ಭಾರತದ ಹೆಮ್ಮೆಯ ಬಿಂದ್ರಾಗೆ ಶೂಟಿಂಗ್‌ನ ಅತ್ಯುನ್ನತ 'ದಿ ಬ್ಲ್ಯೂ ಕ್ರಾಸ್' ಗೌರವ

ನವದೆಹಲಿ, ನವೆಂಬರ್ 30: ಭಾರತದ ಹೆಮ್ಮೆಯ ಶೂಟರ್ ಅಭಿನವ್ ಬಿಂದ್ರಾ ಅವರಿಗೆ ಶೂಟಿಂಗ್‌ನ ಅತ್ಯುನ್ನತ ಗೌರವವಾದ 'ದಿ ಬ್ಲ್ಯೂ ಕ್ರಾಸ್' ಲಭಿಸಿದೆ. ಈ ಪ್ರಶಸ್ತಿ ಸ್ವೀಕರಿಸುತ್ತಿರುವ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಬಿಂದ್ರಾ ಪಾತ್ರರಾಗಿದ್ದಾರೆ.
ಇಂಟರ್ ನ್ಯಾಷನಲ್ ಶೂಟಿಂಗ್ ಸ್ಪೋರ್ಟ್ಸ್ ಫೆಡರೇಶನ್ (ಐಎಸ್‌ಎಸ್‌ಎಫ್) ನಿಂದ ಕೊಡಲಾಗುವ 'ದಿ ಬ್ಲ್ಯೂ ಕ್ರಾಸ್' ಪ್ರಶಸ್ತಿಗೆ ಅಂತಾರಾಷ್ಟ್ರೀಯ ಮನ್ನಣೆಯಿದೆ. ಬಿಂದ್ರಾ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಶೂಟಿಂಗ್‌ಗೆ ನೀಡಿರುವ ಅತ್ಯತ್ತಮ ಕೊಡುಗೆಗಳನ್ನು ಪರಿಗಣಿಸಿ ಈ ಗೌರವವನ್ನು ನೀಡಲಾಗಿದೆ.
ಶುಕ್ರವಾರ (ನವೆಂಬರ್ 30) ಮ್ಯೂನಿಚ್ ನಲ್ಲಿ ಪ್ರಶಸ್ತಿ ಸ್ವೀಕರಿಸಿದ ಬಳಿಕ ಟ್ವಿಟರ್ ಮೂಲಕ ಪ್ರತಿಕ್ರಿಯಿಸಿರುವ ಬಿಂದ್ರಾ, 'ಮ್ಯೂನಿಚ್ ನ ಸಭೆಯಲ್ಲಿ ಇವತ್ತು ಐಎಸ್‌ಎಸ್‌ಎಫ್‌ನಿಂದ ಅತ್ಯುನ್ನತ 'ದಿ ಬ್ಲ್ಯೂ ಕ್ರಾಸ್' ಪ್ರಶಸ್ತಿ ಸ್ವೀಕರಿಸುತ್ತಿರುವುದಕ್ಕೆ ನಾನು ನಿಜಕ್ಕೂ ವಿನೀತನಾಗಿದ್ದೇನೆ' ಎಂದಿದ್ದಾರೆ.
ಅಭಿನವ್ ಬಿಂದ್ರಾ ಅವರು 2008ರ ಬೀಜಿಂಗ್ ಒಲಿಂಪಿಕ್ಸ್‌ನ ಪುರುಷರ 10 ಮೀ. ಏರ್ ರೈಫಲ್ ನಲ್ಲಿ ಭಾರತಕ್ಕೆ ಬಂಗಾರ ಗೆದ್ದಿದ್ದರು. ಬಿಂದ್ರಾಗೆ 2000 ಇಸವಿಯಲ್ಲಿ ಅರ್ಜುನ, 2001ರಲ್ಲಿ ರಾಜೀವ್ ಗಾಂಧಿ ಖೇಲ್ ರತ್ನಾ, 2009ರಲ್ಲಿ ಪದ್ಮ ಭೂಷಣ ಗೌರವ ಲಭಿಸಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications