ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಭಾರತಕ್ಕೆ ಮೊದಲ ಸ್ಕೀಯಿಂಗ್ ಪದಕ, ಇತಿಹಾಸ ಬರೆದ ಅಂಚಲ್

By Manjunatha
Anchul Thakur wins first ever international bronze medal for India in skiing sports.

ಮನಾಲಿ, ಜನವರಿ 10: ಹಿಮಾಚಲ ಪ್ರದೇಶದ ಮನಾಲಿ ಬಳಿಯ ಸಣ್ಣ ಗ್ರಾಮ ಬುರುವಾ ನಿವಾಸಿ ಸ್ಕೀಯಿಂಗ್ ಆಟಗಾರ್ತಿ ಅಂಚಲ್ ಠಾಕೂರ್ ಮಂಗಳವಾರ ಹೊಸ ಇತಿಹಾಸ ಬರೆದಿದ್ದಾರೆ, ಅವರು ಅಂತರರಾಷ್ಟ್ರೀಯ ಸ್ಕೀಯಿಂಗ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮೊತ್ತ ಮೊದಲ ಪದಕ ಗೆದ್ದು ಕೊಟ್ಟಿದ್ದಾರೆ.

ಅಂಚಲ್ ಠಾಕೂರ್ ಅವರು ಟರ್ಕಿಯಲ್ಲಿ ನಡೆದ ವಿಶ್ವ ಸ್ಕೀಯಿಂಗ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿ ಕಂಚಿನ ಪದಕವನ್ನು ಗೆದ್ದುಕೊಂಡಿದ್ದಾರೆ, ಇಲ್ಲಿಯವರೆಗೂ ಭಾರತ ಸ್ಕೀಯಿಂಗ್ ಕ್ರೀಡೆಯಲ್ಲಿ ಯಾವುದೇ ಅಂತರರಾಷ್ಟ್ರೀಯ ಪದ ಜಯಿಸಿರಲೇ ಇಲ್ಲ. ಭಾರತಕ್ಕೆ ಸ್ಕೀಯಿಂಗ್ ಪದಕ ಗೆದ್ದುಕೊಟ್ಟ ಮೊದಲ ಮಹಿಳೆ ಎಂಬ ಬಿರುದು ಅಂಚುಲ್ ಠಾಕೂರ್ ಅವರ ಹೆಸರಿಗಾಗಿದೆ.

ಯಾವುದೇ ಸರ್ಕಾರದ ಸಹಾಯಗಳಿಲ್ಲದೆ ಸ್ವಂತ ಹಣ ಖರ್ಚು ಮಾಡಿ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದ ಅಂಚಲ್ ಠಾಕೂರ್ ಈಗ ದೇಶದ ಗಮನ ಸೆಳೆದಿದ್ದಾರೆ. ಅಂಚಲ್ ಅವರ ಮೇಲೆ ಅಭಿನಂದನೆಗಳ ಸುರಿಮಳೆಯೇ ಸುರಿಯುತ್ತಿದ್ದು, ರಾಜ್ಯದ ಬಿಜೆಪಿ ಮುಖಂಡ ಯಡಿಯೂರಪ್ಪ ಅವರು ಕೂಡ ಇವರ ಸಾಧನೆಗೆ ಟ್ವಿಟರ್‌ನಲ್ಲಿ ಶಹಭಾಷ್ ಹೇಳಿದ್ದಾರೆ.

ಮಗಳ ಸಾಧನೆಗೆ ಹೆಮ್ಮೆ ವ್ಯಕ್ತಪಡಿಸಿರುವ ತಂದೆ ರೋಷನ್ ಠಾಕೂರ್ ಭಾರತದ ಕ್ರೀಡಾ ಇಲಾಖೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. 'ಕ್ರೀಡಾಕೂಟಕ್ಕೆ ತೆರಳುವ ಮುಂಚೆ ಕ್ರೀಡಾ ಇಲಾಖೆಗೆ ನಾವು ಮನವಿ ಮಾಡಿದ್ದರೂ ಅವರಿಂದ ಸಹಾಯ ದೊರಕಲಿಲ್ಲ, ಅಲ್ಲಿನ ಅಧಿಕಾರಿಗಳಿಗೆ ಸ್ಕಿಯಿಂಗ್ ಎಂಬ ಸ್ಪರ್ಧೆ ಇರುವ ಬಗ್ಗೆಯೇ ತಿಳಿದಿಲ್ಲ' ಎಂದು ಹೇಳಿದ್ದಾರೆ.

ಸ್ಕೀಯಿಂಗ್ ಸ್ಪರ್ಧೆಯಲ್ಲಿ ಕಂಚು ಜಯಿಸುವ ಮೂಲಕ ಓಂಕಾರ ಬರೆದಿರುವ ಅಂಚಲ್ ಮುಂದೆ ಚಿನ್ನದ ಪದಕ ಕೊರಳಿಗೇರಿಸಿಕೊಳ್ಳಲಿ ಎಂಬುದು ದೇಶದ ಕ್ರೀಡಾ ಪ್ರೇಮಿಗಳ ಆಶಯ.

Story first published: Monday, August 27, 2018, 17:46 [IST]
Other articles published on Aug 27, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X