11ನೇ ಆವೃತ್ತಿಯ ಪ್ರೊ ಕಬಡ್ಡಿ ಟೂರ್ನಿ ಆರಂಭವಾಗಿದೆ. ಸೋಮವಾರ ಹೈದರಾಬಾದ್‌ನಲ್ಲಿ ನಡೆದ ಪ್ರಸಕ್ತ ಆವೃತ್ತಿಯ ಏಳನೇ ಪಂದ್ಯದಲ್ಲಿ ಯು.ಪಿ ಯೋಧಾಸ್ 28-33 ಅಂಕಗಳಿಂದ ದಬಾಂಗ್ ದೆಹಲಿ ಕೆ.ಸಿ ತಂಡವನ್ನು ಮಣಿಸಿತು.
ಸೋಮವಾರ ನಡೆದ ಮೊದಲ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ ಯೋಧಾಸ್ ಮೊದಲ ಪಂದ್ಯದಲ್ಲಿ ಅಬ್ಬರದ ಪ್ರದರ್ಶನ ನೀಡಿತು. ದಾಳಿ ಹಾಗೂ ಟ್ಯಾಕಲ್‌ನಲ್ಲಿ ಅಮೋಘ ಆಟವಾಡಿದ ಯೋಧಾಸ್ ಪೂರ್ಣ ಅಂಕವನ್ನು ಕಲೆ ಹಾಕಿ ಟೂರ್ನಿಯಲ್ಲಿ ಮೊದಲ ಗೆಲುವಿನ ನಗೆ ಬೀರಿತು.

ಮೊದಲಾವಧಿಯಲ್ಲಿ ಉಭಯ ತಂಡಗಳು ಜಿದ್ದಾಜಿದ್ದಿನ ಪ್ರದರ್ಶನ ನೀಡಿದವು. ಪರಿಣಾಮ ಸುಲಭವಾಗಿ ಅಂಕಗಳನ್ನು ನೀಡಲಿಲ್ಲ. ಈ ವೇಳೆ ದಬಾಂಗ್, ಯೋಧಾಸ್ ಟ್ಯಾಕಲ್ನಲ್ಲಿ ಮೋಡಿ ಮಾಡಿದವು. ಮೊದಲ 20 ನಿಮಿಷದ ಆಟದಲ್ಲಿ ದಬಾಂಗ್ 7, ಯೋಧಾಸ್ 6 ಅಂಕಗಳನ್ನು ಟ್ಯಾಕಲ್‌ನಲ್ಲಿ ಕಲೆ ಹಾಕಿತು. ದಾಳಿಯಲ್ಲಿ ಉಭಯ ತಂಡಗಳ ಆಟ ಕೊಂಚ ಮಂಕಾಗಿತ್ತು.
ಎರಡನೇ ಅವಧಿಯಲ್ಲಿ ಎರಡೂ ತಂಡಗಳು ಗೆಲುವಿನ ಕನಸಿನೊಂದಿಗೆ ಅಂಗಳಕ್ಕೆ ಇಳಿದವು. ಈ ಅವಧಿಯಲ್ಲಿ ಯೋಧಾಸ್ ಹಾಕಿಕೊಂಡ ಯೋಜನೆಯಂತೆ ಆಡಿ ಅಂಕಗಳನ್ನು ಕಲೆ ಹಾಕಿತು. ಈ ಮೂಲಕ ಅಬ್ಬರ ನಡೆಸಿತು. ಎರಡನೇ ಅವಧಿಯಲ್ಲಿ ಒಂದು ಬಾರಿ ದಬಾಂಗ್ ತಂಡವನ್ನು ಆಲೌಟ್ ಮಾಡಿ ಎದುರಾಳಿ ಮೇಲೆ ಒತ್ತಡವನ್ನು ಹೇರಿತು. ದಾಳಿ ಹಾಗೂ ಟ್ಯಾಕಲ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ ಯೋಧಾಸ್ ಅಂಕ ಬೇಟೆಯಲ್ಲಿ ಮುನ್ನಡೆ ಸಾಧಿಸಿತು.
ಒಟ್ಟಾರೆ ಪಂದ್ಯದಲ್ಲಿ ಉಭಯ ತಂಡಗಳು ಒಟ್ಟು 42 ಬಾರಿ ಎದುರಾಳಿ ಕೋರ್ಟ್‌ಗೆ ಎಂಟ್ರಿ ನೀಡಿದವು. ಈ ವೇಳೆ ಯೋಧಾಸ್ 11, ದಬಾಂಗ್ 9 ಅಂಕ ಸೇರಿಸಿತು. ಟ್ಯಾಕಲ್‌ನಲ್ಲಿ ಯುಪಿ 12, ದಬಾಂಗ್ 9 ಅಂಕವನ್ನು ಸೇರಿಸಿದವು.

ಎರಡನೇ ಆಟದಲ್ಲಿ ಪುಣೇರಿ ಪಲ್ಟನ್ 40-25 ಅಂಕಗಳಿಂದ ಪಾಟ್ನಾ ಪೈರೇಟ್ಸ್ ತಂಡವನ್ನು ಮಣಿಸಿ, ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಅಲಂಕರಿಸಿತು. ಮೊದಲಾವಧಿಯ ಆಟದಿಂದ ಪುಣೇರಿ ಅಬ್ಬದರ ಪ್ರದರ್ಶನ ನೀಡಿತು. ಪಲ್ಟನ್ 20-10 ಅಂಕಗಳಿಂದ ಮುನ್ನಡೆ ಸಾಧಿಸಿದೆ. ದಾಳಿ ಹಾಗೂ ಟ್ಯಾಕಲ್‌ನಲ್ಲಿ ಪುಣೇರಿ ಪಲ್ಟನ್ ತಲಾ 9 ಅಂಕಗಳನ್ನು ಕಲೆ ಹಾಕಿತು. ಎರಡನೇ ಅವಧಿಯ ಆಟದಲ್ಲೂ ಪುಣೇರಿ ಟ್ಯಾಕಲ್ 11 ಅಂಕಗಳನ್ನು ಕಲೆ ಹಾಕಿತು. ಎರಡು ಅವಧಿಯಲ್ಲಿ ಪುಣೇರಿ ತಲಾ ಒಂದು ಬಾರಿ ಎದುರಾಳಿ ತಂಡವನ್ನು ಅಲೌಟ್ ಮಾಡಿತು.
ಒಟ್ಟಾರೆ ಪಂದ್ಯದಲ್ಲಿ ಪುಣೇರಿ ಹಾಗೂ ಪಾಟ್ನಾ ದಾಳಿಯಲ್ಲಿ ಸ್ಥಿರ ಪ್ರದರ್ಶನ ನೀಡಿದವು. ಈ ವೇಳೆ ಪಾಟ್ನಾ ದಾಳಿಯಲ್ಲಿ 13, ಪಾಟ್ನಾ ರೈಡ್‌ನಲ್ಲಿ 8 ಅಂಕವನ್ನು ಸೇರಿಸಿತು. ಟ್ಯಾಕಲ್‌ನಲ್ಲಿ ಪುಣೇರಿ ಅಬ್ಬರಿಸಿತು. ಪಲ್ಟನ್ ಟ್ಯಾಕಲ್‌ನಲ್ಲಿ 20 ಅಂಕಗಳನ್ನು ಕಲೆ ಹಾಕಿದರೆ, ಪಾಟ್ನಾ 8 ಅಂಕಗಳನ್ನು ಬುಟ್ಟಿಗೆ ಹಾಕಿಕೊಂಡಿತು. ಪುಣೇರಿ ಪರ ಅಸ್ಲಂ ಇನ್ಮಾದಾರ್ 9 ಅಂಕವನ್ನು ಕಲೆ ಹಾಕಿ ಜಯದಲ್ಲಿ ಮಿಂಚಿದರು.