Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಬಾಕ್ಸರ್ ಸರಿತಾ ದೇವಿಗೆ ಅಮಾನತು ಶಿಕ್ಷೆ

ನವದೆಹಲಿ, ಅ.22: ದಕ್ಷಿಣ ಕೊರಿಯಾದ ಇಂಚಿಯನ್ ನಲ್ಲಿ ಇತ್ತೀಚೆಗೆ ನಡೆದ ಏಷ್ಯನ್ ಗೇಮ್ಸ್ ನಲ್ಲಿ ವಿವಾದ ಹುಟ್ಟಿಹಾಕಿದ್ದ ಬಾಕ್ಸರ್ ಸರಿತಾ ದೇವಿ ಅವರನ್ನು ಅಂತಾರಾಷ್ಟ್ರೀಯ ಬಾಕ್ಸಿಂಗ್ ಸಮಿತಿ ಅಮಾನತು ಮಾಡಿದೆ.

ಏಷ್ಯನ್ ಗೇಮ್ಸ್ 2014ರ 60ಕೆಜಿ ವಿಭಾಗದ ಸೆಮಿಫೈನಲ್ ಪಂದ್ಯದ ವೇಳೆ ರೆಫ್ರಿ ನಿರ್ಣಯವನ್ನು ಸರಿತಾ ಪ್ರಶ್ನಿಸಿದ್ದರು. ಅವರು ಪ್ರಶಸ್ತಿ ಪ್ರದಾನ ಸಮಯದಲ್ಲಿ ಪ್ರಶಸ್ತಿ ಪದಕ ಸ್ವೀಕರಿಸಲು ನಿರಾಕರಿಸಿದ್ದರು. ಅಲ್ಲದೆ, ತಮಗೆ ಸಿಕ್ಕ ಕಂಚಿನ ಪದಕವನ್ನು ದಕ್ಷಿಣ ಕೊರಿಯಾದ ಬಾಕ್ಸಿಂಗ್ ಪಟು ಜಿ ನಾ ಪಾರ್ಕ್ ಕೊರಳಿಗೆ ಹಾಕಿದ್ದರು. [ದೇಶದ ಗೌರವ ಹೆಚ್ಚಿಸಿದವರ ಜೊತೆ ಮೋದಿ]

AIBA suspends boxer Sarita Devi


ಆದರೆ, ನಂತರ ಸರಿತಾ ದೇವಿ ಅವರು ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾ(OCA) ಮುಂದೆ ಕ್ಷಮೆಯಾಚಿಸಿದ್ದರು. ಎಐಬಿಎಗೂ ಕ್ಷಮೆಯಾಚಿಸಿ ಪತ್ರ ಬರೆದಿದ್ದರು. ಆದರೆ, ಪ್ರಶಸ್ತಿ ಪ್ರದಾನ ಸಮಾರಂಭ ವೇಳೆ ಸರಿತಾ ನಡೆದುಕೊಂಡಿದ್ದು ಪೂರ್ವ ನಿಯೋಜಿತವಾಗಿತ್ತು ಎಂದು ಎಐಬಿಎ ಪರಿಗಣಿಸಿ ಅಮಾನತು ಶಿಕ್ಷೆ ವಿಧಿಸಿದೆ. [ಸರಿತಾ ಬೆಂಬಲಕ್ಕೆ ನಿಂತ ಕ್ರೀಡಾಪ್ರೇಮಿಗಳು]

ಎಲ್ ಸರಿತಾ ದೇವಿ ಅವರ ಜೊತೆಗೆ ಆಕೆಯ ಕೋಚ್ ಜಿಎಸ್ ಸಂಧು, ಎಜೆ ಸುಮರಿವಾಲ ಅವರಿಗೂ ಅಮಾನತು ಶಿಕ್ಷೆ ಸಿಕ್ಕಿದೆ. ಅಮಾನತು ಶಿಕ್ಷೆ ಅನಿರ್ಧಿಷ್ಟಾವಧಿಯಾಗಿದ್ದು,ಎಐಬಿಎ ಮುಂದಿನ ಆದೇಶ ಸಿಗುವ ತನಕ ಈ ಮೂವರು ಯಾವುದೇ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವಂತಿಲ್ಲ, ಟೂರ್ನಿಗಳಿಗೆ ಹಾಜರಾಗುವಂತಿಲ್ಲ. ಹೀಗಾಗಿ ಮಹಿಳಾ ವಿಶ್ವ ಬಾಕ್ಸಿಂಗ್ ಚಾಪಿಯನ್ ಶಿಪ್ ಸ್ಪರ್ಧೆಯಲ್ಲಿ ಸರಿತಾ ದೇವಿ ಪಾಲ್ಗೊಳ್ಳುವಂತಿಲ್ಲ.

Story first published: Wednesday, January 3, 2018, 10:16 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+