ಬೆಂಗಳೂರು ಬುಲ್ಸ್ ಮಣಿಸಿ ಯು ಮುಂಬಾ ಕಬಡ್ಡಿ ಸಾಮ್ರಾಟ
ಮುಂಬೈ, ಆಗಸ್ಟ್, 24: ಬೆಂಗಳೂರು ಬುಲ್ಸ್ ತಂಡದ ನಿರಾಶಾದಾಯಕ ಪ್ರದರ್ಶನದ ಲಾಭ ಪಡೆದುಕೊಂಡ ಯು ಮುಂಬಾ ಎರಡನೇ ಆವೃತ್ತಿಯ ಪ್ರೊ ಕಬಡ್ಡಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಕೊನೆ ಘಟ್ಟದಲ್ಲಿ ಆರು ಅಂಕಗಳ ಮುನ್ನಡೆ ಕಾದುಕೊಂಡು ಯು ಮುಂಬಾ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಭಾನುವಾರ ರಾತ್ರಿ ನಡೆದ ನ ಫೈನಲ್ ನಲ್ಲಿ ಯು ಮುಂಬಾ ತಂಡವು ಬೆಂಗಳೂರು ಬುಲ್ಸ್ ತಂಡವನ್ನು 36-30 ಅಂಕಗಳಿಂದ ಸೋಲಿಸಿತು. ಈ ಮೂಲಕ ಬೆಂಗಳೂರು ತಂಡದ ಪ್ರಶಸ್ತಿ ಕನಸು ನುಚ್ಚುನೂರಾಯಿತು.(ಫೈನಲ್ ಗೆ ಲಗ್ಗೆ ಇಟ್ಟ ಬೆಂಗಳೂರು ಹಾದಿ)
ಎರಡನೇ ಆವೃತ್ತಿಯಲ್ಲಿ ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡಿದ ಮುಂಬಾ ತಂಡವು ಫೈನಲ್‌ನಲ್ಲೂ ಅದನ್ನೆ ಮುಂದುವರಿಸಿತು. ಬೆಂಗಳೂರು ಹೋರಾಟ ಮುಂಬೈ ಆಟಗಾರನ್ನು ತಡೆಯಲು ಸಾಧ್ಯವಾಗಲಿಲ್ಲ.
ಮೊದಲಾರ್ಧದ ಅಂತ್ಯದಿಂದ ಮುಂಬಾ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ಆದರೆ ಒಂದು ಹಂತದಲ್ಲಿ ಮುಂಬಾ ತಂಡಕ್ಕಿಂತ ಬೆಂಗಳೂರು ಹೆಚ್ಚಿನ ಅಂಕ ದಾಖಲಿಸಿತ್ತು. 23-24 ಮುನ್ನಡೆಯನ್ನು ಮುಂದೆ ಕಾಪಾಡಿಕೊಂಡು ಹೋಗಲು ಬೆಂಗಳೂರು ಬಳಿ ಸಾಧ್ಯವಾಗಲಿಲ್ಲ.

ಅಜಯ್ ಠಾಕೂರ್ ವೈಫಲ್ಯ
ಸ್ಟಾರ್ ರೈಡರ್ ಅಜಯ್ ಠಾಕೂರ್ ಫೈನಲ್ ನಲ್ಲಿ ಮಂಕಾಗಿದ್ದು. ಕಳೆದ ಬಾರಿ ಪ್ರಶಸ್ತಿ ಪಂದ್ಯದಲ್ಲಿ ಜೈಪುರದ ಎದುರು ಎಡವಿದ್ದ ಮುಂಮೈ ಈ ಬಾರಿ ತನ್ನ ಪ್ರಶಸ್ತಿ ಹಸಿವನ್ನು ನೀಗಿಸಿಕೊಂಡಿತು. ಮಂಜಿತ್ ಚಿಲ್ಲರ್ ಸಹ ನಿರೀಕ್ಷಿತ ಪ್ರದರ್ಶನ ತೋರಲಿಲ್ಲ.

ಪ್ರೇಕ್ಷಕರ ಗ್ಯಾಲರಿಯಲ್ಲಿ ಎಂಎಸ್ ಧೋನಿ
ಟೀಮ್ ಇಂಡಿಯಾ ಏಕದಿನ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಪಂದ್ಯವನ್ನು ವೀಕ್ಷಿಸಿದರು. ಬಾಲಿವುಡ್ ಸ್ಟಾರ್ ಸೈಫ್ ಅಲಿ ಖಾನ್ ಬೆಡಗಿಯರಾದ ಕತ್ರೀನಾ ಕೈಫ್ ಮತ್ತು ಆಲಿಯಾ ಭಟ್ ಹಾಜರಿದ್ದರು. ಅಭಿಷೇಕ್ ಬಚ್ಚನ್ ಮುಂಬೈ ತಂಡಕ್ಕೆ ಬೆಂಬಲವಾಗಿ ನಿಂತಿದ್ದರು.

ಬಲಿಷ್ಠ ಪ್ರದರ್ಶನಕ್ಕೆ ಸಂದ ಜಯ
ಯು ಮುಂಬಾ ತಂಡ ಪಂದ್ಯಾವಳಿ ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡಿಕೊಂಡೇ ಬಂದಿತ್ತು. ಬೆಂಗಳೂರು ವಿರುದ್ಧ ಲೀಗ್ ಹಂತದ ಎರಡು ಪಂದ್ಯಗಳಲ್ಲಿ ಜಯ ಸಾಧಿಸಿತ್ತು. ಫೈನಲ್ ನಲ್ಲಿಯೂ ಬೆಂಗಳೂರನ್ನು ಮತ್ತೊಮ್ಮೆ ಸೋಲಿಸಿ ಪ್ರಶಸ್ತಿ ತಮ್ಮದಾಗಿಸಿಕೊಂಡಿತು.

3ನೇ ಸ್ಥಾನ ಪಡೆದುಕೊಂಡ ತೆಲುಗು ಟೈಟಾನ್ಸ್
ರಾಹುಲ್ ಚೌಧರಿ, ಪ್ರಶಾಂತ್ ರೈ ಪ್ರದರ್ಶನದ ಲಾಭ ಪಡೆದ ತೆಲುಗು ಟೈಟಾನ್ಸ್ ತಂಡ ಮೂರನೇ ಸ್ಥಾನವನ್ನು ತಮ್ಮದಾಗಿರಿಸಿಕೊಂಡಿತು. 34-26 ಅಂಕಗಳಿಂದ ಪಾಟ್ನಾ ಪೈರೆಟ್ಸ್ ತಂಡವನ್ನು ಸೋಲಿಸಿ 30 ಲಕ್ಷ ರು. ಬಹುಮಾನದ ಮೊತ್ತ ಗಳಿಸಿಕೊಂಡಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications