ರಾತೋರಾತ್ರಿ ಬದಲಾಯಿತು ಒಲಿಂಪಿಕ್ಸ್ ಪದಕ ವಿಜೇತರ ಅದೃಷ್ಟ: ನೌಕರಿಯಲ್ಲಿ ಬಡ್ತಿ
ಇತ್ತೀಚಿಗೆ ಪ್ಯಾರಿಸ್‌ನಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ತೆರೆ ಬಿದ್ದಿದೆ. ಭಾರತದ 117 ಕ್ರೀಡಾ ಪಟುಗಳು ಈ ಕ್ರೀಡಾ ಕೂಟದಲ್ಲಿ ಭಾಗವಹಿಸಿದ್ದರು. ಒಲಿಂಪಿಕ್ಸ್‌ನಲ್ಲಿ ಭಾರತ 6 ಪದಕಗಳ ಬೇಟೆ ನಡೆಸಿದೆ. ಈ ಕ್ರೀಡಾ ಪಟುಗಳಿಗೆ ಭಾರತದಲ್ಲಿ ಅದ್ಧೂರಿ ಸ್ವಾಗತವನ್ನು ನೀಡಲಾಯಿತು. ಆಗಸ್ಟ್ 15 ರಂದು ಪ್ರಧಾನಿ ನರೇಂದ್ರ ಮೋದಿ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ಮಾಡಿದ ಬಳಿಕ ಒಲಿಂಪಿಕ್ಸ್ ಕ್ರೀಡಾ ಕೂಟದಲ್ಲಿ ಭಾಗವಹಿಸಿದ್ದ ಕ್ರೀಡಾ ಪಟುಗಳನ್ನು ಭೇಟಿ ಆದರು.
ಭಾರತ ಈ ಬಾರಿ ಒಂದು ಬೆಳ್ಳಿ, ಐದು ಕಂಚಿನ ಪದಕ ಗೆದ್ದಿದೆ. ಪದಕ ವಿಜೇತರಿಗೆ ತವರಿನಲ್ಲಿ ಹೃದಯ ಸ್ಪರ್ಷಿ ಸ್ವಾಗತ ನೀಡಲಾಯಿತು. ಈ ವೇಳೆ ಹಲವು ಕ್ರೀಡಾ ಪಟುಗಳಿಗೆ ಸರ್ಕಾರಿ ನೌಕರಿಯ ಆಫರ್ ಸಹ ಬಂದಿತು. ಇನ್ನು ಹಲವು ಕ್ರೀಡಾ ಪಟುಗಳು ಈಗಾಗಲೇ ನೌಕರಿಯಲ್ಲಿದ್ದವರಿಗೆ ಇಲಾಖೆ ಗೌರವಿಸಿದೆ. ಇನ್ನು ಭಾರತಕ್ಕೆ ಕಂಚಿನ ಪದಕದ ಹಾರ ತೊಡಿಸಿದ ಕುಸ್ತಿ ಪಟು ಅಮನ್ ಸೆಹ್ರಾವತ್ ಅವರ ಮುಖದಲ್ಲಿ ರೈಲ್ವೆ ಇಲಾಖೆ ಮಂದಹಾಸ ಮೂಡಿಸಿದೆ.

ಚಿಕ್ಕ ವಯಸ್ಸಿನಲ್ಲಿ ಒಲಿಂಪಿಕ್ಸ್ ಪದಕ
ಪುರುಷರ 57 ಕೆಜಿ ಫ್ರೀ ಸ್ಟೈಲ್ ಕುಸ್ತಿಯಲ್ಲಿ ಕಂಚಿನ ಪದಕ ಗೆದ್ದು ದೇಶಕ್ಕೆ ಹೆಮ್ಮೆ ತಂದ ಅಮನ್ ಸೆಹ್ರಾವತ್ ಇತಿಹಾಸ ನಿರ್ಮಿಸಿದ್ದಾರೆ. ಅವರ ಸಾಧನೆಯ ನಂತರ, ಉತ್ತರ ರೈಲ್ವೆ ಅವರಿಗೆ ಬಡ್ತಿ ನೀಡಿ ವಿಶೇಷ ಕರ್ತವ್ಯದ ಅಧಿಕಾರಿ (OSD) ಹುದ್ದೆಗೆ ನೇಮಿಸಿದೆ. ಅಮನ್ ಕೇವಲ 21 ನೇ ವಯಸ್ಸಿನಲ್ಲಿ ಒಲಿಂಪಿಕ್ ಪದಕ ಗೆಲ್ಲುವ ಮೂಲಕ, ಚಿಕ್ಕ ವಯಸ್ಸಿನಲ್ಲಿ ಒಲಿಂಪಿಕ್ಸ್ ಪದಕ ಗೆದ್ದ ಕ್ರೀಡಾ ಪಟು ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಅಮನ್ ಸೆಹ್ರಾವತ್ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಕುಸ್ತಿ ಪದಕವನ್ನು ಗೆದ್ದರು. ಈ ಮೂಲಕ ಛತ್ರಸಾಲ್ ಕ್ರೀಡಾಂಗಣದ ಸಂಪ್ರದಾಯವನ್ನು ಮುಂದುವರೆಸಿದರು. ಚಿಕ್ಕ ವಯಸ್ಸಿನಲ್ಲಿ ತಂದೆ ತಾಯಿಯನ್ನು ಕಳೆದುಕೊಂಡ ಅಮನ್, ಅಜ್ಜನ ಹಾರೈಕೆಯಲ್ಲಿ ಬೆಳೆದರು. ಕಂಚಿನ ಪದಕಕ್ಕಾಗಿ ನಡೆದ ಹೋರಾಟದಲ್ಲಿ ಅಮನ್ 13-5 ರಿಂದ ರಿಕೊ ಕುಸ್ತಿಪಟು ಡೇರಿಯನ್ ಟೋಯಿ ಕ್ರೂಜ್ ಅವರನ್ನು ಸೋಲಿಸಿದರು. ತಮ್ಮ 21 ವರ್ಷ ಮತ್ತು 24 ದಿನಗಳಲ್ಲಿ ಒಲಿಂಪಿಕ್ಸ್ ಪದಕ ವಿಜೇತ ಮೊದಲ ಕ್ರೀಡಾ ಪಟು ಎಂಬ ಹೆಗ್ಗಳಿಕೆ ತಮ್ಮದಾಗಸಿಕೊಂಡರು.

ಉತ್ತರ ರೈಲ್ವೆ ಗೌರವ
ಉತ್ತರ ರೈಲ್ವೇ ಪ್ರಧಾನ ಕಛೇರಿಯಲ್ಲಿ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಪ್ರಧಾನ ವ್ಯವಸ್ಥಾಪಕ ಶೋಭನ್ ಚೌಧರಿ ಅಮನ್, ಅವರಿಗೆ ಸನ್ಮಾನಿಸಿದರು. ಅಮನ್ ಅವರ ಈ ವಿಶೇಷ ಸಾಧನೆಯ ನಂತರ, ಉತ್ತರ ರೈಲ್ವೆ ಅವರನ್ನು ವಿಶೇಷ ಕರ್ತವ್ಯದ ಅಧಿಕಾರಿ (OSD) ಹುದ್ದೆಗೆ ಬಡ್ತಿ ನೀಡಿದೆ.

ಸ್ವಪ್ನಿಲ್‌ಗೂ ಬಂಪರ್
ಅಮನ್ ಸೆಹ್ರಾವತ್ ಅವರೊಂದಿಗೆ ರೈಲ್ವೇಸ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಮತ್ತೊಬ್ಬ ಅಥ್ಲೀಟ್ ಸ್ವಪ್ನಿಲ್ ಕುಸಾಲೆಗೂ ಜಾಕ್ ಪಾಟ್ ಹೊಡೆದಿದೆ. ಅವರಿಗೆ ಉದ್ಯೋಗದಲ್ಲಿ ಡಬಲ್ ಬಡ್ತಿ ಸಿಕ್ಕಿದೆ. ಇವರು 50 ಮೀ ರೈಫಲ್ 3 ಪೊಸಿಷನ್ಸ್ ಈವೆಂಟ್‌ನಲ್ಲಿ ಐತಿಹಾಸಿಕ ಪದಕವನ್ನು ಗೆದಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications