ನವದೆಹಲಿ, ಜೂನ್ 26 : ಭಾರತದ ಅಂಕುಶ್ ದಹಿಯಾ ಹಾಗೂ ಎಲ್. ದೇವೇಂದ್ರೊ ಸಿಂಗ್ ಮಂಗೋಲಿಯಾದಲ್ಲಿ ಭಾನುವಾರ ಮುಕ್ತಾಯಗೊಂಡ ಉಲಾನ್ ಬತಾರ್ ಕಪ್ ಬಾಕ್ಸಿಂಗ್ ಟೂರ್ನಿಯಲ್ಲಿ ಕ್ರಮವಾಗಿ ಚಿನ್ನ ಹಾಗೂ ಬೆಳ್ಳಿ ಗೆದ್ದುಕೊಂಡಿದ್ದಾರೆ.
19 ವರ್ಷದ ಅಂಕುಶ್ ಪುರುಷರ 60ಕೆ.ಜಿ ವಿಭಾಗದ ಫೈನಲ್ ನಲ್ಲಿ ಕೊರಿಯಾದ ಮಾನ್ ಚೆ ಚೊಲ್ ಅವರನ್ನು ಮಣಿಸಿದರು. ಈ ಮೂಲಕ ಅಂಕುಶ್ ಸೀನಿಯರ್ ವಿಭಾಗದಲ್ಲಿ ಮೊದಲ ಅಂತಾರಾಷ್ಟ್ರೀಯ ಪ್ರಶಸ್ತಿ ಜಯಿಸಿದರು.

52ಕೆ.ಜಿ ಪುರುಷರ ವಿಭಾಗದಲ್ಲಿ ದೇವೇಂದ್ರೊ ಫೈನಲ್‌ನಲ್ಲಿ ಇಂಡೊನೇಷ್ಯಾದ ಅಲ್ಡಾಮ್ಸ್ ಸುಗುರೊ ವಿರುದ್ಧ ಸೋಲು ಕಂಡರು. ಟೂರ್ನಿಯಲ್ಲಿ ಭಾರತ ಒಂದು ಚಿನ್ನ, ಒಂದು ಬೆಳ್ಳಿ ಹಾಗೂ ಮೂರು ಕಂಚಿನ ಪದಕಗಳನ್ನು ಗೆದ್ದುಕೊಂಡಿದೆ.
49ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಶ್ಯಾಮ್ ಕುಮಾರ್, 56ಕೆ.ಜಿ ವಿಭಾಗದಲ್ಲಿ ಮೊಹಮ್ಮದ್ ಹಸಮುದ್ದೀನ್ ಹಾಗೂ 60ಕೆ.ಜಿ ಮಹಿಳೆಯರ ವಿಭಾಗದಲ್ಲಿ ಪ್ರಿಯಾಂಕಾ ಚೌಧರಿ ಸೆಮಿಫೈನಲ್ ನಲ್ಲಿ ಸೋತು ಕಂಚಿನ ಪದಕಕ್ಕೆ ತೃಪ್ತಿಪಟ್ಟಿದ್ದಾರೆ.