Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Pro kabaddi: ಬೆಂಗಳೂರು ಬುಲ್ಸ್‌ ತಂಡದ ಗೆಲುವಿನ ಆಸೆಗೆ ಬ್ರೇಕ್

10ನೇ ಆವೃತ್ತಿ ಪ್ರೋ ಕಬಡ್ಡಿ ಆವೃತ್ತಿಯಲ್ಲಿ ಗೆಲುವಿನ ಲಯಕ್ಕೆ ಮರಳುವ ಬೆಂಗಳೂರು ತಂಡ ಪ್ಲ್ಯಾನ್‌ ಕಮರಿದೆ. ಶುಕ್ರವಾರ ಮುಂಬೈನಲ್ಲಿ ನಡೆದ 57ನೇ ಪಂದ್ಯದಲ್ಲಿ ಬೆಂಗಳೂರು ತಂಡ ಮತ್ತೊಂದು ಸೋಲು ಕಂಡಿದೆ.

ಬೆಂಗಳೂರು ಬುಲ್ಸ್ 35-40 ರಿಂದ ಆತಿಥೇಯ ಯು-ಮುಂಬಾ ವಿರುದ್ಧ ಆಘಾತ ಕಂಡಿತು. ಈ ಗೆಲುವಿನೊಂದಿಗೆ ಯುಮುಂಬಾ ತಂಡ ಆಡಿದ 8 ಪಂದ್ಯಗಳಲ್ಲಿ 6 ಜಯ 2 ಸೋಲು ಕಂಡಿದ್ದು, 31 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಆಡಿರುವ 11 ಪಂದ್ಯಗಳಲ್ಲಿ 7 ಸೋಲು, 4 ಜಯ ಸಾಧಿಸಿರುವ ಬುಲ್ಸ್‌ 26 ಅಂಕಗಳೊಂದಿಗೆ ಎಂಟನೇ ಸ್ಥಾನದಲ್ಲಿದೆ.

Pro kabaddi: U Mumba beat Bengaluru Bulls

ಮೊದಲಾವಧಿಯಲ್ಲಿ ಬೆಂಗಳೂರು ತಂಡ ಅಂಕದ ಬೇಟೆಯಲ್ಲಿ ಹಿನ್ನಡೆ ಅನುಭವಿಸಿತು. ಈ ಅವಧಿಯಲ್ಲಿ ಅಮೋಘ ಆಟದ ಪ್ರದರ್ಶನ ನೀಡಿದ ಮುಂಬಾ 19-10 ಅಂಕಗಳ ಮುನ್ನಡೆ ಸಾಧಿಸಿತು. ಅಲ್ಲದೆ ಈ ಅವಧಿಯಲ್ಲಿ ಬೆಂಗಳೂರು ಬುಲ್ಸ್ ತಂಡದ ಅಂಗಳವನ್ನು ಖಾಲಿ ಮಾಡಿದ ಮುಂಬಾ ಬೋನಸ್ ಅಂಕವನ್ನು ಸಹ ಕಲೆ ಹಾಕಿತು.

ಜಿದ್ದಾಜಿದ್ದಿನಿಂದ ಕೂಡಿದ್ದ ಎರಡನೇ ಅವಧಿಯಲ್ಲಿ ಬೆಂಗಳೂರು ಬುಲ್ಸ್ ಭರ್ಜರಿಯಾಗಿ ಕಮ್ ಬ್ಯಾಕ್ ಮಾಡುವ ಸೂಚನೆ ನೀಡಿತು. ಈ ಅವಧಿಯಲ್ಲಿ ಚುರುಕಿನ ದಾಳಿ ಹಾಗೂ ಟ್ಯಾಕಲ್‌ ಮೂಲಕ ಮುಂಬಾಗೆ ಪೆಟ್ಟು ನೀಡುವ ಆಸೆ ಹಾಕಿಕೊಂಡಿತು. ಕೊನೆಯ 20 ನಿಮಿಷದಲ್ಲಿ ಬುಲ್ಸ್ ಒಟ್ಟು 20 ಅಂಕಗಳನ್ನು ದಾಳಿಯಲ್ಲಿ ಕಲೆ ಹಾಕಿತು. ಮುಂಬಾ ತಂಡ ದಾಳಿಯಲ್ಲಿ 12 ಅಂಕ ಪೇರಿಸಿತು.

Pro kabaddi: U Mumba beat Bengaluru Bulls

ಕೊನೆಯಾವಧಿಯಲ್ಲಿ ಉಭಯ ತಂಡಗಳು ತಲಾ ಒಮ್ಮೆ ಆಲೌಟ್ ಆದವು. ಬುಲ್ಸ್ ಗೆಲುವಿನ ಆಸೆ ಚಿಗುರಿತು. ಆದರೆ ಮುಂಬಾ ಮೊದಲಾವಾಧಿಯಲ್ಲಿ 9 ಅಂಕಗಳ ಮುನ್ನಡೆ ಸಾಧಿಸಿದ್ದು ಗೆಲುವಿಗೆ ಸಹಾಯ ಮಾಡಿತು.

ಬೆಂಗಳೂರು ಪರ ಸಂಘಟಿತ ಆಟವೇ ಎಲ್ಲರ ಚಿತ್ತ ಕದ್ದಿತು. ರೇಡ್ ಹಾಗೂ ಟ್ಯಾಕಲ್‌ನಲ್ಲಿ ಅಂಕಗಳನ್ನು ಕಲೆ ಹಾಕಿ ಸೋಲಿನಲ್ಲಿ ಮಿಂಚಿದರು. ಸಮಯೋಚಿತ ಆಟವಾಡಿದ ಮುಂಬಾ ಗೆಲುವಿನ ಕೇಕೆ ಹಾಕಿತು.

ಪಾಟ್ನಾಗೆ ನಿರಾಸೆ

ಇದಕ್ಕೂ ಮೊದಲು ನಡೆದ ಇನ್ನೊಂದು ಪಂದ್ಯದಲ್ಲಿ ದಬಾಂಗ್ ದೆಹಲಿ ಕೆಸಿ 38-37 ರಿಂದ ಪಾಟ್ನಾ ಪೈರೇಟ್ಸ್ ತಂಡವನ್ನು ಮಣಿಸಿ, ಪೂರ್ಣ ಅಂಕವನ್ನು ಕಲೆ ಹಾಕಿತು. ಈ ಗೆಲುವಿನ ಮೂಲಕ ದಬಾಂಗ್ ದೆಹಲಿ ಕೆ.ಸಿ ಆಡಿದ 10 ಪಂದ್ಯಗಳಲ್ಲಿ 6 ಜಯ, ಮೂರು ಸೋಲು ಕಂಡಿದ್ದು, 35 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಪಾಟ್ನಾ ಪೈರೇಟ್ಸ್‌ 10 ಪಂದ್ಯಗಳಲ್ಲಿ ತಲಾ ಐದು ಗೆಲುವು, ಸೋಲು ಕಂಡಿದ್ದು, 28 ಅಂಕಗಳೊಂದಿಗೆ ಆರನೇ ಸ್ಥಾನದಲ್ಲಿದೆ.

Story first published: Saturday, January 6, 2024, 12:20 [IST]
Other articles published on Jan 6, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+