100 ಟ್ಯಾಕ್ಲ್ ಪಾಯಿಂಟ್‌ಗಳ ಚೊಚ್ಚಲ ಸಾಧಕ 'ಯುಪಿ ಯೋಧ' ನಿತೇಶ್

ಮುಂಬೈ, ಜನವರಿ 4: ಒಂದೇ ಪ್ರೊ ಕಬಡ್ಡಿ ಸೀಸನ್‌ನಲ್ಲಿ 100 ಟ್ಯಾಕ್ಲ್ ಪಾಯಿಂಟ್ ಸಂಪಾದಿಸಿದ ಮೊದಲ ಆಟಗಾರನಾಗಿ ಯುಪಿ ಯೋಧದ ನಿತೇಶ್ ಕುಮಾರ್ ಗಮನ ಸೆಳೆದಿದ್ದಾರೆ. ಮುಂಬೈನಲ್ಲಿ ನಡೆದ ಪ್ರೊ ಕಬಡ್ಡಿ ಲೀಗ್ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಫಾರ್ಚೂನ್ ಜೈಂಟ್ಸ್ ಎದುರು ನಿತೇಶ್ ಈ ಸಾಧನೆ ಮೆರೆದರು.
ಮುಂಬೈಯಲ್ಲಿರುವ ಸರ್ದಾರ್ ವಲ್ಲಭ ಭಾಯ್ ಪಟೇಲ್ ಇಂಡೋರ್ ಸ್ಟೇಡಿಯಂನಲ್ಲಿ ಗುರುವಾರ (ಜನವರಿ 3) ನಡೆದ ಯುಪಿ ಯೋಧ ಮತ್ತು ಗುಜರಾತ್ ಫಾರ್ಚೂನ್ ಜೈಂಟ್ಸ್ ನಡುವಿನ ದ್ವಿತೀಯ ಕ್ವಾಲಿಫೈಯರ್ ಪಂದ್ಯದಲ್ಲಿ ಕುಮಾರ್ ಮಿಂಚಿದರು. ನಿತೇಶ್ ಅವರು ಗುಜರಾತ್‌ನ ಸಚಿನ್ ತಾನ್ವರ್ ಕಾಲನ್ನು ಜಗ್ಗೋ ಮೂಲಕ 100 ಟ್ಯಾಕ್ಲ್ ಪಾಯಿಂಟ್ಸ್ ಪೂರೈಸಿದರು.
ಯುಪಿ ಯೋಧ ಪರ ಶ್ರೀಕಾಂತ್ ಜಾಧವ್ 7, ನಿತೇಶ್ 5 ಟ್ಯಾಕ್ಲ್ ಮತ್ತು 1 ಬೋನಸ್ ಸೇರಿಸುವ ಮೂಲಕ ಗೆಲುವಿನ ನೆಲೆಯಲ್ಲಿ ಹೋರಾಟ ನಡೆಸಿದರು. ಆದರೆ ಎದುರಾಳಿ ಗುಜರಾತ್ ತಂಡ ಸಚಿನ್ ಅವರ 10 ರೈಡಿಂಗ್ ಪಾಯಿಂಟ್ಸ್ ನೆರವಿನೊಂದಿಗೆ 38-31ರ ಗೆಲುವನ್ನಾಚರಿಸಿತು. ಈ ಪಂದ್ಯದೊಂದಿಗೆ ಗುಜರಾತ್ ಫೈನಲ್‌ಗೆ ಲಗ್ಗೆಯಿಟ್ಟಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications