ಏಷ್ಯನ್ ಚಿನ್ನ ಗೆದ್ದ ವಿನೇಶ್ ಫೋಗಟ್ ಎಂಗೇಜ್ಮೆಂಟ್ ವಿಮಾನ ನಿಲ್ದಾಣದಲ್ಲಿ!

ನವದೆಹಲಿ, ಆಗಸ್ಟ್ 28: ಏಷ್ಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ ವಿಜೇತ ಕ್ರೀಡಾಪಟುವೊಬ್ಬರು ತನ್ನ ಎಂಗೇಜ್ಮೆಂಟನ್ನು ಎಲ್ಲಿ ಮಾಡಿಕೊಳ್ಳಬಹುದು ಹೇಳಿ? ಏಷ್ಯಾನ್ ಕುಸ್ತಿಯಲ್ಲಿ ಬಂಗಾರ ಗೆದ್ದಿರುವ ವಿನೇಶ್ ಫೋಗಟ್ ಅವರು ವಿಮಾನ ನಿಲ್ದಾಣದಲ್ಲಿ ಎಂಗೇಜ್ಮೆಂಟ್ ಮಾಡಿಕೊಂಡು ಅಚ್ಚರಿಗೆ ಕಾರಣವಾಗಿದ್ದಾರೆ.
ಇಂಡೋನೇಷ್ಯಾದ ಜಕಾರ್ತಾ ಮತ್ತು ಪಾಲೆಂಬಂಗ್ ನಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್ ನ ಮಹಿಳಾ ರಸ್ಲಿಂಗ್ ನಲ್ಲಿ ವಿನೇಶ್ ಚಿನ್ನದ ಪದಕ ಗೆದ್ದಿದ್ದರು. ಏಷ್ಯಾನ್ ಕುಸ್ತಿಯಲ್ಲಿ ಚಿನ್ನ ಗೆದ್ದ ಭಾರತ ಮೊದಲ ಮಹಿಳೆ ಕೀರ್ತಿಗೂ ವಿನೇಶ್ ಪಾತ್ರರಾಗಿದ್ದರು.
ಏಷ್ಯನ್ ಗೇಮ್ಸ್ 2018 ವಿಶೇಷ ಪುಟಕ್ಕೆ ಕ್ಲಿಕ್ ಮಾಡಿ
ಜಕಾರ್ತಾ ಕ್ರೀಡಾಕೂಟ ಮುಗಿಸಿ ತವರಿಗೆ ವಾಪಸ್ಸಾಗುತ್ತಿದ್ದ ವೇಳೆ ವಿಮಾನ ನಿಲ್ದಾಣದಲ್ಲೇ ವಿನೇಶ್ ಮದುವೆ ನಿಶ್ಚಿತಾರ್ಥ ನಡೆದುಹೋಗಿದೆ. ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅವರ ಬಹುಕಾಲದ ಬಾಲ್ಯ ಸ್ನೇಹಿತ ಸೋಮ್ ವೀರ್ ರಾತಿ ಅವರು ಫೋಗಟ್ ಜೊತೆ ಉಂಗರ ಬದಲಿಸಿಕೊಂಡಿದ್ದಾರೆ.
ವಿನೇಶ್ ಅವರ 24ನೇ ಹುಟ್ಟ ಹಬ್ಬದ ದಿನವೇ ಅವರ ನಿಶ್ಚಿತಾರ್ಥ ವಿಭಿನ್ನವಾಗಿ ನೆರವೇರಿದ್ದು ಮತ್ತೊಂದು ವಿಶೇಷ. ನಿಶ್ಚಿತಾರ್ಥದ ವೇಳೆ ವಿನೇಶ್ ಅವರ ಕುಟುಂಬಸ್ಥರು ಮತ್ತು ಸ್ನೇಹಿತರು ಉಪಸ್ಥಿತರಿದ್ದರು.
ರಸ್ಲಿಂಗ್ ನಲ್ಲಿ ಗ್ರೀಕೋ-ರೋಮನ್ ಎಂಬ ಒಂದು ಶೈಲಿಯಿದೆ. ವಿಶ್ವದಾದ್ಯಂತ ಈ ಶೈಲಿ ಜನಪ್ರಿಯಗೊಳ್ಳುತ್ತಿದೆ. ಸೋಮ್ ವೀರ್ ಅವರೂ ಗ್ರೋಕೋ-ರೋಮನ್ ರಸ್ಲರ್. 2016ರ ರಿಯೋ ಒಲಿಂಪಿಕ್ಸ್ ನಲ್ಲಿ ಮೊಣಕಾಲು ಗಾಯಕ್ಕೀಡಾಗಿ ವಿನೇಶ್ ವಾಪಸ್ಸಾಗಿದ್ದಾಗ ಅವರು ಚೇತರಿಸಿಕೊಳ್ಳುವಲ್ಲಿ ಸೋಮ್ ವೀರ್ ಮಹತ್ವದ ಪಾತ್ರ ವಹಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications