10 ಮೀ. ಏರ್ ರೈಫಲ್‌ನಲ್ಲಿ ಅಪೂರ್ವಿ ಚಂದೇಲಾಗೆ ವಿಶ್ವ ನಂ.1 ಪಟ್ಟ

ನವದೆಹಲಿ, ಮೇ 1: ಭಾರತದ ಖ್ಯಾತ ಶೂಟರ್ ಅಪೂರ್ವಿ ಚಂದೇಲಾ, ಬುಧವಾರ (ಮೇ 1) ಇಂಟರ್ ನ್ಯಾಷನಲ್ ಶೂಟಿಂಗ್ ಸ್ಪೋರ್ಟ್ಸ್ ಫೆಡರೇಶನ್ (ಐಎಸ್‌ಎಸ್‌ಎಫ್) ಪ್ರಕಟಿಸಿರುವ ನೂತನ ರ್ಯಾಂಕಿಂಗ್‌ನಲ್ಲಿ ಮಹಿಳಾ ವಿಭಾಗದ 10 ಮೀ. ಏರ್ ರೈಫಲ್‌ನಲ್ಲಿ ನಂ.1 ಸ್ಥಾನ ಅಲಂಕರಿಸಿದ್ದಾರೆ.
ಜೈಪುರ್‌ನವರಾದ ಅಪೂರ್ವಿ 2020ರ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡ ಭಾರತದ ಐದು ಶೂಟರ್‌ಗಳಲ್ಲಿ ಒಬ್ಬರಾಗಿದ್ದಾರೆ. ಫೆಬ್ರವರಿಯಲ್ಲಿ ನಡೆದ ಐಎಸ್‌ಎಸ್‌ಎಫ್ ವರ್ಲ್ಡ್ ಕಪ್ ಕ್ರೀಡಾಕೂಟದಲ್ಲಿ ಅಪೂರ್ವಿ 252.9 ಪಾಯಿಂಟ್‌ಗಳೊಂದಿಗೆ ಭಾರತಕ್ಕೆ ಬಂಗಾರ ಗೆದ್ದಿದ್ದರು.
2014ರ ಗ್ಲಾಸ್ಗೋ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ ಮತ್ತು 2018ರ ಗೋಲ್ಡ್‌ಕೋಸ್ಟ್ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಅಪೂರ್ವಿ ಕಂಚು ಜಯಿಸಿದ್ದರು. ಸದ್ಯ 1926 ರೇಟಿಂಗ್ ಪಾಯಿಂಟ್‌ನೊಂದಿಗೆ ಚಂದೇಲಾ ಅಗ್ರ ಸ್ಥಾನದಲ್ಲಿದ್ದಾರೆ. ಭಾರತದವರೇ ಆದ ಅಂಜುಮ್ ಮೌಡ್ಗಿಲ್ 1695 ಪಾಯಿಂಟ್‌ನೊಂದಿಗೆ ಇದೇ ವಿಭಾಗದಲ್ಲಿ ವಿಶ್ವ ನಂ.2ನೇ ಸ್ಥಾನದಲ್ಲಿದ್ದಾರೆ.
Story first published: Wednesday, May 1, 2019, 22:45 [IST]
Other articles published on May 1, 2019
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications