ಆಘಾತಕಾರಿ ಸತ್ಯ ಬಾಯ್ಬಿಟ್ಟ ಭಾರತದ ಅಥ್ಲೀಟ್ ಅಂಜು ಬಾಬಿ ಜಾರ್ಜ್!

ನವದೆಹಲಿ: ಭಾರತದ ಅಥ್ಲೀಟ್, ಲಾಂಗ್ ಜಂಪರ್ ಅಂಜು ಬಾಬಿ ಜಾರ್ಜ್ ಆಘಾತಕಾರಿ ಸತ್ಯವೊಂದನ್ನು ಬಾಯ್ಬಿಟ್ಟಿದ್ದಾರೆ. ತಾನು ತನ್ನ ವೃತ್ತಿ ಬದುಕಿನಲ್ಲಿ ಸಾಧನೆಗಳನ್ನು ಮಾಡಿದ್ದೆಲ್ಲ ಕೇವಲ ಒಂದೇ ಮೂತ್ರಪಿಂಡದೊಂದಿಗೆ (ಕಿಡ್ನಿ) ಎಂದು ಜಾರ್ಜ್ ಹೇಳಿಕೊಂಡಿದ್ದಾರೆ.
ಭಾರತದ ಅಥ್ಲೆಟಿಕ್ಸ್‌ನತ್ತ ಜಗತ್ತು ತಿರುಗಿ ನೋಡುವಲ್ಲಿ ಅಂಜು ಬಾಬಿ ಜಾರ್ಜ್ ಕೊಡುಗೆಯೂ ಇದೆ. 2003ರಲ್ಲಿ ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ ನಡೆದಿದ್ದ ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಜಾರ್ಜ್ ಭಾರತಕ್ಕೆ ಐತಿಹಾಸಿಕ ಕಂಚಿನ ಪದಕ ಗೆದ್ದಿದ್ದರು. ದೇಶಕ್ಕೆ ಜಾರ್ಜ್ ಆ ಪದಕ ಗೆದ್ದಿದ್ದು 1 ಕಿಡ್ನಿಯೊಂದಿಗೆ.
ಟ್ವಿಟರ್ ಮೂಲಕ ಜಾರ್ಜ್ ಈ ಸತ್ಯ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ. 'ನೀವು ನಂಬಿ ಅಥವಾ ಬಿಡಿ. ನಾನು ಅದೃಷ್ಟಶಾಲಿಗಳಲ್ಲೊಬ್ಬಳು. ಕೇವಲ ಒಂದೇ ಕಿಡ್ನಿಯೊಂದಿಗೆ ವಿಶ್ವದ ಟಾಪ್‌ಗೆ ತಲುಪಿದ ಕೆಲವೇ ಕೆಲವು ಮಂದಿಯಲ್ಲಿ ನಾನೂ ಒಬ್ಬಳು. ನನಗೆ ಬಹಳ ಮಿತಿಗಳಿತ್ತು. ಆದರೂ ನಾನು ಸಾಧಿಸಿದೆ. ಇದನ್ನು ನಾವು ಕೋಚ್‌ನ ಮ್ಯಾಜಿಕ್ ಅನ್ನಬಹುದು. ಅಥವಾ ಅವರ ಪ್ರತಿಭೆ ಅನ್ನಬಹುದು,' ಎಂದು ಬರೆದಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅಂಜು, 'ನನಗೆ ಹುಟ್ಟಿನಿಂದಲೇ ಈ ಸಮಸ್ಯೆಯಿತ್ತು. ನನಗೆ ಒಂದೇ ಕಿಡ್ನಿಯಿತ್ತು. ಅದರಿಂದ ಚೇತರಿಸಿಕೊಳ್ಳಲು ನಾನು ಬಹಳ ಪರಿಣಾಮ ಅನುಭವಿಸಿದೆ. 2003ರಲ್ಲಿ ವರ್ಲ್ಡ್ ಚಾಂಪಿಯನ್‌ಶಿಪ್‌ಗೆ 20 ದಿನ ಬಾಕಿಯಿರುವಾಗ ದೇಹ ಊದಿಕೊಂಡಿತ್ತು. ಹಚ್ಚಿನ ಕ್ರೀಡಾಕೂಟಗಳ ವೇಳೆ ನನಗೆ ಸರಿಯಾಗಿ ವಿಶ್ರಾಂತಿ ಮಾಡಲು ಸಮಯ ಸಿಗುತ್ತಿರಲಿಲ್ಲ,' ಎಂದು ವಿವರಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications