Pro Kabaddi: ಬಂಗಾಳ, ಮುಂಬಾ ಶುಭಾರಂಭ
ಪ್ರೋ ಕಬಡ್ಡಿ ಲೀಗ್‌ನಲ್ಲಿ ಬಂಗಾಳ ವಾರಿಯರ್ಸ್ ಹಾಗೂ ಯು ಮುಂಬಾ ತಂಡಗಳು ಭರ್ಜರಿ ಜಯ ಸಾಧಿಸಿವೆ. ಭಾನುವಾರ ನಡೆದ ಮೊದಲ ಪಂದ್ಯದಲ್ಲಿ ಯು ಮುಂಬಾ 36-33 ರಿಂದ ತಮಿಳು ತಲೈವಾಸ್ ತಂಡವನ್ನು ಮಣಿಸಿದರೆ, ಎರಡನೇ ಪಂದ್ಯದಲ್ಲಿ ಬಂಗಾಳ ವಾರಿಯರ್ಸ್ 54-44 ರಿಂದ ಹರಿಯಾಣ ಸ್ಟೀಲರ್ಸ್ ತಂಡವನ್ಉ ಮಣಿಸಿತು. ಈ ಮೂಲಕ ಬಂಗಾಳ, ತಮಿಳು ತಂಡ ಶುಭಾರಂಭ ಮಾಡಿದೆ.
ಭಾನುವಾರ ನಡೆದ ಪಂದ್ಯದಲ್ಲಿ ತಮಿಳು ತಲೈವಾಸ್ ತಂಡ 14-11 ರಿಂದ ಮುನ್ನಡೆ ಸಾಧಿಸಿತು. ಈ ವೇಳೆ ತಮಿಳು ತಂಡ ದಾಳಿಯಲ್ಲಿ 9 ಅಂಕವನ್ನು ಕಲೆ ಹಾಕಿದರೆ ಯು ಮುಂಬಾ ರೈಡ್‌ನಲ್ಲಿ 5 ಅಂಕ ಸೇರಿಸಿತು. ತಮಿಳು ತಲೈವಾಸ್ ರಕ್ಷಣಾ ವಿಭಾಗದಲ್ಲಿ 5 ಅಂಕ ಕಲೆ ಹಾಕಿದರೆ, ಮುಂಬಾ ಡಿಫೆನ್ಸ್‌ನಲ್ಲಿ 4 ಅಂಕ ಸೇರಿಸಿತು.

ಇನ್ನು ಎರಡನೇ ಅವಧಿಯ ಆಟದಲ್ಲಿ ಮುಂಬಾ ಅಮೋಘ ಪ್ರದರ್ಶನ ನೀಡಿತು. ಈ ವೇಳೆ ಮುಂಬಾ 25-19 ರಿಂದ ತಮಿಳು ತಲೈವಾಸ್ ವಿರುದ್ಧ ಮುನ್ನಡೆ ಸಾಧಿಸಿತು. ಈ ವೇಳೆ ಮುಂಬಾ ತಂಡ ದಾಳಿಯಲ್ಲಿ 13, ಟ್ಯಾಕಲ್‌ನಲ್ಲಿ 7 ಅಂಕಗಳನ್ನು ಕಲೆ ಹಾಕಿ ಅಬ್ಬರಿಸಿತು. ಇದೇ ವೇಳೆ ತಮಿಳು ತಲೈವಾಸ್ ಅಮೋಘ ದಾಳಿಯನ್ನು ಸಂಘಟಿಸಿತು. ಆದರೆ ರಕ್ಷಣಾ ವಿಭಾಗದಲ್ಲಿ ಕೊಂಚ ಅಂಕ ಕಲೆ ಹಾಕುವಲ್ಲಿ ಹಿನ್ನಡೆ ಅನುಭವಿಸಿತು. ಈ ವೇಳೆ ಉಭಯ ತಂಡಗಳು ತಲಾ ಒಂದು ಬಾರಿ ಆಲೌಟ್ ಆದವು. ಅಜಿತ್ ಚೌಹಾಣ್ 9 ಅಂಕ ಕಲೆ ಹಾಕಿದರೆ, ಆಲ್‌ರೌಂಡರ್ ಸುನಿಲ್ 8 ಅಂಕ ಸೇರಿಸಿದರು. ಪರಾಜಿತ ತಂಡದ ಪರ ಅರ್ಜುನ್ ದೇಶ್ವಲ್ ದಾಳಿಯಲ್ಲಿ 12 ಅಂಕ ಕಲೆ ಹಾಕಿ ಮಿಂಚಿದರು.
ಬಂಗಳಾಗೆ ಜಯ
ಎರಡನೇ ಪಂದ್ಯದಲ್ಲಿ ಬಂಗಾಳ್ ವಾರಿಯರ್ಸ್ ಆರಂಭದಿಂದಲೂ ಭರ್ಜರಿ ಪ್ರದರ್ಶನ ನೀಡಿತು. ಬಂಗಾಳ 23-19 ರಿಂದ ಮೊದಲಾವಧಿಯಲ್ಲಿ ಹರಿಯಾಣ ಸ್ಟೀಲರ್ಸ್ ವಿರುದ್ಧ ಮುನ್ನಡೆ ಸಾಧಿಸಿತು. ಎರಡನೇ ಅವಧಿಯಲ್ಲಿ 31-25 ರಿಂದ ಬಂಗಾಳ ಮುನ್ನಡೆ ಕಾಯ್ದುಕೊಂಡಿತು. ಈ ಅವಧಿಯಲ್ಲಿ ಸ್ಟೀಲರ್ಸ್ ಅಂಕಗಳಿಸಲು ಪರದಾಟ ನಡೆಸಿತು.
ಇನ್ನು ಒಟ್ಟಾರೆ ಪಂದ್ಯದಲ್ಲಿ ಬಂಗಾಳ್ ವಾರಿಯರ್ಸ್ 42 ಬಾರಿ ಎದುರಾಳಿ ಕೋರ್ಟ್‌ಗೆ ಎಂಟ್ರಿ ನೀಡಿ 26 ಅಂಕ ಕಲೆ ಹಾಕಿದರೆ, 2 ಸೂಪರ್ ರೈಡ್ ಅಂಕಗಳನ್ನು ಕಲೆ ಹಾಕಿತು. ಇನ್ನು ಹರಿಯಾಣ ಸ್ಟೀಲರ್ಸ್ 41 ಬಾರಿ ರೈಡಿಂಗ್ ನಡೆಸಿ 28 ಅಂಕ ಕಲೆ ಹಾಕಿತು.
ಬಂಗಾಳ ತಂಡದ ದೇವಾಂಕ್ 28 ಬಾರಿ ರೇಡ್ ಮಾಡಿ 21 ಅಂಕ ಕಲೆ ಹಾಕಿ ಗೆಲುವಿನಲ್ಲಿ ಮಿಂಚಿದರು. ಇನ್ನು ಮನ್‌ಪ್ರೀತ್ 13 ಅಂಕ ಸೇರಿಸಿ ಅಬ್ಬರಿಸಿದರು. ಪರಾಜಿತ ತಂಡದ ಪರ ಶಿವಂ ಪಿ 17 ಅಂಕ ಸೇರಿಸಿ ಸೋಲಿನಲ್ಲಿ ಮಿಂಚಿದರು. ಈ ಮೂಲಕ ಬಂಗಾಳ ಟೂರ್ನಿಯಲ್ಲಿ ಮೊದಲ ಗೆಲುವಿನ ನಗೆ ಬೀರಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications