ಬೆಂಗಳೂರು, ಏಪ್ರಿಲ್ 09: ಭಾರತದ ಮಹಿಳಾ ಶೂಟರ್‌ಗಳು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಮತ್ತೆರಡು ಪದಕ ಗೆದ್ದಿದ್ದಾರೆ.
ಮಹಿಳೆಯರ 10 ಮೀಟರ್ ಏರ್ ರೈಫಲ್ ಫೈನಲ್‌ನಲ್ಲಿ ಮೆಹುಲಿ ಘೋಷ್ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ. ಇದೇ 25 ವರ್ಷದ ಮೆಹುಲಿ, ಗ್ಲಾಸ್ಕೊದಲ್ಲಿ 2014ರಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್ ಕ್ವಾಲಿಫಿಕೇಷನ್ ನಲ್ಲಿ ತಾವೇ ನಿರ್ಮಿಸಿದ್ದ 415.6 ದಾಖಲೆಯನ್ನು ಮುರಿದರು.
ಮತ್ತೊಬ್ಬ ಶೂಟರ್ ಅಪೂರ್ವಿ ಚಾಂಡೇಲಾ ಇದೇ ಸ್ಪರ್ಧೆಯಲ್ಲಿ ಕಂಚಿನ ಪದಕ ಗಳಿಸಿದರು.
ಸೆಹ್ವಾಗ್ ಅಭಿನಂದನೆ
'10 ಮೀಟರ್ ಏರ್ ಪಿಸ್ತೂಲ್ ಫೈನಲ್ಸ್ ಶೂಟಿಂಗ್‌ನಲ್ಲಿ ಬೆಳ್ಳಿ ಗೆದ್ದ ಮೆಹುಲಿ ಘೋಷ್ ಮತ್ತು ಕಂಚು ಗೆದ್ದ ಅಪೂರ್ವಿ ಚಾಂಡೇಲಾ ಹಾಗೂ ಶೂಟಿಂಗ್‌ನಲ್ಲಿ ಕಂಚು ಗೆದ್ದ ಓಂ ಮಿತರ್‌ವಾಲ್ ಅವರಿಗೆ ಅಭಿನಂದನೆಗಳು' ಎಂದು ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.