Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Paris Olympics 2024: ಭಾರತದ ಕುಸ್ತಿಗೆ ಮತ್ತೊಂದು ಅಘಾತ; ಯುವ ಕುಸ್ತಿಪಟು ಗಡಿಪಾರು!

ಆಗಸ್ಟ್‌ 8 ಗುರುವಾರ, 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ಕುಸ್ತಿ ಅಭಿಯಾನ ಕೆಟ್ಟದಾಗಿದೆ ಎಂದು ತೋರುತ್ತಿದೆ. ವಿನೇಶ್ ಫೋಗಟ್ ಫೈನಲ್‌ ಪಂದ್ಯಕ್ಕೆ ಅನರ್ಹಗೊಂಡ ಬಳಿಕ ಮತ್ತೊಂದು ಆಘಾತಕಾರಿ ಸುದ್ದಿವೊಂದು ಹೊರ ಬಿದ್ದಿದೆ.

ಮಹಿಳೆಯರ 53 ಕೆಜಿ ಕುಸ್ತಿ ವಿಭಾಗದ ತನ್ನ ಮೊದಲ ಸುತ್ತಿನಲ್ಲಿ ಸೋಲು ಕಂಡಿದ ಆಂಟಿಮ್ ಪಂಗಲ್ ದೊಡ್ಡ ಎಡವಟ್ಟು ಮಾಡಿಕೊಂಡಿದ್ದಾರೆ. ಶಿಸ್ತಿನ ಉಲ್ಲಂಘನೆಗಾಗಿ ಯುವ ಕುಸ್ತಿಪಟು ಆಂಟಿಮ್ ಪಂಗಲ್ ಮತ್ತು ಅವರ ಇಡೀ ತಂಡವನ್ನು ಪ್ಯಾರಿಸ್‌ನಿಂದ ಗಡೀಪಾರು ಮಾಡಲು ನಿರ್ಧರಿಸಲಾಗಿದೆ.

Antim Pangal Deported from 2024 Paris Olympics

ಶಿಸ್ತಿನ ಉಲ್ಲಂಘನೆ ಮಾಡಿರುವ ಬಗ್ಗೆ ಫ್ರಾನ್ಸ್ ಅಧಿಕಾರಿಗಳು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ​​(ಐಒಎ) ಗಮನಕ್ಕೆ ತಂದಿದ್ದಾರೆ. ಇದಾದ ನಂತರ ಕುಸ್ತಿಪಟು ಆಂಟಿಮ್ ಮತ್ತು ಅವರ ಸಹಾಯಕ ಸಿಬ್ಬಂದಿಯನ್ನು ತವರಿಗೆ ಮರಳಲು ಐಒಎ ನಿರ್ಧರಿಸಿದೆ. ಅಂಟಿಮ್ ಪಂಘಲ್‌ ಮತ್ತು ಅವರ ತಂಡವನ್ನು ಗಡೀಪಾರು ಮಾಡುತ್ತಿರುವುದು ಭಾರತಕ್ಕೆ ಬಹಳ ಮುಜುಗರ ಉಂಟು ಮಾಡಿದೆ.

ಆಗಿದ್ದೇನು?

ಹರಿಯಾಣದ 19 ವರ್ಷದ ಆಂಟಿಮ್ ಪಂಘಲ್ ಮೊದಲ ಸುತ್ತಿನ ಪಂದ್ಯದಲ್ಲಿ ಸೋತು ಒಲಿಂಪಿಕ್ಸ್‌ನಿಂದ ಹೊರಬಿದ್ದ ನಂತರ ಗೇಮ್ಸ್ ವಿಲೇಜ್ ತೊರೆದರು. ಬಳಿಕ ತನ್ನ ತರಬೇತುದಾರ ಭಗತ್ ಸಿಂಗ್ ಮತ್ತು ಸಹೋದರಿ ನಿಶಾ ತಂಗಿದ್ದ ಹೋಟೆಲ್‌ಗೆ ಹೋಗಿದರು. ಈ ವೇಳೆ ಆಂಟಿಮ್ ತನ್ನ ಅಧಿಕೃತ ಮಾನ್ಯತೆಯ ಕಾರ್ಡ್ ಅನ್ನು ಸಹೋದರಿಗೆ ನೀಡಿದ್ದು, ವಿಲೇಜ್‌ಯಿಂದ
ತನ್ನ ವಸ್ತುಗಳನ್ನು ತರುವಂತೆ ಹೇಳಿದ್ದಾರೆ.

ಹೀಗಾಗಿ ಆಂಟಿಮ್‌ನ ಸಹೋದರಿ ಅಧಿಕೃತ ಮಾನ್ಯತೆಯ ಗುರುತಿನ ಕಾರ್ಡ್‌ ಮೂಲಕ ಗೇಮ್ಸ್ ವಿಲೇಜ್ ಪ್ರವೇಶಿಸಿದ್ದಾರೆ. ನಂತರ ವಸ್ತುಗಳನ್ನು ತೆಗೆದುಕೊಂಡು ಹೊರ ಬರುವ ವೇಳೆ ಅಧಿಕಾರಿಗಳಿಗೆ ಸಿಕ್ಕಿ ಬಿದ್ದಿದ್ದಾರೆ. ತಕ್ಷಣ ಪೊಲೀಸರು ನಿಶಾಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ನಿಯಮ ಉಲ್ಲಂಘನೆ ಮಾಡಿರುವುದು ಬೆಳಕಿಗೆ ಬಂದಿದೆ.

ಬುಧವಾರ ನಡೆದ 53 ಕೆಜಿ ಕುಸ್ತಿ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಟರ್ಕಿಯ ಝೆನೆಪ್ ಯೆಟ್ಗಿಲ್‌ ವಿರುದ್ಧ ಆಂಟಿಮ್ ಪಂಗಲ್ ಸೋತಿದ್ದರು. ಇದಕ್ಕೂ ಮೊದಲು ತೂಕ ಹೆಚ್ಚಾದ ಕಾರಣ ವಿನೇಶ್ ಫೋಗಟ್ ಪ್ಯಾರಿಸ್ ಒಲಿಂಪಿಕ್ಸ್‌ನಿಂದ ಅನರ್ಹಗೊಂಡಿದ್ದರಿಂದ ಭಾರತದ ಕುಸ್ತಿ ಭಾರಿ ಹೊಡೆತವನ್ನು ಅನುಭವಿಸಿತು.

ವಿನೇಶ್ ಅವರು ಫೈನಲ್‌ನಲ್ಲಿ ಸ್ಥಾನ ಪಡೆಯುವ ಮೂಲಕ ದೇಶಕ್ಕೆ ಬೆಳ್ಳಿ ಅಥವಾ ಚಿನ್ನದ ಪದಕವನ್ನು ಖಚಿತಪಡಿಸಿದ್ದರು. ಆದರೆ ಅವರ ಅನರ್ಹತೆಯು ಪದಕದ ಆಸೆ ಪೆಟ್ಟು ನೀಡಿತ್ತು. ಭಾರತವು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಇದುವರೆಗೆ ಯಾವುದೇ ಬೆಳ್ಳಿ ಅಥವಾ ಚಿನ್ನವನ್ನು ಗೆದ್ದಿಲ್ಲ. ಕೇವಲ ಮೂರು ಕಂಚಿನ ಪದಕಕ್ಕೆ ತೃಪ್ತಿಪಟ್ಟಿದೆ.

Story first published: Thursday, August 8, 2024, 11:23 [IST]
Other articles published on Aug 8, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+