ಯೂತ್ ವರ್ಲ್ಡ್ ಚಾಂಪಿಯನ್‌ಶಿಪ್ ಫೈನಲ್‌ಗೆ ಭಾರತೀಯ 8 ಬಾಕ್ಸರ್‌ಗಳು ಎಂಟ್ರಿ

ನವದೆಹಲಿ: 7 ಮಂದಿ ಮಹಿಳಾ ಬಾಕ್ಸರ್‌ಗಳು ಸೇರಿ ಒಟ್ಟು 8 ಮಂದಿ ಬಾಕ್ಸರ್‌ಗಳು ಯೂತ್ ವರ್ಲ್ಡ್ ಚಾಂಪಿಯನ್‌ಶಿಪ್ ಫೈನಲ್‌ಗೆ ಪ್ರವೇಶಿಸಿದ್ದಾರೆ. ಪೋಲ್ಯಾಂಡ್‌ನ ಕೀಲ್ಸ್‌ನಲ್ಲಿ ಈ ಚಾಂಪಿಯನ್‌ಶಿಪ್ ನಡೆಯುತ್ತಿದ್ದು, ಭಾರತೀಯ ಬಾಕ್ಸರ್‌ಗಳು ಅಪರೂಪದ ಸಾಧನೆಗಾಗಿ ಗಮನ ಸೆಳೆದಿದ್ದಾರೆ.
8 ಭಾರತೀಯ ಬಾಕ್ಸರ್‌ಗಳು ಫೈನಲ್‌ಗೆ ಪ್ರವೇಶಿಸಿರುವುದಲ್ಲದೆ ಇನ್ನೂ ಮೂರು ಭಾರತೀಯರು ಕಂಚಿನ ಪದಕಕ್ಕೆ ತೃಪ್ತಿಪಟ್ಟಿದ್ದಾರೆ. ಬಾಕ್ಸಿಂಗ್ ಒಂದೇ ಟೂರ್ನಿಯಲ್ಲಿ 10+ ಪದಕಗಳು ಲಭಿಸುತ್ತಿರುವುದು ಬಲು ಅಪರೂಪ. 2018ರಲ್ಲಿ ಭಾರತೀಯ ತಂಡ ಇಂಥ ಸಾಧನೆ ತೋರಿತ್ತು.
ಚಾಂಪಿಯನ್‌ಶಿಪ್‌ನಲ್ಲಿ ಫೈನಲ್‌ಗೆ ಪ್ರವೇಶಿಸಿರುವ ಮಹಿಳಾ ಬಾಕ್ಸರ್‌ಗಳೆಂದರೆ ಗೀತಿಕಾ (48 ಕೆಜಿ), ಬೇಬಿರೋಜಿಸಲ ಚಾನು (51 ಕೆಜಿ), ವಿಂಕ (60 ಕೆಜಿ), ಅರುಂಧತಿ ಚೌಧರಿ (69 ಕೆಜಿ), ಪೂನಂ (57 ಕೆಜಿ), ಥೋಕೊಂ ಸನಮಾಚು ಚಾನು (75 ಕೆಜಿ), ಅಲ್ಫಿಯಾ ಪಠಾಣ್ (+81 ಕೆಜಿ).
ಪುರುಷರಲ್ಲಿ ಪೈನಲ್‌ಗೆ ಪ್ರವೇಶಿಸಿದವರೆಂದರೆ ಸಚಿನ್ (56 ಕೆಜಿ) ಒಬ್ಬರೆ. ಉಳಿದವರೆಲ್ಲರೂ ಕಂಚಿನ ಪದಕದೊಂದಿಗೆ ಸ್ಪರ್ಧೆ ಮುಗಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications