Pro Kabaddi 2025: ಯುಪಿ ಯೋಧಾಸ್, ಹರಿಯಾಣ ಸ್ಟೀಲರ್ಸ್‌ಗೆ ಜಯ
ಸೋಮವಾರ ನಡೆದ 12ನೇ ಆವೃತ್ತಿಯ ಪ್ರೋ ಕಬಡ್ಡಿ ಟೂರ್ನಿಯ 82ನೇ ಪಂದ್ಯದಲ್ಲಿ ಯುಪಿ ಯೋಧಾಸ್ 40-24 ಅಂಕಗಳಿಂದ ಯು ಮುಂಬಾ ತಂಡವನ್ನು ಮಣಿಸಿ ಅಬ್ಬರಿಸಿತು. ಪಂದ್ಯದ ಆರಂಭದಿಂದಲೂ ಸ್ಥಿರ ಪ್ರದರ್ಶನ ನೀಡಿದ ಯುಪಿ ಯೋಧಾಸ್ ಟೂರ್ನಿಯಲ್ಲಿ ಐದನೇ ಗೆಲುವಿನ ನಗೆ ಬೀರಿತು.
ಮೊದಲ 20 ನಿಮಿಷದ ಆಟದಲ್ಲಿ ಯುಪಿ ಯೋಧಾಸ್ ದಾಳಿ ಹಾಗೂ ಟ್ಯಾಕಲ್‌ನಲ್ಲಿ ಸೊಗಸಾದ ಪ್ರದರ್ಶನ ನೀಡಿತು. ಈ ವೇಳೆ ದಾಳಿಯಲ್ಲಿ 7 ಹಾಗೂ ಟ್ಯಾಕಲ್‌ನಲ್ಲಿ ಯುಪಿ 6 ಅಂಕವನ್ನು ಕಲೆ ಹಾಕಿತು. ಯು ಮುಂಬಾ ತಂಡ ಈ ವೇಳೆ ರಕ್ಷಣಾ ವಿಭಾಗದಲ್ಲಿ ಅಮೋಘ ಜೊತೆಯಾಟವನ್ನು ನಡೆಸಿತು. ಈ ವೇಳೆ ಮುಂಬಾ ಟ್ಯಾಕಲ್‌ನಲ್ಲಿ 7 ಹಾಗೂ ದಾಳಿಯಲ್ಲಿ 4 ಅಂಕವನ್ನು ಸೇರಿಸಿತು.

ಎರಡನೇ ಅವಧಿಯಲ್ಲಿ ಯುಪಿ ಮನಮೋಹಕ ಆಟದ ಪ್ರದರ್ಶನ ನೀಡಿತು. ಈ ವೇಳೆ ಮುಂಬಾ ತಂಡವನ್ನು ಮೂರು ಬಾರಿ ಆಲೌಟ್ ಮಾಡಿತು. ಪರಿಣಾಮ ಅಂಕಗಳಿಕೆಯಲ್ಲಿ ಭಾರೀ ಮುನ್ನಡೆ ಸಾಧಿಸಿತು. ಕೊನೆಯ 20 ನಿಮಿಷದಲ್ಲಿ 27-13 ಅಂಕಗಳಿಂದ ಮುಂಬಾ ವಿರುದ್ಧ ಮುನ್ನಡೆ ಕಾಯ್ದುಕೊಂಡಿತು. ಈ ವೇಳೆ ಯುಪಿ ಟ್ಯಾಕಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿ ಅಬ್ಬರಿಸಿತು.
ಒಟ್ಟಾರೆ ಪಂದ್ಯದಲ್ಲಿ ಮುಂಬಾ ದಾಳಿಯಲ್ಲಿ 11 ಅಂಕ ಕಲೆ ಹಾಕಿದರೆ, ಯುಪಿ 15 ಅಂಕ ಸೇರಿಸಿತು. ಇನ್ನು ಯುಪಿ ಟ್ಯಾಕಲ್‌ನಲ್ಲಿ 14 ಅಂಕ ಸೇರಿಸಿತು. ಯುಪಿ ತಂಡದ ಪರ ಗುಮಾನ್ ಸಿಂಗ್ 20 ಬಾರಿ ಎದುರಾಳಿ ಕೋರ್ಟ್‌ಗೆ ಎಂಟ್ರಿ ನೀಡಿ 12 ಅಂಕ ಸೇರಿಸಿತು. ಮುಂಬಾ ತಂಡದ ರೈಡರ್ ಸಂದೀಪ್ 7 ಅಂಕ ಕಲೆ ಹಾಕಿ ಸೋಲಿನಲ್ಲಿ ಮಿಂಚಿದರು. ಪಾಟ್ನಾ ಪೈರೇಟ್ಸ್ ತಂಡದ 4ನೇ ಗೆಲುವಿನ ಆಸೆ ಕಮರಿತು.

ಹರಿಯಾಣ ಸ್ಟೀಲರ್ಸ್ ಭರ್ಜರಿ ಜಯ
ಇದಕ್ಕೂ ಮೊದಲು ನಡೆದ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ 39-32 ರಿಂದ ಪಾಟ್ನಾ ಪೈರೇಟ್ಸ್ ತಂಡವನ್ನು ಮಣಿಸಿತು. ಈ ಗೆಲುವಿನ ಮೂಲಕ ಹರಿಯಾಣ ಟೂರ್ನಿಯಲ್ಲಿ 7ನೇ ಗೆಲುವಿನ ನಗೆ ಬೀರಿದ್ದು, ಅಂಕ ಪಟ್ಟಿಯಲ್ಲಿ ಆರನೇ ಸ್ಥಾನ ತನ್ನದಾಗಿಸಿಕೊಂಡಿದೆ. ಪಂದ್ಯದ ಮೊದಲಾವಧಿಯಲ್ಲಿ ಪಾಟ್ನಾ ಪೈರೇಟ್ಸ್ ಅಂಕಗಳಿಕೆಯಲ್ಲಿ ಮುನ್ನಡೆ ಸಾಧಿಸಿತು. ಈ ವೇಳೆ 20-14 ರಿಂದ ಮುಂದಿದ್ದ ಮಾಜಿ ಚಾಂಪಿಯನ್ಸ್ ಪಾಟ್ನಾ ಮತ್ತೊಂದು ಗೆಲುವಿನ ಕನಸು ಕಾಣುತ್ತಿತ್ತು. ಆದರೆ ಎರಡನೇ ಅವಧಿಯ ಆಟದಲ್ಲಿ ಹರಿಯಾಣ ದಾಳಿ ಹಾಗೂ ಟ್ಯಾಕಲ್‌ನಲ್ಲಿ ಅಮೋಘ ಪ್ರದರ್ಶನ ನೀಡಿ ಅಂಕಗಳನ್ನು ಕಲೆ ಹಾಕಿತು. ಈ ವೇಳೆ ಹರಿಯಾಣ ದಾಳಿಯಲ್ಲಿ 12, ಟ್ಯಾಕಲ್‌ನಲ್ಲಿ 11 ಅಂಕವನ್ನು ಕಲೆ ಹಾಕಿತು. ಅಲ್ಲದೆ ಎರಡನೇ ಅವಧಿಯಲ್ಲಿ ಒಮ್ಮೆ ಪಾಟ್ನಾ ತಂಡವನ್ನು ಆಲೌಟ್ ಮಾಡಿ ಬೋನ್ಸ್ ಅಂಕವನ್ನು ಕಲೆ ಹಾಕಿತು. ಹರಿಯಾಣ ತಂಡದ ಪರ ಶಿವಂ 12 ಅಂಕ ಕಲೆ ಹಾಕಿ ಗೆಲುವಿನಲ್ಲಿ ಮಿಂಚಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications