Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Pro Kabaddi: ಮುಂಬಾ, ಟೈಟಾನ್ಸ್‌ಗೆ ಭರ್ಜರಿ ಗೆಲುವು, ಅಂಕ ಪಟ್ಟಿಯಲ್ಲಿ ಬಡ್ತಿ

11ನೇ ಆವೃತ್ತಿ ಪ್ರೊ ಕಬಡ್ಡಿ ಲೀಗ್‌ನಲ್ಲಿ ತೆಲುಗು ಟೈಟಾನ್ಸ್ ಹಾಗೂ ಯು-ಮುಂಬಾ ತಂಡಗಳು ಜಯ ಸಾಧಿಸಿವೆ. ಬುಧವಾರ ನಡೆದ ಮೊದಲ ಪಂದ್ಯದಲ್ಲಿ ಮುಂಬಾ 42-40 ರಿಂದ ಪಾಟ್ನಾ ಪೈರೇಟ್ಸ್‌ ತಂಡವನ್ನು, ಎರಡನೇ ಪಂದ್ಯದಲ್ಲಿ ತೆಲುಗು ಟೈಟಾನ್ಸ್ 35-34 ರಿಂದ ತಮಿಳು ತಲೈವಾಸ್ ತಂಡವನ್ನು ಮಣಿಸಿತು.

ರೋಚಕ ಪಂದ್ಯವನ್ನು ಗೆದ್ದ ತೆಲುಗು ಟೈಟಾನ್ಸ್‌ ಆಡಿದ 7 ಪಂದ್ಯಗಳಲ್ಲಿ 4 ಜಯ, 3 ಸೋಲು ಕಂಡಿದ್ದು, 21 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಯು-ಮುಂಬಾ ತಂಡ ಆಡಿದ ಆಡಿದ 7 ಪಂದ್ಯಗಳಲ್ಲಿ 4 ಜಯ, 2 ಸೋಲು, 1 ಡ್ರಾ ಸಾಧಿಸಿದ್ದು, 24 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.

Telugu Titans and U-Mumba Secure Thrilling Wins in Pro Kabaddi League 11

ಜಿದ್ದಾಜಿದ್ದಿನ ಕಾದಾಟ

ಎರಡನೇ ಪಂದ್ಯದಲ್ಲಿ ತೆಲುಗು ಟೈಟಾನ್ಸ್‌ ಹಾಗೂ ತಮಿಳು ತಲೈವಾಸ್ ತಂಡಗಳು ಉತ್ತಮ ಆರಂಭವನ್ನು ನೀಡಿದವು. ಐದು ನಿಮಿಷಗಳ ಆಟದಲ್ಲಿ ಸಮಬಲದಲ್ಲಿ ಸಾಗಿತು. ಮೊದಲ 10 ನಿಮಿಷಗಳಲ್ಲಿ ಟೈಟಾನ್ಸ್ 14-10ರಲ್ಲಿ ಮುಂದಿತ್ತು. ಇದಾದ ಬಳಿಕ ಪವನ್‌ ಅಮೋಘ ದಾಳಿಯನ್ನು ನಡೆಸಿದರು. ಇವರ ಸ್ಥಿರ ಪ್ರದರ್ಶನದ ಫಲವಾಗಿ ತೆಲುಗು ಅಂಕ ಬೇಟೆಯಲ್ಲಿ ಕೊಂಚ ಮುನ್ನಡೆ ಸಾಧಿಸಿತು.

ಮೊದಲಾವಧಿಯ 20 ನಿಮಿಷದ ಆಟದಲ್ಲಿ ಟೈಟಾನ್ಸ್‌ 20-17 ಅಂಕಗಳಿಂದ ತಮಿಳು ವಿರುದ್ಧ ಮುನ್ನಡೆ ಸಾಧಿಸಿತು. ಈ ವೇಳೆ ದಾಳಿಯಲ್ಲಿ ಉಭಯ ತಂಡಗಳು ಅಮೋಘ ಪ್ರದರ್ಶನವನ್ನು ನೀಡಿದವು. ಈ ವೇಳೆ ತಲೈವಾಸ್ ಒಂದು ಬಾರಿ ಅಂಗಳ ಖಾಲಿ ಮಾಡಿತು. ಪರಿಣಾಮ ಟೈಟಾನ್ಸ್‌ಗೆ ಬೋನಸ್ ಅಂಕ ಲಭಿಸಿತು.

Telugu Titans and U-Mumba Secure Thrilling Wins in Pro Kabaddi League 11

ಸಚಿನ್‌ 1000

ಎರಡನೇ ಅವಧಿಯ ಆಟದಲ್ಲಿ ತಮಿಳು ತಲೈವಾಸ್‌ ಜಿದ್ದಾಜಿದ್ದಿನ ಆಟವನ್ನು ಆಡಿತು. ತಲೈವಾಸ್‌ ಈ ಅವಧಿಯಲ್ಲಿ 17-15 ಅಂಕಗಳಿಂದ ಮುನ್ನಡೆ ಸಾಧಿಸಿತು. ಈ ವೇಳೆ ದಾಳಿ ಹಾಗೂ ಟ್ಯಾಕಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿದವು. ಈ ಅವಧಿಯಲ್ಲಿ ತೆಲುಗು ಟೈಟಾನ್ಸ್‌ ಒಂದು ಬಾರಿ ಆಲೌಟ್ ಆಯಿತು. ವಿಜೇತ ತಂಡದ ಪರ ಪವನ್‌ ಶೇರಾವತ್‌ 20 ಬಾರಿ ಎದುರಾಳಿ ಕೋರ್ಟ್‌ಗೆ ಎಂಟ್ರಿ ನೀಡಿ 9 ಟಚ್‌ ಪಾಯಿಂಟ್, 2 ಬೋನಸ್‌ ಅಂಕ, 1 ಟ್ಯಾಕಲ್‌ ಅಂಕವನ್ನು ಕಲೆ ಹಾಕಿ 12 ಅಂಕ ಕಲೆ ಹಾಕಿ ಗೆಲುವಿನಲ್ಲಿ ಮಿಂಚಿದರು. ಇನ್ನು ಆಶೀಶ್‌ ನರ್ವಾಲ್‌ 9 ಅಂಕ ಕಲೆ ಹಾಕಿದರು. ಪರಾಜಿತ ತಂಡದ ಪರ ಸಚಿನ್‌ 17 ಅಂಕ ಕಲೆ ಹಾಕಿದರು. ಈ ಮೂಲಕ ಪ್ರೊ ಕಬಡ್ಡಿ ಲೀಗ್‌ನಲ್ಲಿ 1000 ಅಂಕವನ್ನು ಕಲೆ ಹಾಕಿದರು.

ಗುರುವಾರ ನಡೆಯುವ ಮೊದಲ ಪಂದ್ಯದಲ್ಲಿ ಬಂಗಾಳ ವಾರಿಯರ್ಸ್‌ ಹಾಗೂ ದಬಾಂಗ್ ದೆಹಲಿ ಕೆಸಿ ತಂಡಗಳು ಎರಡನೇ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್‌ ಹಾಗೂ ಗುಜರಾತ್ ಟೈಟನ್ಸ್‌ ತಂಡಗಳು ಕಾದಾಟ ನಡೆಸಲಿವೆ. ಯಾವ ತಂಡ ಅಂಕ ಪಟ್ಟಿಯಲ್ಲಿ ಬಡ್ತಿ ಪಡೆಯುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Story first published: Wednesday, November 6, 2024, 23:07 [IST]
Other articles published on Nov 6, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+