Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ರಾಜ್ಯ ಹಿರಿಯರ/ಕಿರಿಯರ ಅಥ್ಲೆಟಿಕ್ಸ್: ಆಳ್ವಾಸ್ ಕ್ರೀಡಾ ಕ್ಲಬ್ ಗೆ ಸಮಗ್ರ ಪ್ರಶಸ್ತಿ

ಮಂಗಳೂರು, ಸೆಪ್ಟೆಂಬರ್ 7: ಬುಧವಾರ ಮುಕ್ತಾಯಗೊಂಡ ರಾಜ್ಯಮಟ್ಟದ ಹಿರಿಯ ಹಾಗೂ ಕಿರಿಯರ ಅಥ್ಲೆಟಿಕ್ಸ್ ನಲ್ಲಿ ಮೂಡುಬಿದಿರೆಯ ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್, ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ಇಡೀ ಟೂರ್ನಿಯಲ್ಲಿ ಒಟ್ಟು 545 ಅಂಕಗಳನ್ನು ಕಲೆಹಾಕುವ ಮೂಲಕ ಆಳ್ವಾಸ್ ತಂಡವು ಮಿಕ್ಕೆಲ್ಲಾ ತಂಡಗಳಿಗಿಂತ ಪರಿಣಾಮಕಾರಿಯಾದ ತಂಡವಾಗಿ ಹೊರಹೊಮ್ಮಿತು. ಒಟ್ಟು 178 ಪದಕಗಳನ್ನು ತನ್ನದಾಗಿಸಿಕೊಂಡ ಆಳ್ವಾಸ್ ತಂಡ, ಪದಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಕಂಗೊಳಿಸಿತು.

Alvas Sport club wins overall award in Karnataka State level Junior, Senior athletics meet

ಆಳ್ವಾಸ್ ಆಟಗಾರರು, ಅಥ್ಲೆಟೆಕ್ಸ್ ಟೂರ್ನಿಯ ಎಲ್ಲಾ 8 ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಅಷ್ಟೇ ಅಲ್ಲ, 14, 16, 18, 20 ವಯೋಮಿತಿಯೊಳಗಿನ ಬಾಲಕರ ವಿಭಾಗದಲ್ಲಿ ಹಾಗೂ 16, 18, 20 ವರ್ಷ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ಚಾಂಪಿಯನ್ ಆಗಿದೆ ಆಳ್ವಾಸ್.

ಇದಲ್ಲದೆ, ಮಹಿಳೆಯರ ಹಾಗೂ ಪುರುಷರ ವಿಭಾಗಗಳಲ್ಲೂ ಆಳ್ವಾಸ್ ತಂಡಗಳು, ಆಟಗಾರರು ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

Story first published: Wednesday, January 3, 2018, 10:16 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+