Pro Kabaddi 2025: ವಾರಿಯರ್ಸ್, ಮುಂಬಾಗೆ ರೋಚಕ ಜಯ
12ನೇ ಆವೃತ್ತಿಯ ಪ್ರೋ ಕಬಡ್ಡಿ ಟೂರ್ನಿ ರೋಚಕ ಘಟ್ಟದತ್ತ ಮನೆ ಮಾಡಿದೆ. ಮಂಗಳವಾರ ನಡೆದ ಪಂದ್ಯದಲ್ಲಿ ಯು ಮುಂಬಾ ಹಾಗೂ ಬಂಗಾಳ್ ವಾರಿಯರ್ಸ್ ತಂಡಗಳು ರೋಚಕ ಗೆಲುವು ಸಾಧಿಸಿವೆ. ಮೊದಲ ಪಂದ್ಯದಲ್ಲಿ ಬಂಗಾಳ ವಾರಿಯರ್ಸ್ 44-43 ರಿಂದ ತಮಿಳು ತಲೈವಾಸ್ ತಂಡವನ್ನು ಮಣಿಸಿತು. ಇನ್ನೊಂದು ಪಂದ್ಯದಲ್ಲಿ ಯು ಮುಂಬಾ 37-36 ರಿಂದ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವನ್ನು ಮಣಿಸಿತು.
ಮೊದಲಾವಧಿಯ ಪಂದ್ಯದಲ್ಲಿ ತಮಿಳು ತಲೈವಾಸ್ ತಂಡ 22-16 ರಿಂಧ ಭರ್ಜರಿ ಮುನ್ನಡೆಯನ್ನು ಬಂಗಾಳ ತಂಡದ ಪರ ಸಾಧಿಸಿತು. ಈ ಅವಧಿಯಲ್ಲಿ ತಲೈವಾಸ್ 13 ಅಂಕಗಳನ್ನು ದಾಳಿಯಲ್ಲಿ ಹಾಗೂ 6 ಅಂಕವನ್ನು ಟ್ಯಾಕಲ್‌ನಲ್ಲಿ ಕಲೆ ಹಾಕಿತು. ಈ ವೇಳೆ ಬಂಗಾಳ ತಂಡವನ್ನು ತಲೈವಾಸ್ ಒಮ್ಮೆ ಆಲೌಟ್ ಮಾಡಿತು. ಇನ್ನು ಎರಡನೇ ಅವಧಿಯ ಆಟದಲ್ಲಿ ಬಂಗಾಳ, ತಲೈವಾಸ್ ತಂಡದ ಯೋಜನೆಯನ್ನು ಬುಡಮೇಲು ಮಾಡಿತು. ಈ ಅವಧಿಯಲ್ಲಿ ಬಂಗಾಳ ತಂಡದ ಸ್ಟಾರ್ ರೈಡರ್ಸ್ ಅಮೋಘ ದಾಳಿಯನ್ನು ಸಂಘಟಿಸಿದರು. ಅಲ್ಲದೆ ಅಂಕಗಳಿಕೆಯಲ್ಲಿ ಭಾರೀ ಮುನ್ನಡೆ ಸಾಧಿಸಿತು. ಈ ಅವಧಿಯಲ್ಲಿ ಬಂಗಾಳ 28-21 ರಿಂದ ಮುನ್ನಡೆ ಸಾಧಿಸಿತು. ಈ ಅವಧಿಯಲ್ಲಿ ತಲೈವಾಸ್ ತಂಡವನ್ನು, ಬಂಗಾಳ 2 ಬಾರಿ ಆಲೌಟ್ ಮಾಡಿತು.

ಬಂಗಳಾ ತಂಡದ ಪರ ರೈಡರ್ ವಿಶ್ವಾಸ್ ಎಸ್ 24 ಬಾರಿ ಎದುರಾಳಿ ಕೋರ್ಟ್‌ಗೆ ಎಂಟ್ರಿ ನೀಡಿ 17 ಟಚ್ ಪಾಯಿಂಟ್ ಗಳಿಸಿತು. ಅಲ್ಲದೆ 2 ಬೋನಸ್ ಪಾಯಿಂಟ್ ಕಲೆ ಹಾಕಿದರು. ಪರಾಜಿತ ತಂಡದ ಪರ ಅರ್ಜುನ್ ದೇಶ್ವಾಲ್ 20 ಅಂಕ ಸೇರಿಸಿದರು.
ಜಿದ್ದು ಸೋತ ಜೈಪುರ
ಮಂಗಳವಾರ ನಡೆದ ಎರಡನೇ ಪಂದ್ಯದಲ್ಲಿ ಮೊದಲಾವಿಯಿಂದಲೂ ಪಂದ್ಯದ ಮೇಲ ಪೂರ್ಣ ಹಿಡಿತ ಸಾಧಿಸಿದ್ದ ಯು ಮುಂಬಾ ಸುಲಭವಾಗಿ ಪಂದ್ಯವನ್ನು ಗೆದ್ದಿತು. ಮೊದಲ ಅವಧಿಯಲ್ಲಿ ಮುಂಬಾ 22-12 ಅಂಕಗಳಿಂದ ಜೈಪುರ್ ವಿರುದ್ಧ ಮುನ್ನಡೆ ಸಾಧಿಸಿತು. ಅಲ್ಲದೆ ಇದೇ ಅವಧಿಯಲ್ಲಿ ಜೈಪುರ ತಂಡವನ್ನು ಒಮ್ಮೆ ಮುಂಬಾ ಆಲೌಟ್ ಮಾಡಿತು. ಎರಡನೇ ಅವಧಿಯ ಆಟದಲ್ಲಿ ಭರ್ಜರಿ ಪ್ರದರ್ಶನ ನೀಡಿದ ಜೈಪುರ ಪಿಂಕ್ ಪ್ಯಾಂಥರ್ಸ್ ಅಬ್ಬರದ ಆಟವನ್ನು ಆಡಿತು. ಈ ಅವಧಿಯಲ್ಲಿ ಜೈಪುರ ತಂಡದ ದಾಳಿ ಹಾಗೂ ಟ್ಯಾಕಲ್‌ಗಳು ಅಮೋಘವಾಗಿದ್ದವು. ಆದರೂ ಒಂದು ಅಂಕದ ಹಿನ್ನಡೆ ಅನುಭವಿಸಿ ಸೋಲು ಕಂಡಿತು.

ಮೂರನೇ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ 50-32 ಅಂಕಗಳಿಂದ ಗುಜರಾತ್ ಟೈಟಾನ್ಸ್ ತಂಡವನ್ನು ಸೋಲಿಸಿತು. ಈ ಪಂದ್ಯದ ಯಾವುದೇ ಹಂತದಲ್ಲಿ ಗುಜರಾತ್ ಪುಟಿದೇಳುವ ಸೂಚನೆಯನ್ನೇ ನೀಡಲಿಲ್ಲ. ಒಟ್ಟಾರೆ ಪಂದ್ಯದಲ್ಲಿ ಮೂರು ಬಾರಿ ಗುಜರಾತ್ ಆಲೌಟ್ ಅಯಿತು. ಹರಿಯಾಣ ತಂಡದ ರೈಡ್ ಹಾಗೂ ಟ್ಯಾಕಲ್‌ಗಳು ಸೊಗಸಾಗಿದ್ದವು. ವಿಜೇತ ತಂಡದ ಪರ ವಿನಯ್ 14, ಶಿವಂ 17 ಅಂಕ ಸೇರಿಸಿ ಜಯದಲ್ಲಿ ಮಿಂಚಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications