Paris Olympics 2024: ಪದಕದ ಭರವಸೆ ಹೆಚ್ಚಿಸಿದ ಅಮನ್ ಸೆಹ್ರಾವತ್
ಆಗಸ್ಟ್ 8 ಗುರುವಾರ, ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ಕುಸ್ತಿ ಚೇತರಿಸಿಕೊಂಡಿದೆ. ಭಾರತದ ಪಟು ಅಮನ್ ಸೆಹ್ರಾವತ್ ಪುರುಷರ 57 ಕೆಜಿ ಫ್ರೀಸ್ಟೈಲ್ ಕುಸ್ತಿಯಲ್ಲಿ ಅಮೋಘ ಗೆಲುವು ಸಾಧಿಸಿದ್ದಾರೆ.
ಈ ಗೆಲುವಿನೊಂದಿಗೆ ಅಮನ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಇದರೊಂದಿಗೆ 2024ರ ಪ್ಯಾರಿಸ್ ಒಲಿಂಪಿಕ್ಸ್ ಕುಸ್ತಿಯಲ್ಲಿ ಭಾರತಕ್ಕೆ ಪದಕದ ಭರವಸೆಯನ್ನು ಅಮನ್ ಸೆಹ್ರಾವತ್ ಮೂಡಿಸಿದ್ದಾರೆ.

ಪುರುಷರ 57 ಕೆಜಿ ಸುತ್ತಿನ 16ರ ಪಂದ್ಯದಲ್ಲಿ ಯುರೋಪಿಯನ್ ಚಾಂಪಿಯನ್‌ಶಿಪ್‌ನ ಚಿನ್ನದ ಪದಕ ವಿಜೇತ ಉತ್ತರ ಮೆಸಿಡೋನಿಯಾದ ವ್ಲಾಡಿಮಿರ್ ಎಗೊರೊವ್ ಅವರನ್ನು ಐದನೇ ಶ್ರೇಯಾಂಕದ ಅಮನ್ ಸೆಹ್ರಾವತ್ 10-0 ಅಂತರದಿಂದ ಸೋಲಿಸಿದರು.
ಪ್ರಾಬಲ್ಯ ಸಾಧಿಸಿದ ಅಮನ್
ಪಂದ್ಯದುದ್ದಕ್ಕೂ ಅಮನ್ ತನ್ನ ಎದುರಾಳಿಯ ಮೇಲೆ ಪ್ರಾಬಲ್ಯ ಸಾಧಿಸಿದರು. ತನ್ನ ಕೌಶಲ್ಯಗಳನ್ನು ಪ್ರದರ್ಶಿಸಿದ ಅಮನ್ ಯಾವುದೇ ಅಂಕಗಳನ್ನು ಬಿಟ್ಟು ಕೊಡಲಿಲ್ಲ. ವ್ಲಾಡಿಮಿರ್ ಎಗೊರೊವ್ ಅವರು ಕೂಡ ಅಮನ್ ವಿರುದ್ಧ ದಿಟ್ಟ ಹೋರಾಟ ನಡೆಸಲು ಸಾಧ್ಯವಾಗಲಿಲ್ಲ.
ಇದರ ಲಾಭ ಪಡೆದ ಅಮನ್ ಎರಡನೇ ಅವಧಿಯಲ್ಲಿ 2 ನಿಮಿಷ ಬಾಕಿ ಇರುವಾಗಲೇ ಜಯಗಳಿಸುವ ಮೂಲಕ ಕ್ವಾರ್ಟರ್ ಫೈನಲ್‌ನಲ್ಲಿ ಸ್ಥಾನ ಪಡೆದರು. ಏಷ್ಯನ್ ಚಾಂಪಿಯನ್ ಅಮನ್ ಸೆಹ್ರಾವತ್ ತಮ್ಮ ಮುಂದಿನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ವಿಶ್ವ ಚಾಂಪಿಯನ್ ಕುಸ್ತಿಪಟು ಅಲ್ಬೇನಿಯಾದ ಝೆಲಿಂಖಾನ್ ಅಬಕರೋವ್ ಅವರನ್ನು ಎದುರಿಸಲಿದ್ದಾರೆ .
ಈ ಪಂದ್ಯ ಇಂದು (ಗುರುವಾರ) ಭಾರತೀಯ ಕಾಲಮಾನ ಮಧ್ಯಾಹ್ನ 3:47ಕ್ಕೆ ಆರಂಭವಾಗಲಿದೆ. ಈ ಪಂದ್ಯವನ್ನು ಗೆದ್ದು ಸೆಮಿಫೈನಲ್ ತಲುಪುವ ಗುರಿಯನ್ನು ಅಮನ್ ಹೊಂದಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅಮನ್ ಮೂಲಕ ಪದಕ ಗೆಲ್ಲುವ ನಿರೀಕ್ಷೆಯಲ್ಲಿ ಭಾರತವಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications