Pro Kabaddi 2025: ವಾರಿಯರ್ಸ್ ಮಣಿಸಿದ ಟೈಟಾನ್ಸ್
ಸ್ಟಾರ್ ಆಟಗಾರ ವಿಜಯ್ ಮಲಿಕ್ ಹಾಗೂ ಆಲ್‌ರೌಂಡರ್ ಆಟಗಾರ ಭರತ್ ಅವರ ಅಮೋಘ ಆಟದ ನೆರವಿನಿಂದ 12ನೇ ಆವೃತ್ತಿಯ ಪ್ರೊ ಕಬಡ್ಡಿ ಟೂರ್ನಿಯಲ್ಲಿ ತೆಲುಗು ಟೈಟಾನ್ಸ್ ತಂಡ 44-34 ರಿಂದ ಬಂಗಾಳ ವಾರಿಯರ್ಸ್ ತಂಡವನ್ನು ಮಣಿಸಿ ಟೂರ್ನಿಯಲ್ಲಿ ಎರಡನೇ ಗೆಲುವಿನ ನಗೆ ಬೀರಿದೆ.
ಭಾನುವಾರ ನಡೆದ ಮೊದಲ ಪಂದ್ಯದಲ್ಲಿ ತೆಲುಗು ತಂಡ ಆರಂಭದಿಂದಲೂ ಅಮೋಘ ಆಟದ ಪ್ರದರ್ಶನ ನೀಡಿತು. ಈ ಮೂಲಕ ಸತತ ಎರಡನೇ ಗೆಲುವಿನ ನಗೆ ಬೀರಿದೆ. ದಾಳಿ ಹಾಗೂ ಟ್ಯಾಕಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿದ ಟೈಟನ್ಸ್ ಅಬ್ಬರಿಸಿದೆ. ಮೊದಲಾವಧಿಯ 20 ನಿಮಿಷದಲ್ಲಿ ತೆಲುಗು ಟೈಟಾನ್ಸ್ ತಂಡ 23-14 ರಿಂದ ಬಂಗಾಳ ವಾರಿಯರ್ಸ್ ವಿರುದ್ಧ ಮುನ್ನಡೆ ಸಾಧಿಸಿತು. ಈ ಅವಧಿಯಲ್ಲಿ ತೆಲುಗು ಟೈಟಾನ್ಸ್ ತಂಡ ಅಮೋಘ ದಾಳಿ ನಡೆಸಿತು. ಒಟ್ಟು 15 ಅಂಕಗಳನ್ನು ದಾಳಿಯಲ್ಲಿ ಕಲೆ ಹಾಕಿದ ಟೈಟಾನ್ಸ್, 5 ಅಂಕಗಳನ್ನು ಟ್ಯಾಕಲ್‌ನಲ್ಲಿ ಕಲೆ ಹಾಕಿತು. ಅಲ್ಲದೆ ಇದೇ ಅವಧಿಯಲ್ಲಿ ಬಂಗಾಳ ತಂಡವನ್ನು ತೆಲುಗು ಒಮ್ಮೆ ಆಲೌಟ್ ಮಾಡಿ, ಬೋನಸ್ ಅಂಕವನ್ನು ಕಲೆ ಹಾಕಿತು.

ಎರಡನೇ ಅವಧಿಯ ಆಟದಲ್ಲಿ ಬಂಗಳಾ ಪುಟಿದೇಳುವ ಸೂಚನೆ ನೀಡಿತು. ಈ ಅವಧಿಯಲ್ಲಿ ಅಬ್ಬರದ ಪ್ರದರ್ಶನ ನೀಡಿದ ವಾರಿಯರ್ಸ್ ಮೊದಲಾವಧಿಯಲ್ಲಿ ಕಂಡಿದ್ದ ಅಕಗಳ ಹಿನ್ನಡೆಯನ್ನು ಮೀರಿ ನಿಲ್ಲಲು ಸಾಧ್ಯವಾಗಲಿಲ್ಲ. ಈ ಅವಧಿಯಲ್ಲಿ ತೆಲುಗು ದಾಳಿಯಲ್ಲಿ 11 ಅಂಕವನ್ನು ಕಲೆ ಹಾಕಿದ್ರೆ ಟ್ಯಾಕಲ್‌ನಲ್ಲಿ 5 ಅಂಕ ಸೇರಿಸಿತು. ಉಳಿದಂತೆ ಈ ಅವಧಿಯಲ್ಲಿ ಉಭಯ ತಂಡಗಳು ತಲಾ ಒಂದು ಬಾರಿ ಆಲೌಟ್ ಆದವು. ಒಟ್ಟಾರೆ ಪಂದ್ಯದಲ್ಲಿ ಬಂಗಾಳ ದಾಳಿಯಲ್ಲಿ 16 ಅಂಕ ಸೇರಿಸಿದರೆ, ಟೈಟನ್ಸ್ 17 ಅಂಕ ಸೇರಿಸಿತು. ಇನ್ನು ಟ್ಯಾಕಲ್‌ನಲ್ಲಿ ಉಭಯ ತಂಡಗಳು ಸಮಬಲದ ಪ್ರದರ್ಶನ ನೀಡಿದವು. ಇದೇ ವೇಳೆ ವಿಜೇತ ತಂಡದ ಪರ ವಿಜಯ್ ಮಲಿಕ್ 16 ಬಾರಿ ಎದುರಾಳಿ ಕೋರ್ಟ್‌ಗೆ ಎಂಟ್ರಿ ನೀಡಿ 11 ಅಂಕ ಕಲೆ ಹಾಕಿದರು. ಸ್ಟಾರ್ ಆಲ್‌ರೌಂಡರ್ ಭರತ್ ಟ್ಯಾಕಲ್‌ನಲ್ಲಿ 1 ಹಾಗೂ ದಾಳಿಯಲ್ಲಿ 11 ಅಂಕವನ್ನು ಕಲೆ ಹಾಕಿ ಗೆಲುವಿನಲ್ಲಿ ಮಿಂಚಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications