ಐಎಸ್‌ಎಸ್‌ಎಫ್ ವಿಶ್ವಕಪ್: 10 ಮೀ. ಏರ್ ಪಿಸ್ತೂಲ್‌ನಲ್ಲಿ ಅಭಿಷೇಕ್‌ಗೆ ಚಿನ್ನ

ಬೀಜಿಂಗ್, ಏಪ್ರಿಲ್ 27: ಚೀನಾದ ಬೀಜಿಂಗ್‌ನಲ್ಲಿ ನಡೆಯುತ್ತಿರುವ ಇಂಟರ್ ನ್ಯಾಷನಲ್ ಶೂಟಿಂಗ್ ಸ್ಪೋರ್ಟ್ಸ್ ಫೆಡರೇಶನ್ (ಐಎಸ್‌ಎಸ್‌ಎಫ್)ನ ವಿಶ್ವಕಪ್ ಕ್ರೀಡಾಕೂಟದಲ್ಲಿ ಶೂಟರ್ ಅಭಿಷೇಕ್ ವರ್ಮಾ ಅವರು ಪುರುಷರ 10 ಮೀ. ಏರ್ ಪಿಸ್ತೂಲ್‌ನಲ್ಲಿ ಭಾರತಕ್ಕೆ ಬಂಗಾರ ಗೆದ್ದಿದ್ದಾರೆ. ವರ್ಮಾ ಸಾಧನೆಗೆ ಒಲಿಂಪಿಕ್ಸ್ ಅರ್ಹತೆಯೂ ಲಭಿಸಿದೆ.
ಶನಿವಾರ (ಏಪ್ರಿಲ್ 27) ನಡೆದ ಸ್ಪರ್ಧೆಯಲ್ಲಿ 29ರ ಹರೆಯದ ಅಭಿಷೇಕ್ ವರ್ಮಾ ಒಟ್ಟು 242.7 ಪಾಯಿಂಟ್ ಕಲೆ ಹಾಕುವುದರೊಂದಿಗೆ ಬಂಗಾರಕ್ಕೆ ಕೊರಳೊಡ್ಡಿದರು. ಇದೇ ವಿಭಾಗದಲ್ಲಿ ರಷ್ಯಾದ ಆರ್ಟೆಮ್ ಚೆರ್ನೌಸೊವ್ ಮತ್ತು ಕೊರಿಯಾದ ಸೀಂಗ್ ವೂ ಹ್ಯಾನ್ ಕ್ರಮವಾಗಿ ಬೆಳ್ಳಿ ಮತ್ತು ಕಂಚು ಗೆದ್ದುಕೊಂಡಿದ್ದಾರೆ.
2020ಕ್ಕೆ ಭಾರತ ಪರ ಅರ್ಹತೆ ಗಿಟ್ಟಿಸಿಕೊಂಡಿರುವ ಐದನೇ ಶೂಟರ್ ಮತ್ತು 10 ಮೀ. ಏರ್ ಪಿಸ್ತೂಲ್ ಮೂಲಕ ಒಲಿಂಪಿಕ್ಸ್‌ಗೆ ಸ್ಥಾನ ಗಿಟ್ಟಿಸಿಕೊಂಡ ಎರಡನೇ ಸ್ಪರ್ಧಿಯಾಗಿ ಅಭಿಷೇಕ್ ಗುರುತಿಸಿಕೊಂಡರು. ಇದಕ್ಕೂ ಮುನ್ನ ನವದೆಹಲಿಯಲ್ಲಿ ನಡೆದ ಸ್ಪರ್ಧೆಯಲ್ಲಿ ಸೌರಭ್ ಚೌಧರಿ ಒಲಿಂಪಿಕ್ಸ್‌ಗೆ ಟಿಕೆಟ್ ಪಡೆದುಕೊಂಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications