ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ವಿವಾಹ: ವಿಶ್ವದ ಮುಂದೆ ಭಾರತದ ಪವರ್ ಪ್ರದರ್ಶನ
ವಾಣಿಜ್ಯ ನಗರಿಯಲ್ಲಿ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ಮದುವೆ ಕಳೆದ ವರ್ಷ ಅದ್ಧೂರಿಯಾಗಿ ನಡೆಯಿತು. ಈ ಮದುವೆಗೆ ಅಂಬಾನಿ ಮನೆ ಹಾಗೂ ಆ ಬಿದಿ ನವ ವಧುವಿನಂತೆ ಶೃಂಗಾರ ಗೊಂಡಿತ್ತು. ಈ ಸಮಾರಂಭದಲ್ಲಿ ಹಾಜರಾಗಾಲು ಭಾರತ ಹಾಗೂ ವಿದೇಶಿ ಗಣ್ಯರು ಸಹ ಆಗಮಿಸಿದ್ದರು. ವಿಶ್ವದ ದಿಗ್ಗಜ ಉದ್ಯಮಿಗಳ ಸಮ್ಮಿಲನದಂತೆ ಕಂಡ ಈ ಮದುವೆ ಕಾರ್ಯಕ್ರಮವನ್ನು ಕಣ್ಣು ತುಂಬಿಕೊಳ್ಳುವುದೇ ಕಣ್ಣಿಗೆ ಹಬ್ಬವಾಗಿತ್ತು. ಎಲ್ಲಿ ನೋಡಿದರೂ ಅಂಬಾನಿ ಕುಟುಂಬದ ವೈಭವ ಕಣ್ಮನ ಸೆಳೆಯುತ್ತಿತ್ತು. ಈ ಅದ್ಧೂರಿ ಮದುವೆಗೆ ಹಾಜರಾಗಿ ವಧು, ವರರಿಗೆ ಶುಭ ಕೋರಲು ಅತಿಥಿಗಳ ದಂಡೇ ಮುಂಬೈನತ್ತ ಆಗಮಿಸಿತ್ತು. ಈ ಮೂಲಕ ವಿಶ್ವದ ಮುಂದೆ ಭಾರತದ ಪವರ್ ಪ್ರದರ್ಶಿಸಿದಂತೆ ಇತ್ತು.
ವಿಶ್ವದ ಖ್ಯಾತ ಉದ್ಯಮಿಯ ಮದುವೆ ಎಂದರೆ ಕೇಳಬೇಕಾ ಗಣ್ಯರ ದಂಡೇ ಮುಂಬೈನಲ್ಲಿತ್ತು. ಸಿನಿಮಾ ತಾರೆಯರು, ಕ್ರೀಡಾ ಕ್ಷೇತ್ರದ ಮಹನಿಯರು, ಖ್ಯಾತ ರಾಜಕಾರಣಿಗಳು, ದೊಡ್ಡ ದೊಡ್ಡ ಉದ್ಯಮಿಗಳು ಭಾಗವಹಿಸಿದ್ದನ್ನು ನೋಡಿದರೆ, ಶೃಂಗಸಭೆಯ ನೆನಪು ತರಿಸುವಂತೆ ಇತ್ತು. ವಿಶ್ವದ ಗಣ್ಯರು ಭಾರತೀಯ ಪದ್ಧತಿಗಳಿಗೆ ಮಾರು ಹೋದರು. ಅಲ್ಲದೆ ಅವರು ಸಹ ಇಲ್ಲಿನ ಆಚಾರಣೆಗಳನ್ನು ವೀಕ್ಷಿಸಿದರು. ಇಲ್ಲಿನ ಉಡುಗೆ ತೊಟ್ಟು ಖುಷಿ ಪಟ್ಟರು. ಈ ಮದುವೆ ಸಂಸ್ಕೃತಿ ಬಿಂಬಿಸುವ ದೊಡ್ಡ ವೇದಿಕೆ ಆಗಿತ್ತು.

ವಿಶ್ವದ ಖ್ಯಾತನಾಮರ ಉಪಸ್ಥಿತಿ
ವಿಶ್ವದ ಖ್ಯಾತ ಉದ್ಯಮಿಯ ಮದುವೆ ಎಂದರೆ ಕೇಳಬೇಕೆ. ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅವರು, ಕೈಗಾರಿಕೋದ್ಯಮಿ ವಿರೇನ್ ಮರ್ಚೆಂಟ್ ಅವರ ಪುತ್ರಿ ರಾಧಿಕಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದನ್ನು ನೋಡಲು ಗಣ್ಯಾತಿಗಣ್ಯರು ಹಾಜರಿದ್ದರು. ಈ ಮೂಲಕ ಈ ಮದುವೆ ಆಚರಣೆ ಮತ್ತು ಸಂಸ್ಕೃತಿ ಜೋಡಣೆಗೆ ಸೇತುವೆ ಆಯಿತು.
ಬಿಲ್ ಗೇಟ್ಸ್, ಮಾರ್ಕ್ ಜುಕರ್‌ಬರ್ಗ್, ಬಾಬ್ ಇಗರ್, ಟೋನಿ ಬ್ಲೇರ್, ಬೋರಿಸ್ ಜಾನ್ಸನ್, ಜಿಯಾನಿ ಇನ್‌ಫಾಂಟಿನೊ ಮತ್ತು ಇವಾಂಕಾ ಟ್ರಂಪ್ ಮದುವೆಯಲ್ಲಿ ಹಾಜರಿದ್ದರು. ಅಲ್ಲದೆ ಭಾರತದ ಚಿತ್ರರಂಗದ ತಾರೆಯರು, ಕ್ರೀಡಾ ಕ್ಷೇತ್ರದ ಮಹನಿಯರನ್ನು ಒಂದೇ ಸೂರಿನಲ್ಲಿ ನೋಡುವುದು ಕಣ್ಣಿಗೆ ಹಬ್ಬವಾಗಿತ್ತು. ವಿಶ್ವವೇ ಅಂಬಾನಿ ಕುಟುಂಬದ ಆತಿಥ್ಯಕ್ಕೆ ಮಾರು ಹೋಯಿತು.
ಭಾರತೀಯ ಸಂಸ್ಕೃತಿಗೆ ಮಾರುಹೋದ ಗಣ್ಯರು
ಇಷ್ಟೊಂದು ಗಣ್ಯರ ದಂಡು ಈ ಮದುವೆ ಕಾರ್ಯಕ್ರಮದಲ್ಲಿ ಹಾಜರಿರುತ್ತದೆ ಎಂದರೆ, ಮಾಧ್ಯಮ ಕ್ಯಾಮೆರಾ ಕಣ್ಣುಗಳು ಸಹ ಸಹಜವಾಗಿಯೇ ಈ ಕಾರ್ಯಕ್ರಮದ ಮೇಲೆ ನೆಟ್ಟಿತ್ತು. ಡಬ್ಲ್ಯುಡಬ್ಲ್ಯುಇ (WWE) ದಿಗ್ಗಜ ಜಾನ್ ಸೆನಾ ಎಲ್ಲರ ಚಿತ್ತವನ್ನು ಒಂದು ಕ್ಷಣಕ್ಕೆ ತಮ್ಮತ್ತ ಕದಿಯುವಲ್ಲಿ ಸಫಲರಾಗಿದ್ದರು. ಇನ್ನು ಕಿಮ್ ಮತ್ತು ಖ್ಲೋಯ್ ಕಾರ್ಡಶಿಯಾನ್ ದೇಶೀಯ ಉಡುಗೆಯಲ್ಲಿ ಮಿಂಚಿದರು. ಕೈಮಗ್ಗದಲ್ಲಿ ನೈದ ಸೀರಿಯಲ್ಲಿ ನಿಕ್ಕಿ ಹಿಲ್ಟನ್ ರಾಥ್‌ಚೈಲ್ಡ್ ಲುಕ್ ಸಖತ್ ವೈರಲ್ ಆಗಿತ್ತು. ಮದುವೆಯಲ್ಲಿ ಎಲ್ಲರ ಕಣ್ಣುಗಳನ್ನು ಪ್ರಿಯಾಂಕಾ ದಂಪತಿಗಳು ಸಹ ಒಮ್ಮೆ ಕದ್ದರು.
ಈ ಸ್ಟಾರ್ ವ್ಯಕ್ತಿಗಳು ಈ ಮದುವೆಯಲ್ಲಿ ಭಾಗವಹಿಸುವುದಲ್ಲದೇ ಇಲ್ಲಿನ ಸಂಸ್ಕೃತಿಯ ಪರಿಚಯವನ್ನು ಸಾಮಾಜಿಕ ತಾಣದಲ್ಲಿ ಪರಿಚಯಿಸಿದ ರೀತಿ ನಿಜಕ್ಕೂ ಎಲ್ಲರ ಮನ ಗೆದ್ದಿತು. ಅಲ್ಲದೆ ಈ ಸ್ಟಾರ್‌ಗಳು ಹಿಂದಿ ಭಾಷೆಯಲ್ಲಿ ಸಂಸ್ಕೃತಿಯಕ ಪರಿಚಯ ಮಾಡಿಸಿಕೊಟ್ಟರು.
ಮಾದರಿ ಮದುವೆ
ವಿಶ್ವದ ಖ್ಯಾತ ನಾಮ ಉದ್ಯಮಿ ಮುಕೇಶ್ ಅಂಬಾನಿ ಅವರ ಪುತ್ರನ ಮದುವೆಯ ವೈಭವದ ಅನಾವರಣ ಮಾಡಿತು. ವಿಶ್ವದ ಖ್ಯಾತ ಮಾಧ್ಯಮಗಳಾದ ವೋಗ್ ಮತ್ತು ನ್ಯೂಯಾರ್ಕ್ ಟೈಮ್ಸ್, ಸಿಎನ್‌ಎನ್, ಬಿಬಿಸಿ ಮತ್ತು ಪೀಪಲ್ ಮ್ಯಾಗಜೀನ್ ಈ ಮದುವೆಯ ವರದಿಯನ್ನು ಮಾಡಿದವು. ಈ ಮದುವೆಯ ವೈಭವದ ವರದಿಗಳ ಜೊತೆಗೆ ಮಾಧ್ಯಮಗಳು ಸಂಸ್ಕೃತಿ, ಆಚರಣೆಯ ಬಗ್ಗೆ ಬೆಳಕು ಚೆಲ್ಲಿದವು. ಈ ಶ್ರೀಮಂತ ಮದುವೆ ಅದ್ಧೂರಿ ಜೊತೆಗೆ ಸಂಸ್ಕೃತಿಯ ಕಾರಣದಿಂದಲೂ ಹೆಸರು ಮಾಡಿತು. ಈ ಐಶಾರಾಮಿ ಮದುವೆ ದಿಗ್ಗಜರ ಸಮ್ಮಲಿನ ಅಷ್ಟೇ ಆಗಿರದೆ, ದೇಶೀಯ ಮೌಲ್ಯಗಳನ್ನು ಪರಿಚಯಿಸಿದ ಸಮಾರಂಭದಂತೆ ಕಂಡು ಬಂದಿತು.

ಶೃಂಗಸಭೆಯ ರೀತಿ ಕಾಣಿಸಿಕೊಂಡ ಮದುವೆ ತನ್ನ ವೈಭವದ ಜೊತೆ ಜೊತೆಗೆ ಭಾರತದ ಆಚರಣೆಯನ್ನು ಸಂಭ್ರಮಿಸಿತು. ವಿಶ್ವದ ಗಣ್ಯರು ಈ ಮದುವೆ ಸಮಾರಂಭದಲ್ಲಿ ಭಾಗವಹಿಸಿ ಖುಷಿ ಪಟ್ಟರು. ಅಲ್ಲದೆ ಇಲ್ಲಿನ ಸಂಪ್ರದಾಯಗಳಿಗೆ ಮನಸೋತರು. ಈ ಮೂಲಕ ಅಂಬಾನಿ ಕುಟುಂಬ ಭಾರತದ ಸಂಪ್ರದಾಯಗಳನ್ನು ಹೆಮ್ಮೆಯಿಂದ ವಿಶ್ವದ ಮುಂದೆ ಪ್ರದರ್ಶಿಸಬೇಕು ಎಂಬುದನ್ನು ಸಾರಿ ಹೇಳಿತು.
ಸಂಪ್ರದಾಯಕ್ಕೆ ಮನಸೋತ ಖ್ಯಾತನಾಮರು
ಈ ಮದುವೆ ಸಮಾರಂಭದಲ್ಲಿ ಸೆಲೆಬ್ರಿಟಿಗಳು ಸಂಗೀತ, ಅರಿಶಿನ ಮತ್ತು ಪವಿತ್ರ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಭಾಗವಹಿಸಿದರು. ಈ ಮೂಲಕ ಈ ಗಣ್ಯರು ಭಾರತದಲ್ಲಿನ ಆಚರಣೆಯನ್ನು ಮೆಲುಕು ಹಾಕಲು ಈ ಸಮಾರಂಭ ವೇದಿಕೆ ಆಯಿತು. ಈ ಸಮಾರಂಭದಲ್ಲಿ ಭಾಗವಹಿಸಿದ ಆತಿಥೇಯರು ದೇಶದ ಸಂಸ್ಕೃತಿಕ ರಾಯಭಾರಿಗಳ ರೀತಿ ಕಾಣಿಸಿಕೊಂಡರು.
ಒಂದು ಮದುವೆ ಹಲವು ದೊಡ್ಡ ಕಾರ್ಯಕ್ರಮಗಳಿಗೆ ವೇದಿಕೆ ಆಯಿತು. ಈ ಮದುವೆಯಲ್ಲಿ ಭಾರತೀಯರು ಅತಿಥಿಗಳಿಗೆ ನೀಡುವ ಗೌರವದಿಂದ ಹಿಡಿದು, ಇಲ್ಲಿನ ಮಣ್ಣಿನ ಸಂಸ್ಕೃತಿಯ ಮಜಲುಗಳನ್ನು ವಿಶ್ವಕ್ಕೆ ಪರಿಚಯಿಸಿಕೊಟ್ಟಿತು. ಇಲ್ಲಿನ ಉಡುಗೆ, ತೊಡುಗೆ, ಆಚಾರ, ವಿಚಾರಗಳನ್ನು ವಿಶ್ವದ ಮುಂದೆ ಮದುವೆ ತೆರೆದಿಟ್ಟಿತು.
ಸಂಸ್ಕೃತಿಯ ಆಕರ್ಷಣೆ
ಆಕರ್ಷಣೆಯ ಹೆಸರಿನಲ್ಲಿ ಸಂಸ್ಕೃತಿಗೆ ಅಷ್ಟಾಗಿ ಒತ್ತು ನೀಡದ ಈ ಯುಗದಲ್ಲಿ ಅನಂತ್-ರಾಧಿಕಾ ವಿವಾಹವು ದೇಶದ ಸಾಂಸ್ಕೃತಿ ಗುರುತಿನ ಮೂಲಕ ಜಾಗತಿಕ ಆಕರ್ಷಣೆ ಆಯಿತು. ಹೊಸ ತಲೆಮಾರಿಗೆ ನಮ್ಮ ಮಣ್ಣಿನ ಸೊಗಡನ್ನು ಪರಿಚಯಿಸಲು ಈ ಮದುವೆ ಒಂದು ಒಳ್ಳೆಯ ಉದಾಹರಣೆ ಆಯಿತು. ಈ ಮದುವೆ ನಡೆದು ದಿನಗಳೇ ಕಳೆದಿವೆ ಆದರೆ ಜನರು ಇದರ ವೈಭವ, ಆಡಂಬರದ ಜೊತೆಗೆ, ಈ ಮದುವೆಯಲ್ಲಿ ಕಂಡು ಬಂದ ಆಚರಣೆ ಹಾಗೂ ಸಂಸ್ಕೃತಿಯನ್ನು ಸಹ ಬಹು ವರ್ಷಗಳ ಕಾಲ ನೆನಪಿನಲ್ಲಿ ಇಟ್ಟುಕೊಳ್ಳುತ್ತಾರೆ.
ಅಂತಾರಾಷ್ಟ್ರೀಯ ಗಣ್ಯರು ಸಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡಿದ್ದು, ದೇವರಿಗೆ ನಮಸ್ಕರಿಸಿದ್ದು, ದಂಪತಿಗಳಿಗೆ ಶುಭಾಶಯ ತಿಳಿಸಿದ ಕ್ಷಣಗಳನ್ನು ನಮ್ಮ ನೆನಪಿನ ಬುತ್ತಿಯ ಭಾಗವಾಗಿರುತ್ತದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications