ಟೋಕಿಯೋ ಒಲಿಂಪಿಕ್ಸ್‌ಗೆ ಮೊದಲ ಭಾರತೀಯ ಮಹಿಳಾ ಗಾಲ್ಫರ್ ಆಗಿ ಅರ್ಹತೆ ಪಡೆದ ಅದಿತಿ ಅಶೋಕ್

ನವದೆಹಲಿ, ಜೂನ್ 29: ಭಾರತೀಯ ಗಾಲ್ಫರ್ ಅದಿತಿ ಅಶೋಕ್ ಮಂಗಳವಾರ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆಯನ್ನು ಸಂಪಾದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಈ ಮಹತ್ವದ ಕ್ರೀಡಾಕೂಟಕ್ಕೆ ಆಯ್ಕೆಯಾದ ಮೊದಲ ಮಹಿಳಾ ಗಾಲ್ಫರ್ ಎನಿಸಿದ್ದಾರೆ.
ಮಂಗಳವಾರ ಪ್ರಕಟವಾದ ಒಲಿಂಪಿಕ್ಸ್ ಶ್ರೇಯಾಂಕ ಪಟ್ಟಿಯಲ್ಲಿ ಈ ಮಹತ್ವದ ಅವಕಾಶವನ್ನು ಸಂಪಾದಿಸುವ ಮೂಲಕ ಅದಿತಿ ಅಶೋಕ್ ಇತಿಹಾಸವನ್ನು ಸೃಷ್ಟಿಸಿದ್ದಾರೆ. ಈ ಶ್ರೇಯಾಂಕಪಟ್ಟಿಯಲ್ಲಿ ಅದಿತಿ ಅಶೋಕ್ 45ನೇ ಸ್ಥಾನವನ್ನು ಸಂಪಾದಿಸಿದ್ದಾರೆ. ಈ ಮೂಲಕ ಅದಿತಿ ಎರಡನೇ ಬಾರಿಗೆ ಒಲಿಂಪಿಕ್ಸ್ ಕ್ರೀಡಾಕೂಡದಲ್ಲಿ ಭಾಗವಹಿಸಲು ಅವಕಾಶವನ್ನು ಪಡೆದುಕೊಂಡಿದ್ದಾರೆ.
ಈ ಬಗ್ಗೆ ಭಾರತೀಯ ಕ್ರೀಡಾ ಪ್ರಾಧಿಕಾರ(SAI) ಟ್ವೀಟ್ ಮಾಡಿ ಮಾಹಿತಿಯನ್ನು ಹಂಚಿಕೊಂಡಿದ್ದು ಅದಿತಿ ಅಶೋಕ್‌ಗೆ ಅಭಿನಂದನೆಗಳನ್ನು ತಿಳಿಸಿದೆ. " ಅಂತಿಮ ಒಲಿಂಪಿಕ್ಸ್ ಶ್ರೇಯಾಂಕಪಟ್ಟಿ ಇಂದು ಬಿಡುಗಡೆಯಾಗಿದ್ದು ಇದರಲ್ಲಿ ಅದಿತಿ ಅಶೋಕ್ ಭಾರತ ಮೊದಲ ಮಹಿಳಾ ಗಾಲ್ಫರ್ ಆಗಿ ಟೋಕಿಯೋ ಒಲಿಂಪಿಕ್ಸ್ 2020ಗೆ ಅರ್ಹತೆಯನ್ನು ಪಡೆದುಕೊಂಡಿದ್ದಾರೆ. 45ನೇ ಸ್ಥಾನವನ್ನು ಪಡೆದು ಅವರು ಅರ್ಹತೆಯನ್ನು ಪಡೆದಿದ್ದಾರೆ. ಅಭಿನಂದನೆಗಳು" ಎಂದು ಟ್ವೀಟ್‌ನಲ್ಲಿ ಅಭಿನಂದಿಸಿದೆ.
ಈ ಬಗ್ಗೆ ಸ್ವತಃ ಅದಿತಿ ಅಶೋಕ್ ಪ್ರತಿಕ್ರಿಯೆಯನ್ನು ನೀಡಿದ್ದು ಈ ಅವಕಾಶವನ್ನು ಪಡೆದುಕೊಂಡಿರುವುದಕ್ಕೆ ಸಂತಸವನ್ನು ವ್ಯಕ್ತಪಡಿಸಿದ್ದಾರೆ. "ಭಾರತ ತಂಡವನ್ನು ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪ್ರತಿನಿಧಿಸಲು ಅವಕಾಶ ದೊರೆತಿರುವುದು ಅದ್ಭುತವಾದ ಸಂದರ್ಭ" ಎಂದಿದ್ದಾರೆ.
ಕಳೆದ ವಾರ ಭಾರತೀಯ ಪ್ರಮುಖ ಗಾಲ್ಫರ್ ಅನಿರ್ಭನ್ ಲಹಿರಿ ಸತತ ಎರಡನೇ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಆಡುವ ಅವಕಾಶವನ್ನು ಗಿಟ್ಟಿಸಿಕೊಂಡಿದ್ದರು. ಟೋಕಿಯೋ ಗೇಮ್ಸ್ ಶ್ಋಎಯಾಂಕ ಪಟ್ಟಿಯಲ್ಲಿ ಭಾರತೀಯ ಗಾಲ್ಫರ್‌ಗಳ ಪೈಕಿಉ ಅತ್ಯುತ್ತಮ ಸಾಧನೆಯೊಂದಿಗೆ ಈ ಅವಕಾಶವನ್ನು ಅವರು ಸಂಪಾದಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications