'ರೈತನ ಮಗನಾಗಿ ವಿಶ್ವ ಗಾಲ್ಫ್ ಚಾಂಪಿಯನ್ ಗೆದ್ದಿದ್ದು ಹೆಮ್ಮೆ'
ಸ್ಯಾಂಡಿಯಾಗೋ ಜುಲೈ 20: ಹರ್ಯಾಣದ ಅಶಿಕ್ಷಿತ ರೈತರೊಬ್ಬರ 10 ವರ್ಷದ ಬಾಲಕ ಈಗ ವಿಶ್ವಖ್ಯಾತಿ ಗಳಿಸಿದ ಸುದ್ದಿ ಕೇಳಿರಬಹುದು, ಓದಿರಬಹುದು. ಇತ್ತೀಚೆಗೆ ಕ್ಯಾಲಿಫೋರ್ನಿಯದಲ್ಲಿ ನಡೆದ ವಿಶ್ವ ಜೂನಿಯರ್ ಗಾಲ್ಫ್ ಚಾಂಪಿಯನ್ ಷಿಪ್‌ನಲ್ಲಿ ಶುಭಂ ಜಗ್ಲಾನ್ ಪ್ರಶಸ್ತಿಯ ಗೆದ್ದು ಹೊಸ ದಾಖಲೆ ಬರೆದಿದ್ದಾರೆ. ರೈತನ ಮಗನಾಗಿ ನಾನು ವಿಶ್ವ ಚಾಂಪಿಯನ್ ಗೆದ್ದಿದ್ದು ಹೆಮ್ಮೆಯ ವಿಷಯ ಎಂದು ಶುಭಂ ಪ್ರತಿಕ್ರಿಯಿಸಿದ್ದಾರೆ.
ಹರ್ಯಾಣದ ಪಾಣಿಪತ್ ಜಿಲ್ಲೆಯ ಇಸ್ರಾನ ಎಂಬ ಹಳ್ಳಿಯ ಶುಭಂ ಈ ಚಾಂಪಿಯನ್ ಶಿಪ್ ನಲ್ಲಿ ಮೂರು ದಿನಗಳಿಂದ ಮೂರು ಸುತ್ತಿನ ಪಂದ್ಯಗಳನ್ನು ಆಡಿ, ಒಟ್ಟು ಏಳು ಅಂಕವನ್ನು ಗಿಟ್ಟಿಸಿಕೊಂಡು ಅಂಡರ್-10 ವಿಭಾಗದ ಗಾಲ್ಫ್ ಚಾಂಪಿಯನ್‌ಷಿಪ್ ಗೆದ್ದುಕೊಂಡರು.

'ನನ್ನ ತಂದೆ ನನ್ನೊಂದಿಗೆ ದಿನದ 24 ಗಂಟೆ ಜೊತೆಯಲ್ಲಿದ್ದರು ನನಗಿಂತ ಹೆಚ್ಚಿನ ಶ್ರಮ ಅವರಿಗೆ ಆಗಿದೆ. ಅಮಿತ್ ಲೂದ್ರಾ ಸರ್, ನನಗೆ ಎಲ್ಲ ರೀತಿಯ ನೆರವು ನೀಡಿದರು. ನನಗೆ ಪ್ರೋತ್ಸಾಹ ನೀಡಿದ ಸ್ನೇಹಿತರು ಹಾಗೂ ಹಿತೈಷಿಗಳಿಗೆ ಋಣಿಯಾಗಿರುವೆ.ನನ್ನ ಅಗತ್ಯವನ್ನೆಲ್ಲ ಪೂರೈಸಿರುವ ಗಾಲ್ಫ್ ಫೌಂಡೇಶನ್, ಅತ್ಯಂತ ಮುಖ್ಯವಾಗಿ ನನ್ನ ಕೋಚ್ ನೊನಿತಾ ಲಾಲ್ ಖುರೇಶಿಗೆ ಸಲ್ಲುತ್ತದೆ' ಎಂದು ಶುಭಂ ಪ್ರತಿಕ್ರಿಯಿಸಿದ್ದಾರೆ.
ಕಳೆದ ವರ್ಷ ರನ್ನರ್ಸ್-ಅಪ್ ಪ್ರಶಸ್ತಿ ಜಯಿಸಿರುವ ಶುಭಂ, ಈ ವರ್ಷ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಅರ್ಜುನ ಪ್ರಶಸ್ತಿ ವಿಜೇತ ಹಾಗೂ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಜಯಿಸಿರುವ ಅಮಿತ್ ಲೂಥ್ರಾರ ಗಾಲ್ಫ್ ಫೌಂಡೇಶನ್ ನೆರವಿನಿಂದ ಶುಭಂ ಟೂರ್ನಿಯಲ್ಲಿ ಭಾಗವಹಿಸಲು ಸಾಧ್ಯವಾಯಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications