For Quick Alerts
ALLOW NOTIFICATIONS  
For Daily Alerts

Pro Kabaddi: ಶುಭಾರಂಭ ಮಾಡಿದ ತಮಿಳು ತಲೈವಾಸ್

ಭರ್ಜರಿ ಪ್ರದರ್ಶನವನ್ನು ನೀಡಿದ ತಮಿಳು ತಲೈವಾಸ್ ತಂಡ ಪ್ರೊ ಕಬಡ್ಡಿ ಲೀಗ್‌ನ 11ನೇ ಆವೃತ್ತಿಯಲ್ಲಿ ತೆಲಗು ಟೈಟನ್ಸ್‌ ತಂಡವನ್ನು ಮಣಿಸಿ ಶುಭಾರಂಭ ಮಾಡಿದೆ.

ಶನಿವಾರ ನಡೆದ ಮೊದಲ ಪಂದ್ಯದಲ್ಲಿ ತಮಿಳು ತಲೈವಾಸ್ 44-29 ರಿಂದ ತೆಲಗು ಟೈಟನ್ಸ್ ತಂಡವನ್ನು ಸೋಲಿಸಿ ಟೂರ್ನಿಯಲ್ಲಿ ಮೊದಲ ಗೆಲುವಿನ ನಗೆ ಬೀರಿದೆ. ಸಂಘಟಿತ ಆಟದ ಪ್ರದರ್ಶನ ನೀಡಿದ ತಮಿಳು ತಲೈವಾಸ್‌ ಸೊಗಸಾದ ಪ್ರದರ್ಶನ ನೀಡಿ ಗೆಲುವು ದಾಖಲಿಸಿದೆ.

Tamil Thalaivas Begin Pro Kabaddi League Season with Dominant 44-29 Victory Over Telugu Titans

ತಮಿಳು ತಲೈವಾಸ್‌ ತಂಡದ ಪರ ನರೇಂದ್ರ ಕಂಡಲಾ ಹಾಗೂ ಸಚಿನ್‌ ತಲಾ 10 ಅಂಕಗಳನ್ನು ಕಲೆ ಹಾಕಿ ಗೆಲುವಿನಲ್ಲಿ ಮಿಚಿದರು. ಆರಂಭದಿಂದಲೇ ತಮಿಳು ತಲೈವಾಸ್‌ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ಪರಿಣಾಮ ಮೊದಲಾವಧಿಯಲ್ಲಿ ಮೂರು ಅಂಕಗಳ ಮುನ್ನಡೆ ಸಾಧಿಸಿತು.

ಮೊದಲಾವಧಿಯಲ್ಲಿ ತಲೈವಾಸ್ ಅಬ್ಬರ

ಮೊದಲಾವಧಿಯ ಆಟದಲ್ಲಿ ತಮಿಳು ತಲೈವಾಸ್ 20-17 ಅಂಕಗಳೊಂದಿಗೆ ತೆಲಗು ಟೈಟನ್ಸ್‌ ವಿರುದ್ಧ ಮುನ್ನಡೆ ಸಾಧಿಸಿತು. ಈ ವೇಳೆ ಉಭಯ ತಂಡಗಳು ಭರ್ಜರಿ ದಾಳಿ ನಡೆಸಿದವು. ಟ್ಯಾಕಲ್‌ನಲ್ಲಿ ತಮಿಳು ತಲೈವಾಸ್ ತಂಡದ ಕೈ ಕೊಂಚ ಮೇಲಾಗಿದ್ದರಿಂದ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ಈ ವೇಳೆ ತೆಲಗು ಟೈಟನ್ಸ್ ಒಂದು ಬಾರಿ ಅಂಕಣವನ್ನು ಖಾಲಿ ಮಾಡಿತು.

ಎರಡನೇ ಅವಧಿಯ ಆಟದಲ್ಲಿ ಅಬ್ಬರದ ಪ್ರದರ್ಶನ ನೀಡಿದ ತಲೈವಾಸ್‌ ಅಮೋಘ ಪ್ರದರ್ಶನ ನೀಡಿತು. ದಾಳಿಗಿಂತಲೂ ಟ್ಯಾಕಲ್‌ನಲ್ಲಿ ತಲೈವಾಸ್ ಆರ್ಭಟ ಜೋರಾಗಿತ್ತು. ಈ ಅವಧಿಯಲ್ಲಿ ತಮಿಳು 24-12ರಿಂದ ಮುನ್ನಡೆ ಸಾಧಿಸಿ ಸುಲಭ ಗೆಲುವಿನ ನಗೆ ಬೀರಿತು. ಎರಡನೇ ಅವಧಿಯ ಟ್ಯಾಕಲ್‌ನಲ್ಲಿ ತಲೈವಾಸ್‌ 10 ಅಂಕಗಳನ್ನು ಕಲೆ ಹಾಕಿತು. ಅಲ್ಲದೆ ಈ ಅವಧಿಯಲ್ಲಿ ಎರಡು ಬಾರಿ ತೆಲಗು ಟೈಟನ್ಸ್ ತಂಡವನ್ನು ಆಲೌಟ್ ಮಾಡಿ ಬೋನ್ಸ್ ಅಂಕವನ್ನು ಕಲೆ ಹಾಕಿತು.

ಪಂದ್ಯದಲ್ಲಿ ತಲೈವಾಸ್ ಹಾಗೂ ಟೈಟನ್ಸ್ ಒಟ್ಟು 46 ಬಾರಿ ಎದುರಾಳಿ ಅಂಕಣವನ್ನು ಪ್ರವೇಶಿಸಿದವು. ಈ ವೇಳೆ ತಮಿಳು 17 ಅಂಕ ಕಲೆ ಹಾಕಿದರೆ, ತೆಲಗು 16 ಅಂಕ ಸೇರಿಸಿತು. ಟ್ಯಾಕಲ್‌ನಲ್ಲಿ ತಲೈವಾಸ್ ಆರ್ಭಟ ಜೋರಾಗಿತ್ತು. ಈ ವೇಳೆ ತಲೈವಾಸ್‌ 16 ಅಂಕಗಳನ್ನು ಸೇರಿಸಿ ಜಯಕ್ಕೆ ತನ್ನದೇ ಕೊಡುಗೆ ನೀಡಿತು.

ಪುಣೇರಿಗೆ ಜಯ

ಶನಿವಾರ ನಡೆದ ಎರಡನೇ ಪಂದ್ಯದಲ್ಲಿ ಪುಣೇರಿ ಪಲ್ಟನ್‌ 35-25 ರಿಂದ ಹರಿಯಾಣ ಸ್ಟೀಲರ್ಸ್‌ ತಂಡವನ್ನು ಮಣಿಸಿತು. ಮೊದಲಾವಧಿಯಿಂದಲೂ ಪುಣೇರಿ ಪಲ್ಟನ್ ಮನೋಹಕ ಪ್ರದರ್ಶನ ನೀಡಿತು. ಈ ಅವಧಿಯಲ್ಲಿ 19-23 ಅಂಕಗಳಿಂದ ಹರಿಯಾಣ ವಿರುದ್ಧ ಮುನ್ನಡೆ ಸಾಧಿಸಿತು. ಈ ಅವಧಿಯಲ್ಲಿ ಉಭಯ ತಂಡಗಳು ದಾಳಿ ಹಾಗೂ ಟ್ಯಾಕಲ್‌ ನಲ್ಲಿ ಸ್ಥಿರ ಪ್ರದರ್ಶನ ನೀಡಿದವು. ಇದೇ ಅವಧಿಯಲ್ಲಿ ಪುಣೇರಿ ಒಂದು ಬಾರಿ ಬೋನಸ್‌ ಅಂಕವನ್ನು ಕಲೆ ಹಾಕಿತು. ಎರಡನೇ ಅವಧಿಯಲ್ಲಿ ಪುಣೇರಿ ಸ್ಥಿರ ಪ್ರದರ್ಶನವನ್ನು ನೀಡಿ ಅಂಕ ಬೇಟೆಯಲ್ಲಿ ಮುನ್ನಡೆ ಸಾಧಿಸಿತು. ಪುಣೇರಿ ತಂಡ ಸಂಘಟಿತ ಆಟದ ಪ್ರದರ್ಶನ ನೀಡಿತು.

Story first published: Saturday, October 19, 2024, 22:24 [IST]
Other articles published on Oct 19, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+