ 49 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಯು ಮುಂಬಾ ತಂಡ ಆಡಿದ 13 ಪಂದ್ಯಗಳಲ್ಲಿ 6 ಸೋಲು ಕಂಡಿದ್ದು 37 ಅಂಕಗಳೊಂದಿಗೆ ಯು ಮುಂಬಾ ಏಳನೇ ಸ್ಥಾನದಲ್ಲಿದೆ.

ವಿಜೇತ ತಂಡದ ಪರ ಅಶು ಮಲಿಕ್ 17 ಅಂಕಗಳೊಂದಿಗೆ ಜಯದಲ್ಲಿ ಮಿಂಚಿದರು. ಇನ್ನು ಮುಂಬಾ ತಂಡದ ಪರ ಗುಮನ್‌ 13 ಅಂಕಗಳನ್ನು ಕಲೆ ಹಾಕಿ ಸೋಲಿನಲ್ಲಿ ಎಲ್ಲರ ಗಮನ ಸೆಳೆದರು.

Story first published: Sunday, January 21, 2024, 7:02 [IST]
Other articles published on Jan 21, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+