Pro Kabaddi: ಈ ಬಾರಿ ಹರಾಜಿನಲ್ಲಿ ಡಿಫೆಂಡರ್ಸ್‌ಗೆ ಒತ್ತು ನೀಡಿದ ಪುಣೇರಿ, ರೈಡರ್‌ಗೆ ಭಾರೀ ಮೊತ್ತ
ಪ್ರೊ ಕಬಡ್ಡಿ ಲೀಗ್ 11ನೇ ಆವೃತ್ತಿಗೆ ಕೆಲವೇ ವಾರಗಳು ಬಾಕಿ ಇವೆ. ಈ ಟೂರ್ನಿಯಲ್ಲಿ ಭಾಗವಹಿಸಲು ಆಟಗಾರರು ಸಹ ಸಜ್ಜಾಗಿದ್ದಾರೆ. ಇನ್ನು ಈ ಕಬಡ್ಡಿ ಲೀಗ್‌ಗೆ ಹರಾಜು ಪ್ರಕ್ರಿಯೆ ನಡೆಯಿತು. ಈ ಹರಾಜಿನಲ್ಲಿ ಮಾಲೀಕರು ಅಳೆದು ತೂಗಿ ಆಟಗಾರರಿಗೆ ಮಣೆ ಹಾಕಿದರು. ಫ್ರಾಂಚೈಸಿಗಳು ಅಳೆದು ತೂಗಿ ಆಟಗಾರರನ್ನು ತಮ್ಮ ತಂಡಕ್ಕೆ ಆಯ್ಕೆ ಮಾಡಿಕೊಂಡವು.
ಹಾಲಿ ಚಾಂಪಿಯನ್ ಪುಣೇರಿ ಪಲ್ಟನ್ ಸಹ ಈ ಹರಾಜಿನಲ್ಲಿ ಸ್ಟಾರ್ ಆಟಗಾರರನ್ನು ಖರೀದಿ ಮಾಡಿತು. ಈ ಹರಾಜಿನಲ್ಲಿ ಪುಣೇರಿ ಸ್ಟಾರ್ ಆಟಗಾರರು ಸೇರಿದಂತೆ ಅನುಭವಿ ಆಟಗಾರರಿಗೆ ಮಣೆ ಹಾಕಿತು. ಈ ಮೂಲಕ ಪುಣೇರಿ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳುವ ಪ್ಲ್ಯಾನ್ ಮಾಡಿಕೊಂಡಿದೆ. ಈ ಹರಾಜಿನಲ್ಲಿ ಪುಣೇರಿ ತಂಡ ಖರೀದಿ ಮಾಡಿದ ಮೂವರು ದುಬಾರಿ ಆಟಗಾರರ ಪಟ್ಟಿ ಇಲ್ಲಿದೆ.

ಮೊಹಮ್ಮದ್ ಅಮನ್
ಪುಣೇರಿ ಪಲ್ಟನ್ ಪರ ಚೊಚ್ಚಲ ಬಾರಿಗೆ ಕಣಕ್ಕೆ ಇಳಿಯಲು ಮೊಹಮ್ಮದ್ ಅಮನ್ ತಯಾರಿ ನಡೆಸಿದ್ದಾರೆ. ಇವರು ರಕ್ಷಣಾ ವಿಭಾಗದಲ್ಲಿ ತಮ್ಮ ಛಾಪು ಮೂಡಿಸಿದ ಆಟಗಾರ. ಇವರಿಗೆ ಪುಣೇರಿ ಬರೋಬ್ಬರಿ 16.2 ಲಕ್ಷ ರೂಪಾಯಿಗೆ ಖರೀದಿ ಮಾಡಿದೆ.
ಅಮನ್ 60 ಪಂದ್ಯಗಳಲ್ಲಿ 137 ಅಂಕಗಳನ್ನು ಕಲೆ ಹಾಕಿದ್ದಾರೆ. ಇದರಲ್ಲಿ ಏಳು ಸೂಪರ್ ಟ್ಯಾಕಲ್ ಸೇರಿದ್ದು, 4 ಬಾರಿ ಹೈಫೈ ಸಾಧನೆ ಮಾಡಿವೆ. ಇವರು ಒಟ್ಟಾರೆ 301 ಬಾರಿ ಟ್ಯಾಕಲ್ ಮಾಡಿದ್ದಾರೆ.
ಡಿಫೆಂಡರ್‌ಗಳಿಗೆ ಮಣೆ ಹಾಕಿದ ಪುಣೇರಿ
ಪುಣೇರಿ ಪಲ್ಟನ್ ಮತ್ತೊಬ್ಬ ಸ್ಟಾರ್ ಡಿಫೆಂಡರ್ ಮೋಹಿತ್ ಅವರನ್ನು ಖರೀದಿಸಿದೆ. ಇವರನ್ನು ಕೊಂಡ ಕೊಳ್ಳಲು ನಡೆದ ಜಿದ್ದಿನಲ್ಲಿ ಪುಣೇರಿ ಜಯ ಸಾಧಿಸಿದೆ. ಮೋಹಿತ್ 20 ಲಕ್ಷವನ್ನು ನೀಡಿ ತಮ್ಮ ತಂಡದ ಜೆರ್ಸಿಯನ್ನು ನೀಡಿದೆ. ಮೋಹಿತ್ ಅವರ ಹೆಗಲಿಗೆ ಪುಣೇರಿ ಪಲ್ಟನ್ ತನ್ನ ರಕ್ಷಣಾ ವಿಭಾಗದ ಜವಾಬ್ದಾರಿಯನ್ನು ಹೇರಲಿದೆ. ಕಳೆದ ಆವೃತ್ತಿಯಲ್ಲಿ ಹರಿಯಾಣ ಸ್ಟೀಲರ್ಸ್ ಪರ ಆಡಿದ್ದ ಮೋಹಿತ್ ಅವರು ಎಲ್ಲರ ಮನ ಗೆದ್ದಿದ್ದರು. ಇವರು ಪುಣೇರಿಗೆ ಎಷ್ಟು ಬಲವನ್ನು ತುಂಬುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಅಜಿತ್ ಕುಮಾರ್
10ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನಲ್ಲಿ ಜೈಪೂರು ಪ್ಯಾಂಕ್ ಪ್ಯಾಂಥರ್ಸ್ ಪರ ಆಡಿದ್ದ ಅಜಿತ್ ಕುಮಾರ್ ಅಮೋಘ ಆಟದ ಪ್ರದರ್ಶನ ನೀಡಿದ್ದರು. ಇವರು ಕಳೆದ ಆವೃತ್ತಿಯಲ್ಲಿ ಆಡಿದ 19 ಪಂದ್ಯಗಳಲ್ಲಿ 82 ರೇಡ್ ಪಾಯಿಂಟ್‌ಗಳನ್ನು ಕಲೆ ಹಾಕುವಲ್ಲಿ ಸಫಲರಾಗಿದ್ದರು. ಇವರಿಗೆ ಪುಣೇರಿ 66 ಲಕ್ಷ ರೂಪಾಯಿಗಳನ್ನು ನೀಡಿ ಖರೀದಿ ಮಾಡಿದೆ.
ಅಜಿತ್ ಕುಮಾರ್ ಪ್ರೊ ಕಬಡ್ಡಿ ಲೀಗ್‌ನಲ್ಲಿ ಆಡಿದ 79 ಪಂದ್ಯಗಳಲ್ಲಿ 465 ಅಂಕಗಳನ್ನು ಕಲೆ ಹಾಕಿದ್ದಾರೆ. ಇವರು ಒಟ್ಟು 915 ಬಾರಿ ಎದುರಾಳಿ ಕೋರ್ಟ್‌ಗೆ ಎಂಟ್ರಿ ನಿಡಿದ್ದಾರೆ. ಈ ವೇಳೆ ಇವರ ಸಕ್ಸರ್ ಪರ್ಸೆಂಟೇಜ್ 41 ಆಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications