For Quick Alerts
ALLOW NOTIFICATIONS  
For Daily Alerts

Pro Kabaddi: ಬೆಂಗಳೂರು ಬುಲ್ಸ್‌ ವಿರುದ್ಧ ಮುಂಬಾಗೆ ರೋಚಕ ಗೆಲುವು

ಕೊನೆಯ ಕ್ಷಣದವರೆಗೂ ಜಿದ್ದಾಜಿದ್ದಿನಿಂದ ಕೂಡಿದ್ದ 11ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನ 62ನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್‌ ಮತ್ತೊಂದು ಸೋಲು ಕಂಡಿದೆ. ಈ ಪಂದ್ಯದಲ್ಲಿ ಬುಲ್ಸ್‌ ಕೊನೆಯ ಕ್ಷಣದಲ್ಲಿ ಎಡವಿದ್ದರಿಂದ ಪೂರ್ಣ ಅಂಕ ಕಲೆ ಹಾಕುವ ಅವಕಾಶವನ್ನು ಕೈ ಬಿಟ್ಟಿತು. ಸ್ಥಿರ ಪ್ರದರ್ಶನ ನೀಡಿದ ಮುಂಬಾ ಅಬ್ಬರಿಸಿತು. ಕೊನೆಯ ಎರಡು ನಿಮಿಷದ ಆಟದಲ್ಲಿ ಮುಂಬಾ ತಾನು ಅಂದು ಕೊಂಡಂತೆ ಆಟವನ್ನು ಆಡಿತು. ಈ ಗೆಲುವಿನೊಂದಿಗೆ ಮುಂಬಾ 39 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಪಡೆದಿದೆ.

ಬುಲ್ಸ್‌ ತಂಡದ ಮೂರನೇ ಗೆಲುವಿನ ಕನಸು ನುಚ್ಚು ನೂರಾಗಿದೆ. ಬುಲ್ಸ್‌ ಹಾಗೂ ಮುಂಬಾ ತಂಡ ಮೊದಲಾವಧಿಯಲ್ಲಿ ಜಿದ್ದಾಜಿದ್ದಿನ ಆಟವನ್ನು ಪ್ರದರ್ಶಿಸಿದವು. ಈ ಅವಧಿಯಲ್ಲಿ ಬುಲ್ಸ್‌ ತಂಡ ಅಬ್ಬರದ ಪ್ರದರ್ಶನ ನೀಡಿ ಮೊದಲಾವಧಿಯಲ್ಲಿ14ನೇ ನಿಮಿಷದಲ್ಲಿ ಮುಂಬಾ ತಂಡವನ್ನು ಒಂದು ಬಾರಿ ಆಲೌಟ್ ಮಾಡಿತು. ಈ ಅವಧಿಯಲ್ಲಿ ಬುಲ್ಸ್‌ ದಾಳಿಯಲ್ಲಿ 12, ಟ್ಯಾಕಲ್‌ನಲ್ಲಿ 6 ಅಂಕಗಳನ್ನು ಕಲೆ ಹಾಕಿತು. ಈ ಅವಧಿಯಲ್ಲಿ ಮುಂಬಾ ದಾಳಿಯಲ್ಲಿ 15 ಅಂಕವನ್ನು ಸೇರಿಸಿತು. ಮುಂಬಾ ಒಂದು ಅಂಕದ ಮುನ್ನಡೆ ಸಾಧಿಸಿತು.

U Mumba Triumphs Over Bengaluru Bulls in a Thrilling Encounter

ಜಿದ್ದು ಗೆದ್ದ ಮುಂಬಾ

ಎರಡನೇ ಅವಧಿಯ ಆಟ ಜಿದ್ದಾಜಿದ್ದಿನಿಂದ ಕೂಡಿತ್ತು. ಈ ಅವಧಿಯಲ್ಲಿ ಉಭಯ ತಂಡಗಳು ಸುಲಭವಾಗಿ ಅಂಕಗಳನ್ನು ಬಿಟ್ಟುಕೊಡಲಿಲ್ಲ. ಎರಡೂ ತಂಡಗಳು ದಾಳಿ ಹಾಗೂ ಟ್ಯಾಕಲ್‌ನಲ್ಲಿ ಸ್ಥಿರ ಪ್ರದರ್ಶನವನ್ನು ನೀಡಿದವು. ಎರಡನೇ ಅವಧಿಯಲ್ಲಿ ಬುಲ್ಸ್ ತಂಡದ ರಕ್ಷಣಾ ಆಟ ಮನಮೋಹಕವಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಮುಂಬಾ ತಂಡ ಸ್ಥಿರ ಆಟವನ್ನು ಆಡಿ ಅರ್ಹ ಗೆಲವನ್ನು ದಾಖಲಿಸಿತು. ಈ ಪಂದ್ಯದಲ್ಲಿ ಬೆಂಗಳೂರು ಬುಲ್ಸ್‌ ಸುಲಭವಾಗಿ ಬೋನಸ್ ಅಂಕವನ್ನು ಬಿಟ್ಟುಕೊಟ್ಟಿದ್ದು ತಂಡಕ್ಕೆ ಪೆಟ್ಟು ನೀಡಿತು.

ಮುಂಬಾ ಪರ ಅಜಿತ್ ಚೌಹಾಣ್‌ 10, ಮಂಜೀತ್‌ 9 ಅಂಕಗಳನ್ನು ಕಲೆ ಹಾಕಿ ಮಿಂಚಿದರು. ಪರಾಜಿತ ತಂಡದ ಪರ ಪ್ರದೀಪ್ ನರ್ವಾಲ್‌ 10 ಅಂಕವನ್ನು ಕಲೆ ಹಾಕಿ ಸೋಲಿನಲ್ಲಿ ಅಬ್ಬರಿಸಿದರು.

U Mumba Triumphs Over Bengaluru Bulls in a Thrilling Encounter

ಹರಿಯಾಣಾಗೆ ಸೋಲು

ಇದಕ್ಕೂ ಮೊದಲು ನಡೆದ ಪಂದ್ಯದಲ್ಲಿ ಅಗ್ರ ಸ್ಥಾನವನ್ನು ಹೊಂದಿರುವ ಹರಿಯಾಣ ಸ್ಟೀಲರ್ಸ್‌ ತಂಡವನ್ನು 27-29 ಅಂಕಗಳಿಂದ ತೆಲುಗು ಟೈಟನ್ಸ್ ಮಣಿಸಿತು. ಈ ಮೂಲಕ ಟೈಟನ್ಸ್ ಟೂರ್ನಿಯಲ್ಲಿ ನಾಲ್ಕನೇ ಗೆಲುವು ಸಾಧಿಸಿತು. ಈ ಮೂಲಕ 32 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಏಳನೇ ಸ್ಥಾನವನ್ನು ಪಡೆದಿದೆ. ಹರಿಯಾಣ ಸ್ಟೀಲರ್ಸ್‌ ಟೂರ್ನಿಯಲ್ಲಿ ಮೂರನೇ ಸೋಲು ಕಂಡರೂ 41 ಅಂಕಗಳೊಂದಿಗೆ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದೆ.

ತೆಲುಗು ಟೈಟಾನ್ಸ್ ತಂಡದ ಪರ ಆಶೀಸ್ ನರ್ವಾಲ್‌ 11, ವಿಜಯ್ ಮಲಿಕ್‌ 8 ಅಂಕ ಸಂಪಾದಿಸಿದರು. ಈ ಪಂದ್ಯದ ಮೊದಲಾವಧಿಯಲ್ಲಿ ತೆಲುಗು 24-11 ರಿಂದ ಹರಿಯಾಣ ಸ್ಟೀಲರ್ಸ್‌ ತಂಡದ ವಿರುದ್ಧ ಮುನ್ನಡೆ ಸಾಧಿಸಿತು. ಎರಡನೇ ಅವಧಿಯಲ್ಲೂ ತೆಲುಗು ಟೈಟಾನ್ಸ್‌ 25-16 ರಿಂದ ಭಾರೀ ಮುನ್ನಡೆ ಸಾಧಿಸಿ ಗೆಲುವಿನ ನಗೆ ಬೀರಿತು.

Story first published: Monday, November 18, 2024, 23:08 [IST]
Other articles published on Nov 18, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+