Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Aman Sehrawat: ಭಾರತದ ನ್ಯೂ ಪೋಸ್ಟರ್‌ ಬಾಯ್‌ ಅಮನ್‌ ಸೆಹ್ರಾವತ್‌ ಯಾರು?

ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಭಾರತದ ಕ್ರೀಡಾಪಟುಗಳು ಸ್ಥಿರ ಪ್ರದರ್ಶನ ನೀಡಿದ್ದಾರೆ. ಭಾರತದ ಭರವಸೆಯ ಕುಸ್ತಿ ಪಟು ಅಮನ್‌ ಸೆಹ್ರಾವತ್‌ ಕಂಚಿನ ಪದಕವನ್ನು ಗೆದ್ದು ಬೀಗಿದ್ದಾರೆ. ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ ಅಮನ್‌ ಅಮೋಘ ಪ್ರದರ್ಶನ ನೀಡಿ, ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಶುಕ್ರವಾರ ನಡೆದ 57 ಕೆಜಿ ಪುರುಷರ ಫ್ರಿ ಸ್ಟೈಲ್‌ ವಿಭಾಗದಲ್ಲಿ ಅಮನ್‌ ನಿಗದಿತ ಸಮಯದಲ್ಲಿ 13-5 ಅಂಕಗಳಿಂದ ಡೇರಿಯನ್ ಡೋಯಿ ಕ್ರೂಜ್ ಅವರನ್ನು ಮಣಿಸಿದರು. ಈ ಮೂಲಕ ಭಾರತ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಆರನೇ ಪದಕವನ್ನು ತನ್ನದಾಗಿಸಿಕೊಂಡಿದೆ. ಅಮನ್‌ ಈ ಬಾರಿಯ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದ ಏಕೈಕ ಪುರಷ ಕುಸ್ತಿ ಪಟು ಆಗಿದ್ದರು.

Aman Sehrawat India s Bronze Medalist in Wrestling at the Paris 2024 Olympics

ಕುಸ್ತಿಯಲ್ಲಿ ಅಮೋಘ ಪ್ರದರ್ಶನ

2008 ರಿಂದ ಭಾರತ ಕುಸ್ತಿಯಲ್ಲಿ ನಿರಂತರವಾಗಿ ಪದಕ ಗೆಲ್ಲುತ್ತಿದೆ. ಈ ಬಾರಿ ಕುಸ್ತಿಯಲ್ಲಿ ಅಮನ್‌ ಸೆಹ್ರಾವತ್‌ ಕೊರಳಿಗೆ ಕಂಚಿನ ಹಾರ ಬಿದ್ದಿದೆ. ಸುಶೀಲ್ ಕುಮಾರ್‌, ಯೋಗೇಶ್ವರ್ ದತ್, ಸಾಕ್ಷಿ ಮಲಿಕ್, ರವಿ ಕುಮಾರ್ ದಾಹಿಯ, ಬಜರಂಗ್‌ ಪುನಿಯಾ ಈಗಾಗಲೇ ಒಲಿಂಪಿಕ್ಸ್‌ನಲ್ಲಿ ಪದಕದ ಸಾಧನೆ ಮಾಡಿದ್ದಾರೆ. ಈ ಸಾಲಿಗೆ ಈಗ ಅಮನ್‌ ಸೇಹ್ರಾವತ್‌ ಸೇರುತ್ತಾರೆ.

ಅಮನ್‌ ಸೆಹ್ರಾವತ್‌ ಅವರು ಕುಸ್ತಿಯಲ್ಲಿ ಪದಕ ಗೆಲ್ಲುತ್ತಿದ್ದಂತೆ ಭಾರತದಲ್ಲಿ ಸಂಭ್ರಮಾಚರಣೆ ಜೋರಾಗಿತ್ತು. ದೇಶದ ನ್ಯೂ ಪೋಸ್ಟರ್‌ ಬಾಯ್‌ ಸಾಧನೆಯನ್ನು ಜನರು ಕೊಂಡಾಡಿದರು. ಹಾಗಿದ್ದರೆ ಅಮನ್ ಸೆಹ್ರಾವತ್‌ ಯಾರು ಎಂಬ ಪ್ರಶ್ನೆ ಎಲ್ಲರ ಮನಸ್ಸಿನಲ್ಲು ಏಳುವುದು ಸಹಜ. ಇದಕ್ಕೆ ಉತ್ತರ ಇಲ್ಲಿದೆ.

Aman Sehrawat India s Bronze Medalist in Wrestling at the Paris 2024 Olympics

ಅಮನ್‌ ಸೆಹ್ರಾವತ್ ಯಾರು?

ಅಮನ್ ಸೆಹ್ರಾವತ್‌ ಹರಿಯಾಣದವರು. ಅಮನ್ 2003 ರಲ್ಲಿ ಜನಿಸಿದರು ಮತ್ತು ಅವರು 11 ವರ್ಷದವರಾಗಿದ್ದಾಗ ಪಾಲಕರನ್ನು ಕಳೆದುಕೊಂಡರು. ಇವರ ಅಜ್ಜ ಇವರನ್ನು ಪೋಷಿಸುತ್ತಿದ್ದಾರೆ. ಚಿಕ್ಕವಯಸ್ಸಿನಲ್ಲಿ ಅಮನ್‌ ಅವರಿಗೆ ಕುಸ್ತಿಯ ಮೇಲಿನ ಪ್ರೀತಿ ಅಪಾರವಾಗಿತ್ತು. ಆರಂಭದಲ್ಲಿ ಇವರು ಮಣ್ಣಿನ ಮೇಲೆ ಕುಸ್ತಿ ಆಡುತ್ತಿದ್ದರು. ಕ್ರೀಡೆಯ ಮೇಲಿನ ಪ್ರೀತಿ ಕಂಡು ಅವರನ್ನು ಛತ್ರಸಾಲ್ ಸ್ಟೇಡಿಯಂಗೆ ಸೇರಿಸಲಾಯಿತು. ದೆಹಲಿಯ ಛತ್ರಸಾಲ್‌ ಮೈದಾನದಲ್ಲಿ ಇವರು ಕುಸ್ತಿ ಪಟ್ಟುಗಳನ್ನು ಕಲಿತಿದ್ದಾರೆ.

ಛತ್ರಸಾಲ್ ಸ್ಟೇಡಿಯಂ ಹಲವು ಕುಸ್ತಿ ಪಟುಗಳ ತಾಲೀಮು ಶಾಲೆ. ಒಲಿಂಪಿಕ್ಸ್‌ನಲ್ಲಿ ಪದಕ ಸಾಧನೆ ಮಾಡಿರುವ ಸುಶೀಲ್ ಕುಮಾರ್, ಯೋಗೇಶ್ವರ್ ದತ್, ರವಿ ದಹಿಯಾ, ಬಜರಂಗ್ ಪುನಿಯಾ ಸೇರಿದಂತೆ ಹಲವು ಕುಸ್ತಿಪಟುಗಳು ಈ ಸ್ಟೇಡಿಯಂನಲ್ಲೇ ಇದ್ದು ತರಬೇತಿ ಪಡೆದಿದ್ದಾರೆ.

ಅಮನ್‌ ಸಾಧನೆಯ ಹಾದಿ

2008ರಲ್ಲಿ ಕಂಚು ಹಾಗೂ 2012ರಲ್ಲಿ ಬೆಳ್ಳಿ ಪದಕದ ಸಾಧನೆ ಮಾಡಿರುವ ಸುಶೀಲ್ ಕುಮಾರ್‌ ಅವರಿಂದ ಪ್ರೇರಿಪಿತರಾಗಿ ಇವರು ಕುಸ್ತಿ ಆಡಲು ಆರಂಭಿಸಿದರು. ನೂರ್-ಸುಲ್ತಾನ್‌ನಲ್ಲಿ ನಡೆದ 2019ರ ಏಷ್ಯನ್ ಕೆಡೆಟ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆಲ್ಲುವ ಮೂಲಕ ಅಮನ್‌ ಮೊದಲ ಬಾರಿಗೆ ಸುದ್ದಿ ಆಗಿದ್ದರು.

2022ರಲ್ಲಿ ನಡೆದಿದ್ದ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನ 23 ವರ್ಷ ವಯೋಮಿತಿಯೊಳಗಿನ ವಿಭಾಗದಲ್ಲಿ ಅಮನ್ ಚಿನ್ನದ ಸಾಧನೆ ಮಾಡಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ಮೊದಲ ಭಾರತೀಯ ಕುಸ್ತಿ ಪಟು ಎಂಬ ಹೆಗ್ಗಳಿಕೆಗೆ ಇವರದ್ದಾಗಿದೆ. ಇವರು 2022 ರ ಏಷ್ಯನ್ ಗೇಮ್ಸ್‌ನಲ್ಲಿ 57 ಕೆಜಿ ವಿಭಾಗದಲ್ಲಿ ಕಂಚಿನ ಪದಕ, 2023 ರ ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದಾರೆ.

ಸೆಹ್ರಾವತ್ ಇಸ್ತಾನ್‌ಬುಲ್‌ನಲ್ಲಿ ನಡೆದ 2024 ರ ವಿಶ್ವ ಕುಸ್ತಿ ಒಲಿಂಪಿಕ್ ಅರ್ಹತಾ ಪಂದ್ಯಾವಳಿಯಲ್ಲಿ ಭಾಗವಹಿಸಿ, ಪ್ಯಾರಿಸ್ ಒಲಿಂಪಿಕ್ಸ್‌ ಕೋಟಾ ತಮ್ಮದಾಗಿಸಿಕೊಂಡಿದ್ದರು.

Story first published: Saturday, August 10, 2024, 6:23 [IST]
Other articles published on Aug 10, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+