Pro Kabaddi: ಯುಪಿ ಯೋಧಾಸ್‌ಗೆ ರೋಚಕ ಜಯ: ಪಾಟ್ನಾಗೆ ಸೋಲು
ಯುಪಿ ಯೋಧಾಸ್ 12ನೇ ಆವೃತ್ತಿಯ ಪ್ರೋ ಕಬಡ್ಡಿ ಟೂರ್ನಿಯ 84ನೇ ಪಂದ್ಯದಲ್ಲಿ 32-21 ಅಂಕಗಳಿಂದ ತಮಿಳು ತಲೈವಾಸ್ ತಂಡವನ್ನು ಮಣಿಸಿ, ಟೂರ್ನಿಯಲ್ಲಿ 6ನೇ ಗೆಲುವು ದಾಖಲಿಸಿದೆ. ಈ ,ಮೂಲಕ ಯುಪಿ ಅಂಕ ಪಟ್ಟಿಯಲ್ಲಿ 8ನೇ ಸ್ಥಾನಕ್ಕೆ ಬಡ್ತಿ ಪಡೆದಿದೆ. ತಮಿಳು ತಲೈವಾಸ್ ಈ ಪದ್ಯದಲ್ಲಿ ಸೋಲು ಕಂಡರೂ 12 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ 7ನೇ ಸ್ಥಾನವನ್ನು ಕಾಯ್ದುಕೊಂಡಿದೆ.
ಪಂದ್ಯದ ಆರಂಭದಲ್ಲಿ ತಮಿಳು ತಲೈವಾಸ್ ತಂಡ ಅಮೋಘ ಅಟದ ಪ್ರದರ್ಶನ ನೀಡಿತು. ಅಲ್ಲದೆ ಮೊದಲಾವಧಿಯಲ್ಲಿ ಯುಪಿ ಯೋಧಾಸ್ ತಂಡವನ್ನು ಒಮ್ಮೆ ಆಲೌಟ್ ಮಾಡಿತು. ಈ ಅವಧಿಯಲ್ಲಿ ದಾಳಿ ಹಾಗೂ ಟ್ಯಾಕಲ್‌ನಲ್ಲಿ ಸಮನಾದ ಅಂಕಗಳನ್ನು ಕಲೆ ಹಾಕಿದ ತಮಿಳು ತಲೈವಾಸ್ ಮೊದಲಾ 20 ನಿಮಿಷದಲ್ಲಿ 17-14 ಅಂಕಗಳ ಮುನ್ನಡೆಯನ್ನು ಸಾಧಿಸಿತು. ಈ ಅವಧಿಯಲ್ಲಿ ಯುಪಿ ದಾಳಿಯಲ್ಲಿ ಅಮೋಘ ಆಟದ ಪ್ರದರ್ಶನ ನೀಡಿದರೂ ಅಂಕಗಳ ಬೇಟೆಯಲ್ಲಿ ಮುನ್ನಡೆ ಸಾಧಿಸಲು ಸಾಧ್ಯವೇ ಆಗಲಿಲ್ಲ.

ಎರಡನೇ ಅವಧಿಯ ಆಟದಲ್ಲಿ ತಲೈವಾಸ್ ತಂತ್ರವನ್ನು ಮೆಟ್ಟಿನಿಂತು ಆಡಿದ ಯುಪಿ ಅಬ್ಬರಿಸಿತು. ಆರಂಭದಿಂದಲೂ ತಲೈವಾಸ್‌ಗೆ ಸುಲಭವಾಗಿ ಅಂಕಗಳನ್ನು ಕೊಡದೆ ಕಾಡಿದ ಯುಪಿ ಕ್ರಮೇಣ ಅಂಕಗಳ ಬೇಟೆಯಲ್ಲಿ ಮುನ್ನಡೆ ಸಾಧಿಸಲು ಆರಂಭಿಸಿತು. ಈ ಅವಧಿಯಲ್ಲಿ ಯುಪಿ ಹಾಗೂ ತಲೈವಾಸ್ ತಂಡಗಳು ದಾಳಿ ಹಾಗೂ ಟ್ಯಾಕಲ್‌ನಲ್ಲಿ ಸಮಬಲದ ಪ್ರದರ್ಶನ ನೀಡಿದವು. ಆದರೆ ಈ ಅವಧಿಯಲ್ಲಿ ತಮಿಳು ತಲೈವಾಸ್ ಒಮ್ಮೆ ಅಂಗಳವನ್ನು ಖಾಲಿ ಮಾಡಿದ್ದರಿಂದ ಯುಪಿ ಅಂಕಗಳಿಕೆಯಲ್ಲಿ ಮುನ್ನಡೆ ಕಾಯ್ದುಕೊಂಡಿತು. ಕೊನೆಯ ಅವಧಿಯ ವರೆಗೂ ಪುಟಿದೇಳುವ ಸೂಚನೆ ನೀಡಿದ ತಲೈವಾಸ್ ಅಂಕಗಳ ಬೇಟೆಯ ಅಂತರವನ್ನು ಕಡಿಮೆ ಮಾಡಿಕೊಳ್ಳುವಲ್ಲಿ ಶ್ರಮಿಸಿತು. ಈ ಅವಧಿಯಲ್ಲಿ ಯುಪಿ 18-14 ಅಂಕಗಳಿಂದ ಮುನ್ನಡೆ ಸಾಧಿಸಿ ಜಯ ಸಾಧಿಸಿತು.
ಗುಮಾನ್ ಅಬ್ಬರ
ಯುಪಿ ತಂಡದ ಸ್ಟಾರ್ ಆಟಗಾರ ಗುಮಾನ್ ಸಿಂಗ್ 8, ಕನ್ನಡಿಗ ಗಗನ್ ಗೌಡ 6, ಹಿತೇಶ್ 7 ಅಂಕ ಕಲೆ ಹಾಕಿ ಜಯದಲ್ಲಿ ಮಿಂಚಿದರು. ತಮಿಳು ತಂಡದ ಪರ ಅರ್ಜುನ್ ದೇಶ್ವಾಲ್ 7 ಅಂಕ ಪೇರಿಸಿದರು.

ಇದಕ್ಕೂ ಮೊದಲು ನಡೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ 40-32 ಅಂಕಗಳಿಂದ ಪಾಟ್ನಾ ಪೈರೇಟ್ಸ್ ತಂಡವನ್ನು ಮಣಿಸಿತು. ಈ ಮೂಲಕ ಅಂಕ ಪಟ್ಟಿಯಲ್ಲಿ 10 ಅಂಕಗಳೊಂದಿಗೆ 10 ಅಂಕವನ್ನು ಕಲೆ ಹಾಕಿತು. ಗುಜರಾತ್ ಟೈಟಾನ್ಸ್ ತಂಡ ಆರಂಭದಿಂದಲೂ ಪಂದ್ಯದಲ್ಲಿ ಹಿಡಿತ ಸಾಧಿಸಿತು. ಮೊದಲ 20 ನಿಮಿಷದ ಆಟದಲ್ಲಿ ಗುಜರಾತ್ 23-17 ಅಂಕಗಳಿಂದ ಮುನ್ನಡೆ ಸಾಧಿಸಿತು. ಈ ಅವಧಿಯಲ್ಲಿ ಗುಜರಾತ್ ದಾಳಿಯಲ್ಲಿ 15, ಟ್ಯಾಕಲ್‌ನಲ್ಲಿ 6 ಅಂಕ ಸೇರಿಸಿತು. ಅಲ್ಲದೆ ಒಮ್ಮೆ ಪಾಟ್ನಾ ತಂಡವನ್ನು ಆಲೌಟ್ ಮಾಡಿತು. ಎರಡನೇ ಅವಧಿಯ ಆಟದಲ್ಲಿ ಗುಜರಾತ್ ಸ್ಥಿರ ಆಟವನ್ನು ಮುಂಧುವರೆಸಿತು. ಈ ಅವಧಿಯಲ್ಲಿ ಗುಜರಾತ್ ದಾಳಿಗಿಂತಲೂ ಹೆಚ್ಚಾಗಿ ಟ್ಯಾಕಲ್‌ನಲ್ಲಿ ಅಂಕಗಳನ್ನು ಕಲೆ ಹಾಕಿತು. ಅಲ್ಲದೆ ಈ ಅವಧಿಯಲ್ಲಿ ಪಾಟ್ನಾ ತಂಡವನ್ನು ಮತ್ತೊಮ್ಮೆ ಆಲೌಟ್ ಮಾಡಿ ಅಬ್ಬರಿಸಿತು. ಎರಡನೇ ಅವಧಿಯಲ್ಲಿ ಗುಜರಾತ್ 17-15 ಅಂಕಗಳಿಂದ ಮುನ್ನಡೆ ಸಾಧಿಸಿತು. ಪರಾಜಿತ್ ತಂಡದ ಪರ ಮಂದೀಪ್ ಕುಮಾರ್ 12 ಅಂಕವನ್ನು ಕಲೆ ಹಾಕಿ ಸೋಲಿನಲ್ಲಿ ಮಿಂಚಿದರು. ಗುಜರಾತ್ ಟೈಟಾನ್ಸ್ ಸಂಘಟಿತ ಆಟದ ಪ್ರದರ್ಶನ ನಿಡಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications