ಮದುವೆಗೆ ಒಪ್ಪಲಿಲ್ಲವೆಂದು ಟೇಕ್ವಾಂಡೋ ಆಟಗಾರ್ತಿಗೆ ಗುಂಡಿಕ್ಕಿದ ಕೋಚ್!

ಗುರುಗಾಂವ್, ನವೆಂಬರ್ 12: 25ರ ಹರೆಯದ ಟೇಕ್ವಾಂಡೋ ಆಟಗಾರ್ತಿಯನ್ನು ಆಕೆಯ ಕೋಚ್ ಗುಂಡಿಕ್ಕಿ ಕೊಂದಿರುವ ಘಟನೆ ಹರ್ಯಾಣ ರಾಜ್ಯದ ಗುರುಗಾಂವ್‌ನಲ್ಲಿ ಮಂಗಳವಾರ (ನವೆಂಬರ್ 12) ನಡೆದಿದೆ. ಯುವತಿ ಮದುವೆಗೆ ಒಪ್ಪಲಿಲ್ಲವೆಂದು ಕೋಚ್ ಗುಂಡಿಕ್ಕಿ ಕೊಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ತನ್ನನ್ನು ಮದುವೆಯಾಗು ಎಂದು ಯುವತಿಯ ಕೋಚ್ ಒತ್ತಾಯಿಸಿದ್ದರು. ಆದರೆ ಯುವತಿ ಅದಕ್ಕೆ ಒಪ್ಪದಿದ್ದಾಗ ಆಕೆಯನ್ನು ಕೋಚ್ ಗುಂಡು ಹೊಡೆದು ಸಾಯಿಸಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆರೋಪಿ ಕೋಚ್ ಆಕೆಗೆ ಬಹಳ ಹಿಂದಿನಿಂದಲೂ ಹಿಂಸೆ ನೀಡುತ್ತಿದ್ದಾಗಿ ಯುವತಿಯ ಸಹೋದರ ದೂರಿತ್ತಿದ್ದಾರೆ.
'ಸಾವನ್ನಪ್ಪಿರುವ ಯುವತಿ ಈ ಮೊದಲೇ ಆರೋಪಿ ವಿರುದ್ಧ ನಮ್ಮಲ್ಲಿ ದೂರಿತ್ತಿದ್ದರು. ನಾವು ಈ ಪ್ರಕರಣವನ್ನು ತನಿಖೆ ನಡೆಸುತ್ತಿದ್ದೇವೆ,' ಎಂದು ಸಹಾಯಕ ಪೊಲೀಸ್ ಆಯುಕ್ತ ಪ್ರೀತ್ ಪಾಲ್ ತಿಳಿಸಿದ್ದಾರೆ. ಆರೋಪಿಯನ್ನು ಪೊಲೀಸರು ಇನ್ನು ಬಂಧಿಸಬೇಕಷ್ಟೆ.
Story first published: Tuesday, November 12, 2019, 21:25 [IST]
Other articles published on Nov 12, 2019
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications