PKL 10 Auction: ಅ.9, 10ರಂದು ಪ್ರೊ ಕಬಡ್ಡಿ ಲೀಗ್ ಹರಾಜು; ಸ್ಥಳ, ಸಮಯ, ಲೈವ್ ವೀಕ್ಷಣೆ ಎಲ್ಲಿ?
10ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ (ಪಿಕೆಎಲ್)ನ ಆಟಗಾರರ ಹರಾಜು ಪ್ರಕ್ರಿಯೆ ಅ.9 ಮತ್ತು 10ರಂದು (ಸೋಮವಾರ ಹಾಗೂ ಮಂಗಳವಾರ) ಮುಂಬೈನಲ್ಲಿ ನಡೆಯಲಿದೆ.
ಸುಮಾರು 500ಕ್ಕೂ ಹೆಚ್ಚು ಕಬಡ್ಡಿ ಆಟಗಾರರು ಹರಾಜಿಗೆ ನೋಂದಣಿ ಮಾಡಿಕೊಂಡಿದ್ದು, ವಿವಿಧ ತಂಡಗಳಿಗೆ ದೊಡ್ಡ ಮೊತ್ತಕ್ಕೆ ಖರೀದಿಯಾಗುವ ನಿರೀಕ್ಷೆಯಲ್ಲಿದ್ದಾರೆ.
ಈ ಬಾರಿ ಎಲ್ಲಾ 12 ತಂಡಗಳಿಗೂ ಆಟಗಾರರ ಖರೀದಿಗೆ 4.5 ಕೋಟಿ ರೂಪಾಯಿಗಳನ್ನು 5 ಕೋಟಿ ರೂಪಾಯಿಗೆ ಹೆಚ್ಚಿಸಲಾಗಿದೆ. ಆದರೆ ಸದ್ಯ ಎಲ್ಲಾ ತಂಡಗಳು ಕೆಲ ಆಟಗಾರರನ್ನು ರೀಟೈನ್ ಮಾಡಿಕೊಂಡಿದ್ದು, ಇನ್ನುಳಿದ ಆಟಗಾರರನ್ನು ಹರಾಜಿಗೆ ಬಿಡುಗಡೆ ಮಾಡಿವೆ. ಹರಾಜಿನಲ್ಲಿ ಅತ್ಯಧಿಕ ಮೊತ್ತಕ್ಕೆ ಯಾರು ಖರೀದಿಯಾಗಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.

ಪ್ರತಿ ತಂಡ ಕನಿಷ್ಠ 18 ಹಾಗೂ ಗರಿಷ್ಠ 25 ಆಟಗಾರರನ್ನು ಖರೀದಿಸಬಹುದಾಗಿದೆ. ಹಾಲಿ ಚಾಂಪಿಯನ್ ಬೆಂಗಳೂರು ಬುಲ್ಸ್‌ನಲ್ಲಿ 9 ಆಟಗಾರರಿದ್ದು, ಇನ್ನುಳಿದ ಆಟಗಾರರನ್ನು ಹರಾಜಿನಲ್ಲಿ ಖರೀದಿಸಲಿದೆ. ತಂಡಕ್ಕೆ ಹರಾಜಿನಲ್ಲಿ ಬಳಸಲು ಇನ್ನೂ 2.99 ಕೋಟಿ ರೂಪಾಯಿ ಪರ್ಸ್ ಮೌಲ್ಯ ಹೊಂದಿದೆ.
ಸ್ಟಾರ್ ಕಬಡ್ಡಿ ಆಟಗಾರರಿಗೆ ಭಾರೀ ಮೌಲ್ಯ ಸಾಧ್ಯತೆ
ಕಳೆದ ಬಾರಿ ಹರಾಜಿನಲ್ಲಿ ಸ್ಟಾರ್ ಕಬಡ್ಡಿ ಆಟಗಾರರಾದ ಪವನ್ ಸೆಹ್ರಾವತ್, ವಿಕಾಸ್ ಖಂಡೋಲಾ, ಫಜಲ್ ಅಟ್ರಾಚಲಿ, ಮಣೀಂದರ್ ಸಿಂಗ್, ಫಜಲ್ ಟಾಪ್-3 ದುಬಾರಿ ಆಟಗಾರರು ಎನಿಸಿಕೊಂಡಿದ್ದರು. ಈ ಬಾರಿ ಅವರನ್ನು ತಂಡಗಳು ರೀಟೈನ್ ಮಾಡಿಕೊಂಡಿಲ್ಲ.
ಪವನ್ ಸೆಹ್ರಾವತ್, ವಿಕಾಸ್ ಕಂಡೋಲಾ ಮತ್ತು ಫಜಲ್ ಅತ್ರಾಚಲಿ ಅವರಂತಹ ತಾರೆಗಳು ಹೆಚ್ಚು ಬೇಡಿಕೆಯಿರುವ ಹೆಸರುಗಳಾಗಿವೆ.
ಪವನ್ ಸೆಹ್ರಾವತ್ ಕಳೆದ ಬಾರಿ 2.26 ಕೋಟಿ ರೂಪಾಯಿಗೆ ತಮಿಳ್ ತಲೈವಾಸ್ ತಂಡಕ್ಕೆ ಖರೀದಿಯಾಗಿದ್ದರು. ಆದರೆ ಮೊದಲ ಪಂದ್ಯದಲ್ಲೇ ಗಾಯಗೊಂಡು ಲೀಗ್‌ನಿಂದ ಹೊರಬಿದ್ದಿದ್ದರು.
ಇತ್ತೀಚಿಗೆ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಚಿನ್ನದ ಪದಕ ಗೆಲ್ಲಿಸಿಕೊಟ್ಟಿರುವ ಪವನ್ ಸೆಹ್ರಾವತ್ ತಮ್ಮ ಫಿಟ್ನೆಸ್ ಸಾಬೀತುಪಡಿಸಿದ್ದು, ಈ ಬಾರಿಯೂ ಹರಾಜಿನಲ್ಲಿ ಅತಿಹೆಚ್ಚು ಮೊತ್ತಕ್ಕೆ ಖರೀದಿಯಾಗುವ ಸಾಧ್ಯತೆ ಇದೆ.

ಆಟಗಾರರ ವಿಭಾಗಗಳು
10ನೇ ಆವೃತ್ತಿಯ 2023ರ ಪ್ರೊ ಕಬಡ್ಡಿ ಲೀಗ್ ಹರಾಜಿನಲ್ಲಿ ಆಟಗಾರರನ್ನು ನಾಲ್ಕು ಗುಂಪುಗಳಾಗಿ ವರ್ಗೀಕರಿಸಲಾಗುತ್ತದೆ. ಎ, ಬಿ, ಸಿ ಮತ್ತು ಡಿ. ಪ್ರತಿ ವರ್ಗದಲ್ಲಿ ಅವರನ್ನು ಮತ್ತೆ "ಆಲ್-ರೌಂಡರ್ಸ್, ಡಿಫೆಂಡರ್ಸ್ ಮತ್ತು ರೈಡರ್ಸ್ ಎಂದು ವಿಂಗಡಿಸಲಾಗುತ್ತದೆ.
ದಿನಾಂಕ ಮತ್ತು ಸ್ಥಳ
ಬಹು ನಿರೀಕ್ಷಿತ ಪ್ರೊ ಕಬಡ್ಡಿ ಲೀಗ್ ಹರಾಜು ಪ್ರಕ್ರಿಯೆಯನ್ನು ಸೋಮವಾರ, ಅಕ್ಟೋಬರ್ 9 ಮತ್ತು ಮಂಗಳವಾರ, ಅಕ್ಟೋಬರ್ 10ರಂದು ನಿಗದಿಪಡಿಸಲಾಗಿದೆ. ಈ ಕಾರ್ಯಕ್ರಮ ಮುಂಬೈನಲ್ಲಿ ನಡೆಯಲಿದೆ.
ಪ್ರೊ ಕಬಡ್ಡಿ ಲೀಗ್ ಹರಾಜು ಸಮಯ:
ಪ್ರೊ ಕಬಡ್ಡಿ ಲೀಗ್ ಹರಾಜು ಕವರೇಜ್ ಮೊದಲ ದಿನ ಮತ್ತು ಎರಡನೇ ದಿನ ಭಾರತೀಯ ಕಾಲಮಾನ ರಾತ್ರಿ 8:30ಕ್ಕೆ ಪ್ರಾರಂಭವಾಗುತ್ತದೆ.
ಪ್ರೊ ಕಬಡ್ಡಿ ಲೀಗ್ ಹರಾಜು ಟಿವಿ ಮತ್ತು ಲೈವ್ ಸ್ಟ್ರೀಮಿಂಗ್
ಭಾರತದ ಕಬಡ್ಡಿ ಅಭಿಮಾನಿಗಳು ಟಿವಿ ಮತ್ತು ಆನ್‌ಲೈನ್‌ನಲ್ಲಿ ಪ್ರೊ ಕಬಡ್ಡಿ ಲೀಗ್ ಹರಾಜು ಪ್ರಕ್ರಿಯೆಯ ನೇರಪ್ರಸಾರವನ್ನು ಸ್ಟಾರ್ ಸ್ಪೋರ್ಟ್ಸ್ 2 ಎಸ್‌ಡಿ, ಸ್ಟಾರ್ ಸ್ಪೋರ್ಟ್ಸ್ 2 ಎಚ್‌ಡಿ ಮತ್ತು ಸ್ಟಾರ್ ಸ್ಪೋರ್ಟ್ಸ್ ಫಸ್ಟ್ ಚಾನೆಲ್‌ಗಳಲ್ಲಿ ವೀಕ್ಷಿಸಬಹುದು. ಅಲ್ಲದೆ, ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಲೈವ್ಸ್ಟ್ರೀಮಿಂಗ್ ಆಗಲಿದೆ.
ತಂಡದ ಬಳಿ ಇರುವ ಪರ್ಸ್ ಮೊತ್ತ ಮತ್ತು ಆಟಗಾರರು
ಬೆಂಗಾಲ್ ವಾರಿಯರ್ಸ್ - 4.22 ಕೋಟಿ ರೂ. - 8
ಬೆಂಗಳೂರು ಬುಲ್ಸ್ - 2.99 ಕೋಟಿ ರೂ. - 9
ದಬಾಂಗ್ ಡೆಲ್ಲಿ - 3.12 ಕೋಟಿ ರೂ. - 9
ಗುಜರಾತ್ ಜೈಂಟ್ಸ್ - 4.02 ಕೋಟಿ ರೂ. - 6
ಹರ್ಯಾಣ ಸ್ಟೀಲರ್ಸ್ - 3.13 ಕೋಟಿ ರೂ. 12
ಜೈಪುರ ಪಿಂಕ್ ಪ್ಯಾಂಥರ್ಸ್ - 0.87 ಕೋಟಿ ರೂ. -12
ಪಾಟ್ನಾ ಪೈರೇಟ್ಸ್ - 3.09 ಕೋಟಿ ರೂ. - 10
ಪುಣೇರಿ ಪಲ್ಟಾನ್ - 2.80 ಕೋಟಿ ರೂ. - 13
ತಮಿಳ್ ತಲೈವಾಸ್ - 2.43 ಕೋಟಿ ರೂ. - 14
ತೆಲುಗು ಟೈಟಾನ್ಸ್ - 3.44 ಕೋಟಿ ರೂ. - 9
ಯು ಮುಂಬಾ - 2.69 ಕೋಟಿ ರೂ. - 13
ಯುಪಿ ಯೋಧಾಸ್ - 2.06 ಕೋಟಿ ರೂ. - 10
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications