2020ರ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: ಕ್ರೀಡಾ ಕ್ಷೇತ್ರದಲ್ಲಿ ಇಬ್ಬರಿಗೆ ಗೌರವ

ಬೆಂಗಳೂರು: 2020ರ ಸಾಲಿನ ರಾಜ್ಯೋತ್ಸವ ಪ್ರಶ್ತಿ ಪ್ರಕಟವಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 65 ಮಂದಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇದರಲ್ಲಿ ಇಬ್ಬರನ್ನು ಕ್ರೀಡಾ ಕ್ಷೇತ್ರದಲ್ಲಿ ಗುರುತಿಸಿ ಪ್ರಶಸ್ತಿಗಾಗಿ ಹೆಸರಿಸಲಾಗಿದೆ. ಪ್ರಕಟಿತ ಪಟ್ಟಿಯಲ್ಲಿ ತುಮಕೂರಿನ ಎಚ್‌ಬಿ ನಂಜೇ ಗೌಡ ಮತ್ತು ಬೆಂಗಳೂರಿನ ಉಷಾರಾಣಿ ಹೆಸರುಗಳಿವೆ.
ಈ ಬಾರಿ ಕರ್ನಾಟಕವು 65ನೇ ವರ್ಷದ ರಾಜ್ಯೋತ್ಸವ ಆಚರಿಸುತ್ತಿದೆ. ಆದರೆ ಎಂದಿನಂತೆ ಈ ಬಾರಿ ನವೆಂಬರ್ 1ರಂದು ಪ್ರಶಸ್ತಿ ವಿತರಣಾ ಕಾರ್ಯಕ್ರಮ ನಡೆಯುತ್ತಿಲ್ಲ. ಬದಲಾಗಿ ನವೆಂಬರ್ 7ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ಸರಳ ಸಮಾರಂಭದಲ್ಲಿ ಪ್ರಶಸ್ತಿ ವಿತರಿಸಲಾಗುತ್ತದೆ ಎಂದು ಸಚಿವ ಸಿ.ಟಿ ರವಿ ಹೇಳಿದ್ದಾರೆ.
ಕ್ರೀಡಾ ಕ್ಷೇತ್ರದ ಸಾಧಕರನ್ನು ಹೊರತುಪಡಿಸಿ ಉಳಿದ ಎಲ್ಲರೂ 60 ವರ್ಷ ಮೇಲ್ಪಟ್ಟವರಾಗಿದ್ದಾರೆ. ಕ್ರೀಡಾ ಸಾಧನೆಗಾಗಿ ಹೆಸರಿಸಲಾಗಿರುವ ಇಬ್ಬರಲ್ಲಿ ಉಷಾರಾಣಿ ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರ್ತಿಯಾಗಿದ್ದಾರೆ. ಸದ್ಯ ಪೊಲೀಸ್ ಪೇದೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications