ಸಿಲಿಕಾನ್ ಸಿಟಿಯಲ್ಲೊಂದು ದುರಂತ ಪ್ರೇಮಕತೆ: ಕಬಡ್ಡಿ ಆಟಗಾರ ಆತ್ಮಹತ್ಯೆ

ಬೆಂಗಳೂರು, ಮೇ 30: ಬೆಂಗಳೂರಿನಲ್ಲೊಂದು ದುರಂತ ಪ್ರೇಮಕತೆ ನಡೆದಿದೆ. ಪ್ರೇಮ ಬಂಧನಕ್ಕೆ ಒಳಗಾದ ರಾಜ್ಯ ಮಟ್ಟದ ಕಬಡ್ಡಿ ಆಟಗಾರನೊಬ್ಬ, ಪ್ರೀತಿ ನಿರಾಕರಿಸಿದ ಹುಡುಗಿಯನ್ನು ಕೊಲ್ಲಲು ಯತ್ನಿಸಿ ಕಡೆಗೆ ತಾನು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದ ವಿಶಾಲ್ ಮಾರ್ಟ್ ಸಮೀಪ ನಡೆದಿದೆ.
ರಾಜ್ಯದ ಕೆಲ ಪ್ರತಿಷ್ಠಿತ ಸ್ಪೋರ್ಟ್ಸ್ ಕ್ಲಬ್‌ಗಳಿಗೆ ಆಡುತ್ತಿದ್ದ ಗಿರೀಶ ಎಂಬಾತ ಅನೇಕ ಪ್ರಶಸ್ತಿಗಳನ್ನೂ ಗೆದ್ದಿದ್ದ. ಪ್ರತಿಭಾನ್ವಿತ ಆಟಗಾರ ಗಿರೀಶ್ ಸುಮಾರು 3 ವರ್ಷಗಳ ಹಿಂದೆ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆದರೆ ಆ ಯುವತಿ ಇತ್ತೀಚೆಗೆ ಪ್ರೀತಿಗೆ ನಿರಾಕರಿಸಿದ್ದರಿಂದ ಆಕೆಯನ್ನು ಮಚ್ಚಿನಿಂದ ಕೊಚ್ಚಿ ಕೊಲ್ಲಲು ಯತ್ನಿಸಿ ತಾನು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಘಟನೆಯ ಹಿನ್ನಲೆ
ಪರಸ್ಪರ ಪ್ರೀತಿಸುತ್ತಿದ್ದ ಗಿರೀಶ್ ಮತ್ತವರ ಪ್ರೇಯಸಿ ಮನೆಯವರು ವಿರೋಧಿಸಿದ್ದಕ್ಕೆ ಆರು ತಿಂಗಳ ಹಿಂದೆ ಓಡಿ ಹೋಗಿದ್ದರು. ಯುವತಿಯ ಸಂಬಂಧಿಕರು ಕರೆ ಮಾಡಿ ನಿಮ್ಮಿಬ್ಬರ ಮದುವೆ ಮಾಡಿಸುವುದಾಗಿ ನಂಬಿಸಿ ಇಬ್ಬರನ್ನೂ ಬೆಂಗಳೂರಿಗೆ ವಾಪಸ್ಸಾಗಿದ್ದರು.
ಆದರೆ ವರಸೆ ಬದಲಿಸಿದ ಯುವತಿಯ ಸಂಬಂಧಿಕರು ಯುವತಿಯನ್ನು ಬೆಂಗಳೂರಿನಿಂದ ಮಂಡ್ಯಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಸಂಬಂಧಿಕರ ಮನೆಯಲ್ಲಿರಿಸಿದ್ದರು. ಅಲ್ಲದೆ ಗಿರೀಶ್‌ನನ್ನು ಮರೆಯಬೇಕು, ಬೇರೆಯವರನ್ನು ಮದುವೆಯಾಗಬೇಕು ಎಂದು ಯುವತಿಯನ್ನು ಸಂಬಂಧಿಕರು ಒಪ್ಪಿಸಿದ್ದರು.
ಹುಡುಗಿಗೆ ಬೇರೆ ಮದುವೆ ಮಾಡಲು ಯತ್ನಿಸುತ್ತಿರುವ ವಿಚಾರವನ್ನು ತನ್ನ ಸ್ನೇಹಿತನಿಂದ ತಿಳಿದ ಗಿರೀಶ್ ಯುವತಿಯನ್ನು ಬೇಟಿಯಾಗಲು ಯತ್ನಿಸಿದ್ದ. ಆದರೆ ಯುವತಿ ಈ ಬಾರಿ ಬದಲಾದಂತೆ ವರ್ತಿಸಿದ್ದಳು. ಹೀಗಾಗಿ ಮಾನಸಿಕವಾಗಿ ಕುಗ್ಗಿದ ಗಿರೀಶ್ ಆತ್ಮಹತ್ಯೆಗೆ ಯತ್ನಿಸಿದ್ದ. ಆದರೆ ಮೊದಲ ಸಾರಿ ಮನೆಯವರೇ ಆತನ ಜೀವ ಉಳಿಸಿದ್ದರು.
ಬಳಿಕವೂ ಗಿರೀಶ್ ಮಾನಸಿಕವಾಗಿ ಸರಿಹೋಗಲಿಲ್ಲ. ಯುವತಿಯ ಬಗ್ಗೆ ಹಗೆ ಸಾಧಿಸಲಾರಂಭಿಸಿದ ಗಿರೀಶ್ ಆಕೆಯನ್ನು ಹತ್ಯೆ ಮಾಡಲು ನಿರ್ಧರಿಸಿದ. ಬುಧವಾರ ಪ್ರೇಯಸಿ ಮೇಲೆ ಮಾರಕಾಯುಧದಿಂದ ದಾಳಿ ನಡೆಸಿ ಅಲ್ಲಿಂದ ಪರಾರಿಯಾಗಿದ್ದ. ವಿಶಾಲ್ ಮಾರ್ಟ್ ಬಳಿ ಯುವತಿಯ ಮೇಲೆ ಹಲ್ಲೆ ನಡೆಸಿದ್ದ ಗಿರೀಶ್ ತಾವರೆಕೆರೆ ರಸ್ತೆಯ ಬಳಿ ತಾನು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಗಾಯಗೊಂಡಿರುವ ಯುವತಿಯೀಗ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾಳೆ ಎಂದು ತಿಳಿದುಬಂದಿದೆ. ಆದರೆ ಪ್ರತಿಭಾನ್ವಿತ ಆಟಗಾರ ಗಿರಿಶ್ ಪ್ರೀತಿಯ ಹುಚ್ಚಾಟಿಕೆಗೆ ಬಲಿಯಾಗಿದ್ದಾನೆ. ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications