Pro Kabaddi: ಸಚಿನ್ ದುಬಾರಿ ಆಟಗಾರ; 1.1 ಕೋಟಿ ರೂ.ಗೆ ಬೆಂಗಳೂರು ತಂಡ ಸೇರಿದ ಅಜಿಂಕ್ಯ ಪವಾರ್
ಪ್ರೊ ಕಬಡ್ಡಿ ಲೀಗ್ ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಇದಕ್ಕೂ ಮೊದಲು ಆಗಸ್ಟ್ 15 ರಂದು ಆಟಗಾರರ ಹರಾಜು ನಡೆಸಲಾಯಿತು. ಈ ಹಾರಜಿನಲ್ಲಿ ಮಾಲೀಕರು ಸ್ಟಾರ್ ಆಟಗಾರರಿಗೆ ಕೋಟಿ ಕೋಟಿ ರೂಪಾಯಿ ಹಣವನ್ನು ನೀಡಿ ತಮ್ಮ ತಂಡಗಳಿಗೆ ಸೇರಿಸಿಕೊಂಡರು. ಈ ಹರಾಜಿನಲ್ಲಿ ಎಲ್ಲರ ಚಿತ್ತ ಕದ್ದ ಪ್ಲೇಯರ್ ಸಚಿನ್ ತನ್ವರ್.
ಹರಾಜು ಅಂಗಳದಲ್ಲಿ ಸಚಿನ್ ತನ್ವರ್ ಹೆಸರು ಕೇಳುತ್ತಿದ್ದಂತೆ ಕಬ್ಬಡಿ ತಂಡದ ಮಾಲೀಕರ ಕಿವಿ ಎದ್ದು ನಿಂತವು. ಈ ಪ್ಲೇಯರ್ ತಮ್ಮ ತಂಡಕ್ಕೆ ಬೇಕು ಎಂದು ಬಾಜಿ ಕಟ್ಟಲು ಆರಂಭಿಸಿದರು. ನೋಡ ನೋಡುತ್ತಿದ್ದಂತೆ ಸಚಿನ್ ಮೌಲ್ಯ ಬೆಳೆಯುತ್ತಲೇ ಸಾಗಿತು. ಕೊನೆಗೆ ತಮಿಳು ತಲೈವಾಸ್ ತಂಡ ಬಾಜಿ ಗೆದ್ದಿತು. ಇನ್ನು 11ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನಲ್ಲಿ ಸಚಿನ್ ತನ್ವರ್ ತಮಿಳು ತಲೈವಾಸ್ ಪರ ಆಡಲಿದ್ದಾರೆ. ಇವರಿಗೆ ತಲೈವಾಸ್ 2.15 ಕೋಟಿ ರೂಪಾಯಿ ನೀಡಿತು.

ಸ್ಟಾರ್ ರೈಡರ್ಸ್ ಸಚಿನ್
ಸಚಿನ್ ಒಬ್ಬ ಸ್ಟಾರ್ ರೈಡರ್. ತಲೈವಾಸ್ ಈ ಸ್ಟಾರ್ ರೈಡರ್‌ನನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳುವ ಮೂಲಕ ಪ್ರಶಸ್ತಿ ಗೆಲುವಿನ ಕನಸು ಕಾಣುತ್ತಿದೆ. ಈ ಆವೃತ್ತಿಯ ಹರಾಜಿನಲ್ಲಿ ಇವರಿಗೆ ದಾಖಲೆಯ ಮೊತ್ತ ನೀಡಿ ತಮಿಳು ತಂಡ ಖರೀದಿಸಿದೆ. ಸಚಿನ್ ಈ ಹಿಂದೆ ಪಾಟ್ನಾ ಪೈರೇಟ್ಸ್ ತಂಡದ ಪರ ಆಡಿದ್ದರು.
ಸಚಿನ್ ಒಬ್ಬ ಸ್ಟಾರ್ ರೈಡರ್. ಇವರು ಪ್ರೊ ಕಬಡ್ಡಿ ಲೀಗ್‌ನಲ್ಲಿ ಈವರೆಗೆ 128 ಪಂದ್ಯಗಳನ್ನು ಆಡಿದ್ದು, 1006 ಪಾಯಿಂಟ್‌ಗಳನ್ನು ಕಲೆ ಹಾಕಿದ್ದಾರೆ. ಅಲ್ಲದೆ ರಕ್ಷಣಾ ವಿಭಾಗಕ್ಕೂ ಇವರು ಬಲ ತುಂಬ ಬಲ್ಲ ಪ್ಲೇಯರ್.

ಇರಾನಿ ಪ್ಲೇಯರ್‌ಗೆ ಬಹು ಬೇಡಿಕೆ
ಈ ಆವೃತ್ತಿಯ ಅತಿ ಹೆಚ್ಚು ಬೆಲೆಗೆ ಬಿಡ್ ಆದ ಇನ್ನೋರ್ವ ಆಟಗಾರ ಮೊಹಮ್ಮದ್‌ರೇಜಾ. ಇರಾನ್ ತಂಡದ ಸ್ಟಾರ್ ಆಟಗಾರ ಹರಾಜಿಗೆ ಬರುತ್ತಿದ್ದಂತೆ ಇವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಮಾಲೀಕರು ಹಣದ ಹೊಳೆ ಹರಿಸಲು ಆರಂಭಿಸಿದರು. ಇವರಿಗೆ ಹರಿಯಾಣ 2.07 ಕೋಟಿ ನೀಡಿ ತಮ್ಮ ತಂಡಕ್ಕೆ ಸೇರಿಸಿಕೊಂಡಿತು. ಮೊಹಮ್ಮದ್‌ರೇಜಾ ಕಳೆದ ಬಾರಿಯ ಟೂರ್ನಿಯಲ್ಲಿ ಪುಣೇರಿ ಪಲ್ಟನ್ ಪರ ಆಡಿದ್ದರು. ಆಡಿದ 24 ಪಂದ್ಯಗಳಲ್ಲಿ ಇವರು 126 ಅಂಕಗಳನ್ನು ಕಲೆ ಹಾಕಿ ಅಬ್ಬರಿಸಿದ್ದರು.
ಗುಮಾನ್ ಸಿಂಗ್ ಮೇಲೆ ಗುಜರಾತ್ ಜೈಂಟ್ಸ್ ಭಾರೀ ಹಣವನ್ನು ಹೂಡಿತು. ಗುಮಾನ್ ಸಿಂಗ್ ಅವರಿಗೆ 1.97 ಕೋಟಿಗೆ ಅವರನ್ನು ಖರೀದಿಸಿತು. ಗುಮಾನ್ ಕಳೆದ ಋತುವಿನಲ್ಲಿ ಯು ಮುಂಬಾ ಪರ 18 ಪಂದ್ಯಗಳಲ್ಲಿ 168 ಅಂಕ ಪಡೆದಿದ್ದರು. ಒಟ್ಟಾರೆ ಪ್ರೊ ಕಬಡ್ಡಿಯಲ್ಲಿ ಗುಮಾನ್ ಸಿಂಗ್ ಒಟ್ಟು 58 ಪಂದ್ಯಗಳಲ್ಲಿ 407 ಅಂಕವನ್ನು ಕಲೆ ಹಾಕಿದರು.

ಉಳಿದಂತೆ ಪವನ್ ಸೆಹ್ರಾವತ್ 1.75 ಕೋಟಿ ರೂ.ಗೆ ತೆಲುಗು ಟೈಟನ್ಸ್ ತಂಡ ಪಾಲಾದರು. ಭರತ್ 1.30 ಕೋಟಿ ರೂ.ಗೆ ಯುಪಿ ಯೋಧಾಸ್ ತಂಡ ಸೇರಿಕೊಂಡರು.
ಬೆಂಗಳೂರು ತಂಡಕ್ಕೆ ಅಜಿಂಕ್ಯ ಪವಾರ್
ಬೆಂಗಳೂರು ತಂಡವನ್ನು ಅಜಿಂಕ್ಯ ಪವಾರ್ ಸೇರಿಕೊಂಡಿದ್ದಾರೆ. ಸ್ಟಾರ್ ರೈಡರ್ ಅಜಿಂಕ್ಯ ಪವಾರ್ ಬುಲ್ಸ್ ತಂಡ ಸೇರಿದ್ದಾರೆ. ಇವರು ಪ್ರೋ ಕಬಡ್ಡಿ ಲೀಗ್‌ನಲ್ಲಿ 92 ಪಂದ್ಯಗಳಲ್ಲಿ 484 ಅಂಕಗಳನ್ನು ಕಲೆ ಹಾಕಿದ್ದಾರೆ. ಕಳೆದ ಆವೃತ್ತಿಯಲ್ಲಿ ಇವರು ತಮಿಳು ತಲೈವಾಸ್ ತಂಡದ ಪರ 21 ಪಂದ್ಯಗಳನ್ನು ಆಡಿದ್ದು 133 ಅಂಕಗಳನ್ನು ಸೇರಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications