For Quick Alerts
ALLOW NOTIFICATIONS  
For Daily Alerts

ಅನಂತ್-ರಾಧಿಕಾ ಮದುವೆ: ಸಂಪ್ರದಾಯ ಮತ್ತು ಆಧುನಿಕತೆಯ ಅದ್ಧೂರಿ ಸಮ್ಮಿಲನ

By Mykhel Desk

ಭಾರತ ಅದೆಷ್ಟೋ ವೈಭವ ಪೂರಿತ ಮದುವೆಗಳಿಗೆ ಸಾಕ್ಷಿಯಾಗಿದೆ. ಸ್ವರ್ಗಕ್ಕೆ ಕಿಚ್ಚುವಂತಹ ಮದುವೆಗಳಿಗೆ ಈ ದೇಶ ಆತಿಥ್ಯ ನೀಡಿದೆ. ಇಂತಹದ್ದೇ ಒಂದು ಮದುವೆ ಮುಂಬೈನಲ್ಲಿ ನಡೆದಿತ್ತು. ಈ ಐಷಾರಾಮಿ ಸಮಾರಂಭವನ್ನು ಕಣ್ಣು ತುಂಬಿಕೊಳ್ಳಲು ದೇಶ ಹಾಗೂ ವಿದೇಶದ ಅತಿಥಿಗಳು ಭಾಗವಹಿಸಿದ್ದರು. ಈ ಮದುವೆ ತಿಂಗಳಗಳ ಕಾಲ ನಡೆಯಿತು. ನಮ್ಮ ಸಂಸ್ಕೃತಿ ಹಾಗೂ ಪರಂಪರೆಯನ್ನು ಈ ಮದುವೆಯ ವೇಳೆ ಅನಾವರಣಗೊಳಿಸಲಾಯಿತು. ನಿಮಗೆ ಈ ಮದುವೆ ಯಾವುದು ಎಂಬ ಬಗ್ಗೆ ಒಂದು ಅಂದಾಜು ಸಿಕ್ಕಿರಬಹುದು. ಎಸ್‌.. ಅದುವೆ ಭಾರತದ ಶ್ರೀಮಂತ ಉದ್ಯಮಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಹ.

ಈ ಮದುವೆ ಆಧುನಿಕ ಜಗತ್ತಿಗೆ ತನ್ನ ಬೇರುಗಳನ್ನು ತೋರಿಸುವಂತೆ ಇತ್ತು. ಈ ಮದುವೆಯ ಝಲಕ್ ಭಾರತೀಯರ ಮನದಲ್ಲಿ ಇನ್ನು ಹಾಗೆ ಇದೇ. ಇಂದ್ರ ಪುರಂದಂತೆ ಮುಂಬೈ ಅಂಬಾನಿ ಮನೆಯನ್ನು ಶೃಂಗಾರ ಗೊಳಿಸಲಾಗಿತ್ತು. ದೇಶ ಹಾಗೂ ವಿದೇಶದ ಅತಿಥಿಗಳಿಗೆ ಈ ಸಮಾರಂಭದಲ್ಲಿ ಭಾಗವಹಿಸುವುದೇ ಒಂದು ದೊಡ್ಡ ಸಂಗತಿ. ಈ ಮದುವೆಯ ಮೂಲಕ ಭಾರತೀಯ ಆಚರಣೆ, ಮೌಲ್ಯ ಮತ್ತು ಸಂಪ್ರದಾಯ ಎಂತಹದ್ದು ಎಂಬುದನ್ನು ವಿಶ್ವದ ಮುಂದೆ ತೆರೆದಿಟ್ಟಂತಾಗಿದೆ.

Anant Ambani amp amp Radhika Merchant s Wedding India s Grand Cultural Showcase

ಶ್ರೀಮಂತ ಉದ್ಯಮಿಯ ಮಗನ ಮದುವೆಯಂದರೆ ಈ ಸಮಾರಂಭದಲ್ಲಿ ಯಾವುದೇ ನ್ಯೂನತೆ ಕಾಣದಂತೆ ಎಚ್ಚರಿಕೆ ವಹಿಸಲಾಗಿತ್ತು. ಎಲ್ಲವೂ ಪದ್ಧತಿಯಂತೆ ನಡೆಯಿತು. ಈ ವೇಳೆ ಸನಾತನ ವೈದಿಕ ಆಚರಣೆಗೆ ನೀಡಿದ ಮನ್ನಣೆ ನಮ್ಮಲಿನ ಪದ್ಧತಿಯನ್ನು ವಿಶ್ವದ ಮುಂದೆ ಪರಿಚಯಿಸಿತು. ದೊಡ್ಡ ವೇದಿಕೆಯ ಮೇಲೆ ನಮ್ಮ ಪೂರ್ವಜರು ನಮಗೆ ಹಾಕಿಕೊಟ್ಟ ಹಾದಿಯ ಪರಿಚಯವನ್ನು ಇದೇ ವೇಳೆ ಮಾಡಲಾಗಿತ್ತು. ಈ ವಿವಾಹ ಕಾರ್ಯಕ್ರಮಗಳು ತಿಂಗಳು ಪೂರ್ತಿ ನಡೆಯಿತು.

ಭಾರತೀಯ ಆಚರಣೆಯ ಅನಾವರಣ

ವಿವಾಹಕ್ಕೆ ಸುಮಾರು 15 ದಿನಗಳ ಮುಂಚಿತವಾಗಿಯೇ ಮದುವೆ ಕಾರ್ಯಗಳಿಗೆ ಚಾಲನೆ ಸಿಕ್ಕಿತು. ಮುಂಬೈನ ಬಿಕೆಸಿಯಲ್ಲಿರುವ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ವಿಘ್ನವಿನಾಶಕ ಗಣಪತಿ ಪೂಜೆಯೊಂದಿಗೆ, ವಿವಾಹ ಕಾರ್ಯಕ್ರಮಗಳನ್ನು ಆರಂಭಿಸಲಾಯಿತು. ಈ ಮೂಲಕ ದೇಶದಲ್ಲಿನ ಸಂಪ್ರದಾಯಾವನ್ನು ಶ್ರೀಮಂತ ಉದ್ಯಮಿ ವಿಶ್ವಕ್ಕೆ ಪರಿಚಯಿಸಿಕೊಟ್ಟರು. ನಂತರ ಸಂಪ್ರದಾಯದಂತೆ ಹಳದಿ, ಮೆಹಂದಿ, ಸಂಗೀತ, ಕಾರ್ಯಕ್ರಮಗಳು ನಡೆದವು. ಈ ಎಲ್ಲ ಸಂಪ್ರದಾಯಗಳು ನಮ್ಮ ಸಂಸ್ಕೃತಿಯಲ್ಲಿ ಆಳವಾಗಿ ಬೇರು ಬಿಟ್ಟಿವೆ.

ಶ್ರೀಮಂತ ಉದ್ಯಮಿ ಅಂಬಾನಿ ಮಗನ ಮದುವೆಯಲ್ಲಿ ಹೇಗೆ ಐಷಾರಾಮಿಗೆ ಕಮ್ಮಿ ಇರಲಿಲ್ಲವೋ ಹಾಗೆ, ಎಲ್ಲೂ ಸಂಪ್ರದಾಯವನ್ನು ಬಿಟ್ಟು ನಡೆಯಲಿಲ್ಲ. ವಿವಾಹ ವೇದಿಕೆಯ ಮೇಲಂತೂ ವೈದಿಕರ ಧ್ವನಿಯಲ್ಲಿ ಕೇಳಿದ ವೇದ ಘೋಷಗಳು ನಿಜಕ್ಕೂ, ನಾವು ಎಂತಹ ದೇಶದ ಪ್ರಜೆಗಳು ಎಂಬುದನ್ನು ಬಿಂಬಿಸುವಂತೆ ಇತ್ತು. ಇದೇ ವೇಳೆ ಆಚರಣೆ ಮತ್ತು ಶಾಸ್ತ್ರಗಳ ಸಮ್ಮಿಲನದಂತೆ ಈ ಕಾರ್ಯಕ್ರಮ ಮೂಡಿ ಬಂದಿತು. ಈ ವೈಭವಪೂರಿತ ಮದುವೆಯೂ ಭಾರತೀಯ ವೈವಾಹಿಕ ಸಮರಾಂಭಗಳ ಸೊಬಗನ್ನು ವಿಶ್ವದ ಮುಂದೆ ತೆರೆದಿಟ್ಟಂತೆ ಕಂಡು ಬಂದಿತು.

ಕಾರ್ಯಕ್ರಮದಲ್ಲಿ ಬಳಸಲಾದ ಪ್ರತಿಯೊಂದು ವಸ್ತುವನ್ನು ಸಹ ಅಳೆದು ತೂಗಿ ಬಳಸಲಾಗಿತ್ತು. ಈ ವಸ್ತುಗಳ ಭಾರತದ ಸಂಸ್ಕೃತಿಗೆ ಹಿಡಿದ ಕೈಗನ್ನಡಿಯಾಗಿದ್ದವು. ಒಂದಿಷ್ಟು ಪ್ರದೇಶದಲ್ಲಂತೂ ದೇವಾಲಯದಂತಹ ವಾತಾವರಣವನ್ನು ನಿರ್ಮಿಸಲಾಗಿತ್ತು. ಇನ್ನು ಹಲವು ಉದ್ದೇಶದಿಂದ ಇಲ್ಲಿನ ಪ್ರತಿಯೊಂದು ವಸ್ತುವನ್ನು ಶೃಂಗಾರಗೊಳಿಸಲಾಗಿತ್ತು. ಈ ಮದುವೆಯ ಮೂಲಕ ವಿಶ್ವಕ್ಕೆ ದೇಶದಲ್ಲಿ ಬೇರೂರಿವು ಆಳವಾದ ಆಧ್ಯಾತ್ಮಿಕತೆಯ ಪರಿಚಯವನ್ನು ಮಾಡಿಸಿಕೊಟ್ಟಿತು.

ಉಡುಗೆಯಲ್ಲೂ ಸಂಸ್ಕೃತಿಯ ಪರಿಚಯ

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಹದಲ್ಲಿ ಬಳಸಲಾಗಿದ್ದ ಉಡುಪುಗಳು ಸಹ ದೇಶದಲ್ಲಿನ ಕರಕುಶಲತೆಯ ಆಳವನ್ನು ಪ್ರದರ್ಶಿಸಿದವು. ಈ ಶ್ರೀಮಂತ ಮದುವೆಯ ಮೂಲಕ ದೇಶದಲ್ಲಿನ ಶ್ರೀಮಂತ ಜವಳಿ ಪರಂಪರೆಯ ಪರಿಚಯವನ್ನು ಜಗತ್ತಿಗೆ ಅಂಬಾನಿ ಕುಟುಂಬಸ್ಥರು ಮಾಡಿಕೊಟ್ಟರು. ಇದೇ ವೇಳೆ ಮದುವೆಯ ದಿನ ರಾಧಿಕಾ ಅವರ ಕೆಂಪು-ಬಿಳಿ ಲೆಹೆಂಗಾ ಹಾಗೂ ಅನಂತ್‌ ಅವರ ಧರಿಸಿದ್ದ ಸೂಕ್ಷ್ಮ ಕಸೂತಿ ಕೆಲಸದ ಶೇರ್ವಾನಿ ದೇಶದಲ್ಲಿನ ಸಂಸ್ಕೃತಿಗೆ ನೀಡಿದ ಗೌರವವಾಗಿತ್ತು. ಈ ವಿವಾಹದಲ್ಲಿ ಬಳಸಲಾದ ಉಡುಪಗಳಲ್ಲಿ ಭಾರತದ ಟಚ್ ಎದ್ದು ಕಾಣುತ್ತಿತ್ತು.

ಅಂಬಾನಿ ಮತ್ತು ಮರ್ಚೆಂಟ್ ಮದುವೆಯ ಮೂಲಕ ಕುಶಲಕರ್ಮಿಗಳ ಶ್ರಮದ ಪರಿಚಯವನ್ನು ವಿಶ್ವಕ್ಕೆ ಮಾಡಿಕೊಡಲಾಯಿತು. ಕೈಮಗ್ಗ, ನೇಕಾರ, ಅಲಂಕಾರಿಕ ವಸ್ತುಗಳು, ಊಟ, ಆಚರಣೆ ನಮ್ಮ ದೇಶದಲ್ಲಿ ಸಾವಿರಾರು ವರ್ಷಗಳಿಂದ ಬೇರು ಬಿಟ್ಟ ಸಂಸ್ಕೃತಿಯನ್ನು ಪರಿಚಯಿಸಿದವು.

ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಸದ್ದು

ಶ್ರೀಮಂತಿಕೆಯ ವೈಭವ ಹಾಗೂ ದೇಶದ ಸಂಸ್ಕೃತಿಯನ್ನು ವಿಶ್ವವು ಕೊಂಡಾಡಿತು. ಈ ಮದುವೆಯ ಸುದ್ದಿಗಳನ್ನು ವಿಶ್ವದ ಮಾಧ್ಯಗಳಾದ ಸಿಎನ್‌ಎನ್, ಬಿಬಿಸಿ, ವೋಗ್ ಮತ್ತು ದಿ ನ್ಯೂಯಾರ್ಕ್ ಟೈಮ್ಸ್‌ನಂತಹ ಪ್ರಮುಖ ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಗಳು ಪ್ರಸಾರ ಮಾಡಿ, ದೇಶದ ಸಂಸ್ಕೃತಿಯ ಪರಿಚಯವನ್ನು ವಿದೇಶಿಗರಿಗೆ ಮಾಡಿಸಿಕೊಟ್ಟವು. ಜಗತ್ತಿಗೆ ಈ ಮದುವೆಯ ಮೂಲಕ ಭಾರತೀಯ ವೈವಾಹಿಕ ಸಂಪ್ರದಾಯಗಳ ಮಹತ್ವ ತೋರಿಸಿಕೊಟ್ಟಿತು. ಹೀಗಾಗಿ ಈ ಮದುವೆ ಟ್ರೆಂಡಿಂಗ್ ವಿಷಯವಾಯಿತು.

ವಿಶ್ವದ ಮುಂದೆ ಈ ಮದುವೆ ಭಾರತೀಯರು ಹೆಮ್ಮೆ ಪಡುವಂತೆ ಆಯಿತು. ಶ್ರೀಮಂತಿಕೆ, ಪರಂಪರೆ, ಸಂಸ್ಕೃತಿ ಹಾಗೂ ಮೌಲ್ಯಗಳನ್ನು ತೋರಿಸಿಕೊಟ್ಟಂತೆ ಕಂಡಿತು. ವಿಶ್ವ ಮಟ್ಟದಲ್ಲಿ ತನ್ನ ಉದ್ಯಮಗಳಿಂದಲೇ ಗುರುತಿಸಿಕೊಂಡಿರುವ ವ್ಯಾಪಾರಿ ಅಂಬಾನಿ ಕುಟುಂಬ ಈ ಮದುವೆಯ ಮೂಲಕ ಆಚರಣೆಗಳಿಂದಲೂ ಗುರುತಿಸಿಕೊಂಡಿತು.

ಆಧುನಿಕತೆ, ಸಂಪ್ರದಾಯದ ಮಿಲನ

ಭಾರತೀಯರು, ಪಾಶಿಮಾತ್ಯ ಸಂಸ್ಕೃತಿಯತ್ತ ವಾಲುತ್ತಿರುವ ಈ ಸಮಯದಲ್ಲಿ, ಶ್ರೀಮಂತ ಕುಟುಂಬದ ವಿವಾಹವು ದೇಶದ ಸಂಪ್ರದಾಯವನ್ನು ಮತ್ತೊಮ್ಮೆ ಎತ್ತಿ ತೋರಿಸಿದಂತೆ ಇತ್ತು. ಆಧುನಿಕತೆ ಹಾಗೂ ಸಂಪ್ರದಾಯಗಳು ಹೊಂದಿಕೊಂಡು ಸಹಬಾಳ್ವೆ ನಡೆಸಬಲ್ಲವು ಎಂಬುದನ್ನು ಈ ಮದುವೆ ಸಾರಿತು.

ಅನಂತ್ ಹಾಗೂ ರಾಧಿಕಾ ದಂಪತಿಗಳು ಈ ತಂತ್ರಜ್ಞಾನ ಯುಗದಲ್ಲೂ, ಕೌಂಟುಂಬಿಕ ಮೌಲ್ಯಗಳ ಮಹತ್ವವನ್ನು ಸಾರಿ ತಿಳಿಸಿದವು. ಈ ಮದುವೆ ಹಿರಿಯರಿಗೆ ಗೌರವ, ಬಾಂಧವ್ಯ, ಆಧ್ಯಾತ್ಮಿಕ ಸಂಪ್ರದಾಯಗಳ ಪರಿಚಯವನ್ನು ನವ ಜನರಿಗೆ ತೋರಿಸಿಕೊಡಲು ಮಾಡಿದಂತೆ ಕಂಡು ಬಂದಿತು. ಈ ಮದುವೆಯ ಅದೆಷ್ಟೋ ಜನರಿಗೆ ತಮ್ಮ ಸಂಸ್ಕೃತಿಯ ಮಹತ್ವವನ್ನು ತಿಳಿಯಲು ವೇದಿಕೆ ಆಯಿತು.

ಸಂಸ್ಕೃತಿಕ ಮೈಲುಗಲ್ಲು

ಅನಂತ್ ಮತ್ತು ರಾಧಿಕಾ ವಿವಾಹವು ಭಾರತೀಯ ಸಂಸ್ಕೃತಿಯು ಜಾಗತಿಕ ಮಟ್ಟದಲ್ಲಿ ಪರಿಚಯಿಸಿಕೊಟ್ಟಿತು. ಇದು ಕೇವಲ ಒಂದು ಮದುವೆ ಆಗಿರದೆ, ಭಾರತೀಯ ಮೌಲ್ಯಗಳನ್ನು ತಿಳಿ ಪಡಿಸಿತು. ಈ ಮದುವೆ ಮುಂದಿನ ಪೀಳಿಗೆಯ ಜನರ ಮನದಲ್ಲಿ ವೈಭವ, ಸಂಸ್ಕೃತಿ, ಆಚರಣೆಯಿಂದಾಗಿ ಹಲವು ವರ್ಷಗಳ ಕಾಲ ಮನದಲ್ಲಿ ಇರುತ್ತದೆ.

Story first published: Saturday, July 12, 2025, 12:05 [IST]
Other articles published on Jul 12, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+